AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ವಧು ಆಯ್ಕೆ ಮಾಡುವ ಲೆಹೆಂಗಾದ ಬಣ್ಣವು ಬಹಿರಂಗ ಪಡಿಸುತ್ತೆ ಆಕೆಯ ವ್ಯಕ್ತಿತ್ವ, ಗುಣ ಸ್ವಭಾವ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ, ಪಾದದ ಆಕಾರ, ಕೈ ಬೆರಳುಗಳ ಆಕಾ, ಕಣ್ಣಿನ ಬಣ್ಣ, ಮೂಗಿನ ಆಕಾರ ಸೇರಿದಂತೆ ದೇಹಾಕಾರದ ಮೂಲಕ ನೀವು ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ, ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ನೀವು ನಿಮ್ಮಿಷ್ಟದ ಬಣ್ಣದ ಲೆಹಂಗಾವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿಬಹುದು. ಹೌದು ಕೆಂಪು, ನೀಲಿ, ನೇರಳೆ ಹೀಗೆ ನಿಮಗೆ ಯಾವ ಬಣ್ಣದ ಲೆಹೆಂಗಾ ಇಷ್ಟವೆಂಬ ಆಧಾರದ ಮೇಲೆ ನಿಮ್ಮ ರಹಸ್ಯ ಗುಣ ಸ್ವಭಾವ ತಿಳಿದುಕೊಳ್ಳಿ.

Personality Test: ವಧು ಆಯ್ಕೆ ಮಾಡುವ ಲೆಹೆಂಗಾದ ಬಣ್ಣವು ಬಹಿರಂಗ ಪಡಿಸುತ್ತೆ ಆಕೆಯ ವ್ಯಕ್ತಿತ್ವ, ಗುಣ ಸ್ವಭಾವ
ವ್ಯಕ್ತಿತ್ವ ಪರೀಕ್ಷೆImage Credit source: Getty Images
ಮಾಲಾಶ್ರೀ ಅಂಚನ್​
|

Updated on: May 13, 2025 | 4:02 PM

Share

ಲೆಹೆಂಗಾ (Lehenga) ಅಂದ್ರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲಿ ಕೆಲವರಿಗೆ ಕೆಂಪು ಬಣ್ಣದ ಲೆಹೆಂಗಾ ಇಷ್ಟವಾದರೆ, ಕೆಲವರಿಗೆ ಹಸಿರು ಬಣ್ಣದ ಲೆಹೆಂಗಾ ಅಂದ್ರೆ ಬಲು ಇಷ್ಟವಾಗುತ್ತದೆ. ತಮ್ಮ ಮದುವೆ ಅಥವಾ ಇತರೆ ಸಮಾರಂಭಗಳ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮಿಷ್ಟದ ಬಣ್ಣದ ಲೆಹೆಂಗಾವನ್ನು ಆಯ್ಕೆ ಮಾಡುತ್ತಾರೆ. ಹೀಗೆ ನೀವು ಆಯ್ಕೆ ಮಾಡುವ ಲೆಹೆಂಗಾದ ಬಣ್ಣದ (color) ಆಧಾರದ ಮೇಲೂ ನಿಮ್ಮ ಗುಣ ಸ್ವಭಾವವನ್ನು ತಿಳಿಯಬಹುದಂತೆ. ಹೌದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ, ದೇಹಾಕಾರಗಳ ಮೂಲಕ ವ್ಯಕ್ತಿತ್ವವನ್ನು (Personality) ಪರೀಕ್ಷಿಸುವಂತೆ ನಿಮ್ಮ ನೆಚ್ಚಿನ ಲೆಹೆಂಗಾದ ಬಣ್ಣದಿಂದಲೂ ನೀವು ನಿಮ್ಮ ನಿಗೂಢ ವ್ಯಕ್ತಿತ್ವವನ್ನು, ಗುಣ ಸ್ವಭಾವವನ್ನು ಪರೀಕ್ಷಿಸಬಹುದು. ಕೆಂಪು, ಹಸಿರು, ನೇರಳೆ ಇದರಲ್ಲಿ ನೆಚ್ಚಿನ ಬಣ್ಣದ ಲೆಹೆಂಗಾ ಯಾವುದೆಂದು ಆಯ್ಕೆ ಮಾಡಿ ನಿಮ್ಮ ಗುಣ ಸ್ವಭಾವವನ್ನು ಪರೀಕ್ಷಿಸಿ.

ನಿಮ್ಮಿಷ್ಟದ  ಬಣ್ಣದ ಲೆಹೆಂಗಾದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು:

ಕೆಂಪು ಬಣ್ಣದ ಲೆಹೆಂಗಾ:

ಮದುವೆಯಲ್ಲಿ ಸಂಪ್ರದಾಯದಂತೆ ಹೆಚ್ಚಿನ ವಧು ಕೆಂಪು ಬಣ್ಣದ ಲೆಹಾಂಗವನ್ನು ಧರಿಸುತ್ತಾರೆ. ವಧು ಮಾತ್ರವಲ್ಲದೆ ಇತರೆ ಹೆಂಗಳೆಯರಿಗೂ ಕೆಂಪು ಬಣ್ಣದ ಲೆಹೆಂಹಾ ಅಂದ್ರೆ ಬಹಳ ಇಷ್ಟ. ಈ ಬಣ್ಣದ ಲೆಹೆಂಗಾ ಇಷ್ಟಪಡುವವರು ನಮ್ಮ ಸಂಸ್ಕೃತಿ ಪರಪಂಪರೆಯನ್ನು ಇಷ್ಟಪಡುವರಾಗಿರುತ್ತಾರೆ. ಅಲ್ಲದೆ ಇವರುಗಳು ಜನರ ಗಮನವನ್ನು ಸೆಳೆಯುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ. ಜೊತೆಗೆ ಕೆಂಪು ಬಣ್ಣದ ಲೆಹೆಂಗಾವನ್ನು ಇಷ್ಟಪಡುವವರು ಜೀವನದಲ್ಲಿ ತುಂಬಾನೇ ಉತ್ಸಾಹಭರಿತರಾಗಿರುತ್ತಾರೆ ಮತ್ತು ಜನರಿಂದ ಗೌರವವನ್ನು ಬಯಸುತ್ತಾರೆ.

ಪೇಸ್ಟಲ್‌ ಕಲರ್ ಲೆಹೆಂಗಾ:‌

ಬ್ಲಶ್‌ ಪಿಂಕ್‌, ಲ್ಯಾವೆಂಡರ್‌, ಮಿಂಟ್‌ ಗ್ರೀನ್‌ನಂತಹ ಪೇಸ್ಟಲ್‌ ಕಲರ್‌ ಲೆಹೆಂಗಾ ಅಂದ್ರೆ ಹಲವು ಮಂದಿಗೆ ಇಷ್ಟ. ತಾವು ಹೆಚ್ಚಾಗಿ ಪೇಸ್ಟಲ್‌ ಕಲರ್‌ ಲೆಹೆಂಗಾವನ್ನೇ ಧರಿಸಲು ಇಷ್ಟಪಡುತ್ತಾರೆ. ಈ ಬಣ್ಣದ ಲೆಹೆಂಗಾವನ್ನು ಇಷ್ಟಪಡುವವರು ಜೀವನದಲ್ಲಿ ಪ್ರಶಾಂತತೆ ಮತ್ತು ನೆಮ್ಮದಿಯನ್ನು ಬಯಸುವವರಾಗಿರುತ್ತಾರೆ. ಈ ಬಣ್ಣದ ಲೆಹೆಂಗಾ ವಿಶೇಷವಾಗಿ ವಧುವಿಗೆ ಸರಳ ಮತ್ತು ಸುಂದರ ನೋಟವನ್ನು ಒದಗಿಸುವುದಂತು ನಿಜ.

ಇದನ್ನೂ ಓದಿ
Image
ಮದುವೆಯ ಬಳಿಕ ತೂಕ ಹೆಚ್ಚಾಗಬಾರದೆಂದರೆ ಹೀಗೆ ಮಾಡಿ
Image
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ
Image
ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ಯಾವುದು?
Image
ನಿಮ್ಮ ಪಾದದ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ

ರಾಯಲ್‌ ಬ್ಲೂ ಕಲರ್‌ ಲೆಹೆಂಗಾ:

ಗಾಢ ನೀಲಿ ಅಂದರೆ ರಾಯಲ್‌ ಬ್ಲೂ ಲೆಹೆಂಗಾವನ್ನು ಧರಿಸಲು ಇಷ್ಟ ಪಡುವ ವಧು ಅಥವಾ ಯಾರೇ ಆದರೂ ಆತ್ವವಿಶ್ವಾಸ, ಶಕ್ತಿಶಾಲಿ ಸ್ವಭಾವವನ್ನು ಹೊಂದಿರುತ್ತಾರೆ. ಮದುವೆಯಲ್ಲಿ ಎದ್ದು ಕಾಣಲು ಮತ್ತು ಆಕರ್ಷಣೆಯ ಕೇಂದ್ರ ಬಿಂದುವಾಗಿರಲು ರಾಯಲ್‌ ಬ್ಲೂ ಬಣ್ಣದ ಲೆಹೆಂಗಾ ಒಂದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ನಿಮ್ಮ ಪಾದ ಚಪ್ಪಟೆಯಾಗಿದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ, ಸ್ವಭಾವ ಹೀಗಿರುತ್ತೆ ನೋಡಿ

ನೇರಳೆ ಬಣ್ಣದ ಲೆಹೆಂಗಾ:

ಕೆಲವರಿಗೆ ನೇರಳೆ ಬಣ್ಣದ ಲೆಹೆಂಗಾ ಅಂದರೆ ಬಲು ಇಷ್ಟ. ಈ ಬಣ್ಣದ ಲೆಹೆಂಗಾವನ್ನು ಇಷ್ಟಪಡುವವರು ಧೈರ್ಯ ಮತ್ತು ಸಾಹಸಮಯ ಸ್ವಭಾವದವರಾಗಿರುತ್ತಾರೆ. ಅಲ್ಲದೆ ಇವರು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ಹಂತದಲ್ಲೂ ಸವಾಲುಗಳನ್ನು ಎದುರಿಸಲು ಇಷ್ಟಡುವವರಾಗಿರುತ್ತಾರೆ.

ಹಸಿರು ಬಣ್ಣದ ಲೆಹೆಂಗಾ:

ಈ ಬಣ್ಣ ಹೊಸತನ ಸಮೃದ್ಧಿ ಮತ್ತು ಚೈತನ್ಯದೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ ಹಸಿರು ಬಣ್ಣದ ಲೆಹೆಂಗಾವನ್ನು ಇಷ್ಟಪಡುವವರು ದಿಟ್ಟ ಮತ್ತು ಉಲ್ಲಾಸಕರ ಸ್ವಭಾವವನ್ನು ಹೊಂದಿರುವವರಾಗಿರುತ್ತಾರೆ. ಚುರುಕಾದ, ಒಳ್ಳೆಯ ಅಭಿರುಚಿಯುಳ್ಳ ಇವರು ಸ್ವಾತಂತ್ರ್ಯವನ್ನು ತುಂಬಾನೇ ಪ್ರೀತಿಸುವವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ