Drone Pakora: ಪಾಕ್ ಡ್ರೋನ್ ದಾಳಿಯ ನಡುವೆ ವೈರಲ್ ಆಗ್ತಿದೆ ಡ್ರೋನ್ ಪಕೋಡಾ
ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಆತಂಕದ ನಂತರ ಕದನ ವಿರಾಮ ಘೋಷಣೆಯಾಗಿತ್ತು. ಹೀಗಿದ್ದರೂ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿಯನ್ನು ಜಾಹೀರು ಮಾಡಿ, ಕದನ ವಿರಾಮದ ನಡುವೆಯೂ ಡ್ರೋನ್ ದಾಳಿ ಮಾಡಿತ್ತು. ಈ ಡ್ರೋನ್ ದಾಳಿಯ ನಡುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪಕೋಡಾದ ಫೋಟೋವೊಂದು ವೈರಲ್ ಆಗುತ್ತಿದ್ದು, ಇದು ಇದು ಏರ್ ಡಿಫೆನ್ಸ್ ರೆಜಿಮೆಂಟ್‌ನ ಹೊಸ ತಿಂಡಿ ಎಂದ ನಿವೃತ್ತ ಲೆಫ್ಟಿನೆಂಟ್ ಜನರಲ್ ಧಿಲ್ಲನ್ ತಮಾಷೆ ಮಾಡಿದ್ದಾರೆ.

ಅಮೆರಿಕ ಮಧ್ಯಸ್ಥಿಕೆಯ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ವಿರಾಮ ಘೋಷಣೆಯಾಗಿತ್ತು. ಕದನ ವಿರಾಮ ಜಾರಿಯಿದ್ದರೂ ಮೇ 10 ರಂದು ಅಂದರೆ ನಿನ್ನೆ ತನ್ನ ಕುತಂತ್ರ ಬುದ್ಧಿಯಿಂದ ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ದಾಳಿ (Drone attack) ನಡೆಸಿ, ಹಳೇ ಚಾಳಿಯನ್ನು ಮುಂದುವರೆಸಿದೆ. ಈ ಡ್ರೋನ್ ದಾಳಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಡ್ರೋನ್ ಪಕೋಡಾದ (Drone Pakora) ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ತಮಾಷೆಯ ಫೋಟೋವನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲನ್ (Lieutenant General Dhillon) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ʼಡ್ರೋನ್ ಪಕೋಡಾ, ಇದು ಭಾರತದ ಏರ್ ಡಿಫೆನ್ಸ್ ರೆಜಿಮೆಂಟ್‌ನ ಹೊಸ ಬಗೆಯ ಸ್ನ್ಯಾಕ್ಸ್ ಎಂದು ತಮಾಷೆ ಮಾಡಿದ್ದಾರೆ.
ಪಾಕ್ ಡ್ರೋನ್ ದಾಳಿಯ ನಡುವೆ ವೈರಲ್ ಆಗ್ತಿದೆ ಡ್ರೋನ್ ಪಕೋಡಾ:
ಒಂದೆಡೆ ಪಾಕ್ ಯುದ್ಧ ವಿರಾಮದ ನಡುವೆಯೂ ಡ್ರೋನ್ ದಾಳಿ ಮಾಡಿದ್ರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪಕೋಡಾದ ಫೋಟೋ ಭಾರೀ ವೈರಲ್ ಆಗುತ್ತಿದೆ. ಪಾಕಿಸ್ತಾನ ತನ್ನ ಡ್ರೋನ್ ದಾಳಿ ನಡೆಸಿ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದ ಬಳಿಕ ಈ ಡ್ರೋನ್ ಪಕೋಡಾದ ಫೋಟೋವನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲನ್ (KJS DHILLON) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಪಾಕಿಸ್ತಾನದ ಕಾಲೆಳೆದಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲನ್ ತಮ್ಮ ಅಧೀಕೃತ ಎಕ್ಸ್ ಖಾತೆಯಾದ KJS DHILLON ಪೇಜ್‌ನಲ್ಲಿ ಡ್ರೋನ್ ಪಕೋಡಾದ ಫೋಟೋವನ್ನು ಶೇರ್ ಮಾಡಿ “ಡ್ರೋನ್ ಪಕೋಡಾ; ಇದು ಭಾರತದ ಏರ್ ಡಿಫೆನ್ಸ್ ರೆಜಿಮೆಂಟ್‌ನ ಹೊಸ ಬಗೆಯ ಸ್ನಾಕ್ಸ್, ಜೈ ಹಿಂದ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತೀಯರ ಫೇವರೆಟ್ ಫುಡ್ ಬಿರಿಯಾನಿಗೆ ಈ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಪೋಸ್ಟ್ ಇಲ್ಲಿದೆ ನೋಡಿ:
Drone Pakoras
A new snack in Air Defence Regiments
Jai Hind 🇮🇳 PC : www pic.twitter.com/UMuIus8R1k
— KJS DHILLON🇮🇳 (@TinyDhillon) May 11, 2025
ಮೇ 11 ರಂದು ಶೇರ್ ಮಾಡಲಾದ ಈ ಪೋಸ್ಟ್ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಸೈನಿಕರು ಚೀನಿ ಮತ್ತು ಟರ್ಕಿಶ್ ಡ್ರೋನ್‌ಗಳನ್ನು ಈಗಾಗ್ಲೆ ತಿಂದು ಹಾಕಿದ್ದಾರೆʼ ಎಂಬ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಇನ್ನೊಬ್ಬ ಬಳಕೆದಾರರು ʼಮತ್ತೆ ನಮ್ಮ ಭಾರತದ ಸೇನೆ ಅಂದ್ರೆ ಸುಮ್ನೇನಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಇದನ್ನು ಭಾರತದೊಳಗಿದ್ದು, ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವವರಿಗೆ ತಿನ್ನಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇದು ತುಂಬಾ ತಮಾಷೆಯಾಗಿದೆ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








