AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಂಡಿಂಗ್‌ ವೇಳೆ ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ; ಕ್ಷಮೆ ಯಾಚಿಸಿದ ಏರ್ ಇಂಡಿಯಾ

ಹೈದರಾಬಾದ್-ಫುಕೆಟ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಹಾರ್ಡ್ ಲ್ಯಾಂಡಿಂಗ್ ವೇಳೆ ವಿಮಾನದ ಮುಂಭಾಗದ ಚಕ್ರ ಮುರಿದುಹೋಗಿದೆ. ಇಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿದ ನಂತರ ಅದರ ನೋಸ್ ವೀಲ್ ಸಮಸ್ಯೆಯನ್ನು ಅನುಭವಿಸಿತು. ಈ ಘಟನೆಯ ನಂತರ ಫುಕೆಟ್ ವಿಮಾನ ನಿಲ್ದಾಣದ ರನ್‌ವೇಯನ್ನು ಮುಚ್ಚಲಾಯಿತು. ಈ ಘಟನೆಯ ಬಗ್ಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆಯನ್ನು ಪ್ರಾರಂಭಿಸಿದೆ.

ಲ್ಯಾಂಡಿಂಗ್‌ ವೇಳೆ ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ; ಕ್ಷಮೆ ಯಾಚಿಸಿದ ಏರ್ ಇಂಡಿಯಾ
Air India Express
ಸುಷ್ಮಾ ಚಕ್ರೆ
|

Updated on: Mar 11, 2026 | 7:35 PM

Share

ಫುಕೆಟ್, ಮಾರ್ಚ್ 11: ಹೈದರಾಬಾದ್‌ನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಇಂದು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿತು. ಇದರ ಪರಿಣಾಮವಾಗಿ ಅದರ ನೋಸ್ ಗೇರ್‌ಗೆ ಭಾರೀ ಹಾನಿಯಾಗಿದೆ. ಈ ಘಟನೆಯ ನಂತರ, ವಿಮಾನ ನಿಲ್ದಾಣದ ಅಧಿಕಾರಿಗಳು ಹಲವು ಗಂಟೆಗಳ ಕಾಲ ರನ್‌ವೇಯನ್ನು ಮುಚ್ಚಲಾಯಿತು. ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಅನುಭವಿಸಿತು. ವಿಮಾನದ ಮುಂಭಾಗದ ಚಕ್ರ ಮುರಿದು ವಿಮಾನವು ರನ್‌ವೇ ಉದ್ದಕ್ಕೂ ಜಾರಿತು ಎಂದು ಮೂಲಗಳು ತಿಳಿಸಿವೆ. ಇದರ ಫೋಟೋಗಳು, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಆ ಪ್ರದೇಶವನ್ನು ಸುರಕ್ಷಿತಗೊಳಿಸಲು ಮತ್ತು ವಿಮಾನದಲ್ಲಿದ್ದವರ ಸುರಕ್ಷತೆಗಾಗಿ ಕೂಡಲೆ ಸ್ಥಳಕ್ಕೆ ಧಾವಿಸಿದರು.

ಇದನ್ನೂ ಓದಿ: Video: ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ, ಫುಕೆಟ್​ನ ರನ್​ವೇನಲ್ಲಿ ಸಿಲುಕಿದ ಏರ್ ಇಂಡಿಯಾ

“ಮಾರ್ಚ್ 11ರಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುವ ವಿಮಾನವು ಸಮಸ್ಯೆಯನ್ನು ಅನುಭವಿಸಿತು. ಫುಕೆಟ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ನೋಸ್ ವೀಲ್ (ಮುಂಭಾಗದ ಚಕ್ರ) ಸಮಸ್ಯೆ ಅನುಭವಿಸಿತು” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಮಾನದಲ್ಲಿ 131 ಪ್ರಯಾಣಿಕರು, ಇಬ್ಬರು ಮಕ್ಕಳು ಮತ್ತು 7 ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ವಿಮಾನವು ಹಾರ್ಡ್ ಲ್ಯಾಂಡಿಂಗ್ ಮಾಡಿರುವುದರಿಂದ ನೋಸ್ ವೀಲ್‌ಗೆ ಹಾನಿಯಾಗಿದೆ ಎಂದು ಕಂಡುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?