ಮಹಾಭಾರತ ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಗೊತ್ತಾ?
ಪ್ರಾಚೀನ ಕಾಲದಲ್ಲಿ ಭಾರತವು ಅಖಂಡವಾಗಿತ್ತು. ಕಾಲ ಕಳೆದಂತೆ ಬ್ರಿಟೀಷರ ಆಳ್ವಿಕೆಯ ನಂತರ ಹಾಗೂ ಸ್ವಾತಂತ್ರ್ಯದ ನಂತರ ಅಖಂಡವಾಗಿದ್ದ ಭಾರತ ಒಂದೊಂದೇ ತುಂಡಾಗಿ ಪ್ರತ್ಯೇಕ ಭಾಗಗಳಾಗಿ ಹೋಯಿತು. ಈಗಲೂ ಕೂಡಾ ಭಾರತ ಅಖಂಡವಾಗಬೇಕು ಎಂಬ ಕೂಗು ಕೇಳಿ ಬರುತ್ತಲೇ ಇವೆ. ಹಿಂದೆ ಅಖಂಡ ಭಾರತ ಅದೆಷ್ಟು ವಿಶಾಲವಾಗಿತ್ತು ಗೊತ್ತಾ? ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಾಭಾರತ ಕಾಲದ ಅಖಂಡ ಭಾರತದ ನಕ್ಷೆಯ ಫೋಟೋ ಇದಾಗಿದೆ.

ಹಿಂದೆಯಿದ್ದಂತೆ ಭಾರತ (India) ಮತ್ತೊಮ್ಮೆ ಅಖಂಡವಾಗಬೇಕು, ಅಖಂಡ ಭಾರತದ ಸಂಕಲ್ಪ (Akhand Bharat) ಸಾಕಾರಗೊಳ್ಳಲೇಬೇಕು ಎಂಬುದು ಅದೆಷ್ಟೋ ಭಾರತೀಯರ ಕನಸು. ಒಂದು ಕಾಲದಲ್ಲಿ ಈಗಿನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಟಿಬೆಟ್, ಭೂತಾನ್, ಮಯನ್ಮಾರ್, ಮಾಲ್ಡಿವ್ಸ್, ಶ್ರೀಲಂಕಾ ಇವೆಲ್ಲಾ ಅಖಂಡ ಭಾರತದ ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಕಾಲ ಕಳೆದಂತೆ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಹಾಗೂ ಸ್ವಾತಂತ್ರ್ಯ ನಂತರ ಭಾರತ ಒಂದೊಂದೆ ತುಂಡಾಗಿ ಪ್ರತ್ಯೇಕ ರಾಷ್ಟ್ರಗಳಾಗುತ್ತಾ ಹೋಯಿತು. ಈಗಿರುವ ಭಾರತ ಹಾಗೂ ಅಖಂಡವಾಗಿದ್ದ ಭಾರತದ ನಕ್ಷೆಯನ್ನು ನೀವು ನೋಡೇ ಇರುತ್ತೀರಿ ಅಲ್ವಾ. ಆದ್ರೆ ಮಹಾಭಾರತದ (Mahabharat) ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಗೊತ್ತಾ? ಯಾವ ರಾಜ್ಯವನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು ಗೊತ್ತಾ? ಈ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಾಭಾರತ ಕಾಲದ ಅಖಂಡ ಭಾರತದ ಭೂಪಟ ಹೇಗಿದೆ ನೋಡಿ:
ಮಹಾಭಾರತದ ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಎಂದು ತೋರಿಸುವ ನಕ್ಷೆಯ ಫೋಟೋವನ್ನು ದವಲತ್ರಾಯ ಬಸಪ್ಪ ವಡವಡಗಿ (Doulatray Wadawadagi) ಎಂಬವರು ತಮ್ಮ ಪೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಮಹಾಭಾರತದ ಕಾಲದಲ್ಲಿನ ಅಖಂಡ ಭಾರತ ಎಷ್ಟು ವಿಶಾಲವಾಗಿತ್ತು ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ವಧು ಆಯ್ಕೆ ಮಾಡುವ ಲೆಹೆಂಗಾದ ಬಣ್ಣವು ಬಹಿರಂಗ ಪಡಿಸುತ್ತೆ ಆಕೆಯ ವ್ಯಕ್ತಿತ್ವ, ಗುಣ ಸ್ವಭಾವ
ಪೋಸ್ಟ್ ಇಲ್ಲಿದೆ ನೋಡಿ:
ಕಿಷ್ಕಿಂದಾದಿಂದ ಹಿಡಿದು ಗಾಂಧಾರ, ಕಾಂಭೋಜದ ತನಕ ದ್ವಾರಕಾದಿಂದ ಹಿಡಿದು ಪ್ರಾಗ್ಜೋತಿಷದ ವರೆಗೆ ಅಖಂಡ ಭಾರತ ಎಷ್ಟು ವಿಶಾಲವಾಗಿತ್ತು ಎಂಬುದನ್ನು ಈ ನಕ್ಷೆಯಲ್ಲಿ ತೋರಿಸಲಾಗಿದೆ.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಖಂಡ ಭಾರತ ನಿಜಕ್ಕೂ ಸುಂದರವಾಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ನಿಜವೇʼ ಎಂದು ಕೇಳಿದ್ದಾರೆ. ಇನ್ನೂ ಅನೇಕರು ಮಹಾಭಾರತ ಕಾಲದ ಭಾರತದ ನಕ್ಷೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ