ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರು
ಭಾರತೀಯ ರೈಲ್ವೆಗೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಕೆಲವು ಪ್ರಯಾಣಿಕರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಾ ಪ್ರಯಾಣಿಸುತ್ತಾರೆ. ಇದೀಗ ಮಹಿಳೆಯರು ತಮ್ಮ ಪ್ರಾಣವನ್ನು ಕೈಯಲ್ಲೇ ಹಿಡಿದುಕೊಂಡು ಪ್ರಯಾಣಿಸುತ್ತಿರುವ ಅಪಾಯಕಾರಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂಬೈ, ಮೇ 13: ಭಾರತೀಯ ರೈಲ್ವೆ (india railway) ಪ್ರಯಾಣವು ವೆಚ್ಚದಲ್ಲಿ ಅಷ್ಟೇನು ದುಬಾರಿಯಲ್ಲದ ಇದನ್ನು ಓಡಾಟಕ್ಕಾಗಿ ಬಳಸಿಕೊಂಡಿದ್ದಾರೆ. ಹೌದು, ದೆಹಲಿ ಹಾಗೂ ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ತಮ್ಮ ದಿನನಿತ್ಯದ ಓಡಾಟಕ್ಕಾಗಿ ರೈಲನ್ನೇ ಅವಲಂಬಿಸಿಕೊಂಡವರು ಹೆಚ್ಚೇ ಎನ್ನಬಹುದು. ಆದರೆ ರೈಲಿನಲ್ಲಿ ಪ್ರಯಾಣಿಸುವವರು ಹೆಚ್ಚಿರುವ ಕಾರಣ ನೂಕುನುಗ್ಗಲು, ತಳ್ಳಾಟಗಳು ನಡೆಯುತ್ತಿರುತ್ತದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ಅಪಾಯಕಾರಿ ರೈಲ್ವೆ ಪ್ರಯಾಣ ಕಂಡು ಶಾಕ್ ಆಗಿದ್ದಾರೆ. ಮುಂಬೈ (mumbai) ನ ಕಲ್ಯಾಣದಿಂದ ಹೊರಟಿದ್ದ ಮಹಿಳಾ ವಿಶೇಷ ಲೋಕಲ್ ರೈಲಿ (ladies special local train) ನಲ್ಲಿ ಈ ರೀತಿ ಅಪಾಯಕಾರಿ ದೃಶ್ಯವು ಕಂಡು ಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪ್ರಾಣದ ಜೊತೆಗೆ ಚೆಲ್ಲಾಟ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
@mumbairailusers ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ‘ಕಲ್ಯಾಣ್ ನಿಂದ ಇಂದಿನ ಮಹಿಳಾ ವಿಶೇಷ ಲೋಕಲ್ ರೈಲು 40 ನಿಮಿಷಗಳ ಕಾಲ ವಿಳಂಬವಾಯಿತು. ಇದರಿಂದಾಗಿ ಮಹಿಳೆಯರು ಫುಟ್ ಬೋರ್ಡ್ ನಲ್ಲಿ ನೇತಾಡಬೇಕಾಯಿತು – ಇದು ಅಸುರಕ್ಷಿತ ಹಾಗೂ ಅಪಾಯಕಾರಿ ಪ್ರಯಾಣ. ಇದು ಅಪಾಯಕಾರಿಯಾಗಿದ್ದರೂ ಈ ವಿಳಂಬವು ಮುಂದುವರೆದಿದೆ. ಅಶ್ವಿನಿ ವೈಷ್ಣವ್ ದಯವಿಟ್ಟು ರೈಲು ವಿಳಂಬವಾಗುವುದರ ಬಗ್ಗೆ ಪರಿಶೀಲಿಸಿ’ ಎಂದು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
#ViralVideo #CRFixLocalTrainDelays Today’s Ladies Special from Kalyan was delayed by 40 mins, forcing women to hang on the footboard—an unsafe and risky commute. Railways term this dangerous, yet delays continue. @AshwiniVaishnaw pls review delay data. @MumRail @rajtoday pic.twitter.com/vnhxTIyFD6
— Mumbai Railway Users (@mumbairailusers) May 9, 2025
ಈ ವಿಡಿಯೋದಲ್ಲಿ ರೈಲು ವಿಳಂಬವಾಗಿ ಬಂದ ಕಾರಣ ರೈಲು ಹತ್ತಲು ನೂಕುನುಗ್ಗಲು ಏರ್ಪಟ್ಟಿರುವುದನ್ನು ಕಾಣಬಹುದು. ಕೆಲ ಮಹಿಳೆಯರು ಬಾಗಿಲಿನ ಫುಟ್ ಬೋರ್ಡ್ ನಲ್ಲಿ ನಿಂತು ನೇತಾಡುತ್ತಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದಿರುವುದಕ್ಕೆ ರೈಲ್ವೆ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಚಾಟ್ ಜಿಪಿಟಿನಿಂದಲೇ ಗಂಡ ಕುಡಿದ ಕಾಫಿ ಕಪ್ ವಿಶ್ಲೇಷಣೆ ಮಾಡಿದ ಮಹಿಳೆ, ಮುರಿದೇ ಬಿತ್ತು ದಾಂಪತ್ಯ ಜೀವನ
ಈ ವಿಡಿಯೋವೊಂದು ಒಂದು ಲಕ್ಷ ಎಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡು ಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳು ಮಾಡುವ ಈ ರೀತಿ ಪ್ರಯಾಣ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇದು ಮುಂಬೈ ಪ್ರಯಾಣಿಕರ ನಿತ್ಯದ ಪಾಡು, ದಿನನಿತ್ಯ ರೈಲಿನಲ್ಲಿ ಈ ರೀತಿ ಹೋರಾಡುತ್ತಾರೆ. ಆದರೆ ಮಹಾರಾಷ್ಟ್ರ ಸರ್ಕಾರವು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ಇದು ಕೇವಲ ವಿಳಂಬವಲ್ಲ, ಇದು ದೈನಂದಿನ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ