AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಫೆಕ್ಟ್ ಆಯುರ್ವೇದ ಡಯೆಟ್ ಹೇಗೆ? ಆಹಾರ ಕ್ರಮ, ಸಮತೋಲನ, ಸಂಯೋಜನೆ ಮುಖ್ಯ ಎನ್ನುತ್ತದೆ ಪತಂಜಲಿ

Patanjali & Ayurveda: Food Combinations & Health: ಪತಂಜಲಿಯು ಆಯುರ್ವೇದದ ತತ್ವಗಳನ್ನು ಆಧರಿಸಿ ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡುತ್ತದೆ. "ದಿ ಸೈನ್ಸ್ ಆಫ್ ಆಯುರ್ವೇದ" ಪುಸ್ತಕ ಆಹಾರ ಸಂಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ತಪ್ಪು ಆಹಾರ ಸಂಯೋಜನೆಯು ವಾತ, ಪಿತ್ತ, ಕಫ ದೋಷಗಳ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ರೋಗಗಳನ್ನು ಉಂಟುಮಾಡಬಹುದು. ಈ ಲೇಖನವು ಆರೋಗ್ಯಕರ ಆಹಾರ ಸೇವನೆ ಮತ್ತು ಆಯುರ್ವೇದದ ತತ್ವಗಳ ಬಗ್ಗೆ ಚರ್ಚಿಸುತ್ತದೆ.

ಪರ್ಫೆಕ್ಟ್ ಆಯುರ್ವೇದ ಡಯೆಟ್ ಹೇಗೆ? ಆಹಾರ ಕ್ರಮ, ಸಮತೋಲನ, ಸಂಯೋಜನೆ ಮುಖ್ಯ ಎನ್ನುತ್ತದೆ ಪತಂಜಲಿ
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2025 | 12:56 PM

Share

ಸ್ವದೇಶಿ ಮತ್ತು ಆಯುರ್ವೇದವನ್ನು ಉತ್ತೇಜಿಸಲು ಪತಂಜಲಿ ಸಂಸ್ಥೆ (Patanjali) ಆರೋಗ್ಯದಿಂದ ಹಿಡಿದು ಸೌಂದರ್ಯದವರೆಗೆ ಹಲವು ಉತ್ಪನ್ನಗಳನ್ನು ಹೊರತಂದಿದೆ. ಇದರಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಬಾಬಾ ರಾಮದೇವ್ ಜನರು ಆರೋಗ್ಯಕರ ಜೀವನ ನಡೆಸಲು ಯೋಗವನ್ನು ಕಲಿಸುತ್ತಾರೆ. ಅವರ ಸಹವರ್ತಿ ಮತ್ತು ಆಪ್ತರಾದ ಆಚಾರ್ಯ ಬಾಲಕೃಷ್ಣ ಅವರು ಗಿಡಮೂಲಿಕೆಗಳಿಂದ ಹಿಡಿದು ಆಹಾರ ಸಂಬಂಧಿತ ವಿಷಯಗಳವರೆಗೆ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಯನ್ನು ನೀಡುತ್ತಾರೆ. ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಆಚಾರ್ಯ ಬಾಲಕೃಷ್ಣ ಅವರು ಬರೆದಿರುವ ಹಲವು ಪುಸ್ತಕಗಳಲ್ಲಿ ‘ದಿ ಸೈನ್ಸ್ ಆಫ್ ಆಯುರ್ವೇದ’ (The Science of Ayurveda) ಒಂದು. ಆಹಾರದ ಸ್ವರೂಪ ಮತ್ತು ಸಂಯೋಜನೆ ಬಗ್ಗೆ ಗಮನ ಕೊಡದಿದ್ದರೆ, ದೇಹಕ್ಕೆ ಪ್ರಯೋಜನ ತರಬೇಕಾದ ಇದೇ ಆಹಾರವು ಹಾನಿಕಾರಕವಾಗಿ ಪರಿಣಮಿಸಬಹುದು ಎಂದು ಈ ಪುಸ್ತಕದಲ್ಲಿ ಎಚ್ಚರಿಸಲಾಗಿದೆ. ಆಹಾರದ ಬಗ್ಗೆ ಸರಿಯಾದ ಜ್ಞಾನದ ಕೊರತೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣದ ಕೊರತೆಯಿಂದಾಗಿ, ದೇಹದಲ್ಲಿ ಅಸಮತೋಲನ ಉಂಟುಮಾಡುವ ವಸ್ತುಗಳನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಇದು ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಆಯುರ್ವೇದ ಹೇಳುತ್ತದೆ ಎನ್ನಲಾಗಿದೆ.

ಆಯುರ್ವೇದದ ಪ್ರಕಾರ, ನಾವು ಸೇವಿಸುವ ಯಾವುದೇ ಆಹಾರವು ಏಳು ಲೋಹಗಳಿಂದ ಮಾಡಲ್ಪಟ್ಟಿರುತ್ತದೆ. ನಾವು ಸಾಯುವವರೆಗೂ ಇವು ದೇಹದೊಳಗೆ ಇರುತ್ತವೆ. ಆದ್ದರಿಂದ, ತಪ್ಪು ಆಹಾರ ವನ್ನು ಸೇವಿಸುವುದರಿಂದ ನಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾವ್ಯಾವ ಆಹಾರ ಸಂಯೋಜನೆಗಳು ಆರೋಗ್ಯಕ್ಕೆ ಹಾನಿ ಮಾಡಬಹುದು, ಈ ವಿವರಗಳು ಮುಂದಿವೆ.

ಆಹಾರ ಸಂಯೋಜನೆ ತಪ್ಪಾಗದಿರಲಿ…

ಆಯುರ್ವೇದದಲ್ಲಿ ವಾತ, ಪಿತ್ತ, ಕಫ ಎಂಬ ಮೂರು ದೋಷಗಳನ್ನು ಉಲ್ಲೇಖಿಸಲಾಗಿದೆ. ದೇಹದಲ್ಲಿ ಅವುಗಳ ಸಮತೋಲನ ತಪ್ಪಿದರೆ ಅನೇಕ ರೋಗಗಳು ವಕ್ಕರಿಸಿಕೊಳ್ಳುತ್ತವೆ. ಆದ್ದರಿಂದ ಪತಂಜಲಿಯು ನಿಮ್ಮ ದೇಹದಲ್ಲಿ ಈ ದೋಷಗಳನ್ನು ನಿಯಂತ್ರಿಸಲು ಮತ್ತು ದೇಹವನ್ನು ರೋಗಗಳಿಂದ ರಕ್ಷಿಸಲು ಕೆಲಸ ಮಾಡುವ ಅನೇಕ ಉತ್ಪನ್ನಗಳನ್ನು ಸಹ ಹೊಂದಿದೆ. ಆಹಾರದ ಸರಿಯಾದ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ಹೇಗೆ ವರದಾನವಾಗಿದೆ, ಕೆಟ್ಟ ಆಹಾರ ಕ್ರಮಗಳು ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದನ್ನು ಈ ‘ದಿ ಸೈನ್ಸ್ ಆಫ್ ಆಯುರ್ವೇದ’ ಪುಸ್ತಕದಲ್ಲಿ ವಿವರಿಸಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ನಾವು ವಿಭಿನ್ನ ಪ್ರಕೃತಿಯ ಎರಡು ಆಹಾರವನ್ನು ಒಟ್ಟಿಗೆ ಸೇವಿಸಿದಾಗ ದೇಹದೊಳಗೆ ದೋಷಗಳನ್ನು ಹೆಚ್ಚಿಸುತ್ತದೆ. ಇದರಿಂದ ರೋಗ ಸಾಧ್ಯತೆ ಹೆಚ್ಚಾಗಬಹುದು.

ಇದನ್ನೂ ಓದಿ
Image
ರಕ್ತದೊತ್ತಡಕ್ಕೆ ಪತಂಜಲಿ BPGrit Vati ಔಷಧಿ
Image
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ
Image
ಶ್ವಾಸಕೋಶ ಕಾಯಿಲೆಗಳಿಗೆ ರಾಮಬಾಣ ಪತಂಜಲಿ ಬ್ರೋಂಕೋಮ್
Image
ಆರೋಗ್ಯಕ್ಕೆ ಬೇಕು ಸರಿಯಾದ ಆಹಾರಕ್ರಮ: ಪತಂಜಲಿ

ಇದನ್ನೂ ಓದಿ: ಪತಂಜಲಿಯ ಈ ಔಷಧಿಯನ್ನು ತೆಗೆದುಕೊಂಡರೆ, ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಬಹುದು; ಸಂಶೋಧನೆ

ಪ್ರಕೃತಿಗೆ ಅನುಗುಣವಾಗಿ ತಿನ್ನುವುದು ಮುಖ್ಯ

ಸರಿಯಾದ ಆಹಾರ ಸಂಯೋಜನೆ ಹೇಗೆ ಮುಖ್ಯವೋ, ಅದೇ ರೀತಿಯಲ್ಲಿ ತಾಪಮಾನಕ್ಕೆ ಅನುಗುಣವಾಗಿ ಆಹಾರ ಕ್ರಮ ಬದಲಾಯಿಸುವ ಅವಶ್ಯಕತೆಯಿದೆ. ಇದಲ್ಲದೆ, ನಿಮ್ಮ ದೇಹದ ಸ್ವರೂಪ ಹೇಗಿದೆ ಎಂಬುದನ್ನು ಸಹ ಈ ಪುಸ್ತಕದಲ್ಲಿ ಹೇಳಲಾಗಿದೆ. ಇದರ ಪ್ರಕಾರ ಆಹಾರ ಸೇವಿಸುವುದು ಕೂಡ ಬಹಳ ಮುಖ್ಯ. ನಿಮ್ಮಲ್ಲಿ ಕೆಲವರಿಗೆ ಕಫ ಇರುವಂತೆ, ಕೆಲವರಿಗೆ ವಾತ ಸ್ವಭಾವವಿದ್ದರೆ, ಇನ್ನು ಕೆಲವರಿಗೆ ಪಿತ್ತ ಪ್ರಧಾನವಾದ ದೇಹ ಸ್ವಭಾವವಿರುತ್ತದೆ.

ಆಹಾರಕ್ಕೆ ಸಂಬಂಧಿಸಿದ ಈ ಸಣ್ಣ ಸಣ್ಣ ವಿಷಯಗಳತ್ತ ಗಮನ ಕೊಡಿ

  • ಬೆಳಿಗ್ಗೆ ಸ್ನಾನ ಮಾಡುವ ಮೊದಲು ಊಟ ಮಾಡುವುದು, ಹಸಿವಿಲ್ಲದಿದ್ದರೂ ಏನಾದರೂ ತಿನ್ನುವುದು ಅಥವಾ ಕೆಲವೊಮ್ಮೆ ಹಸಿವಾದ ನಂತರವೂ ಊಟ ಮಾಡದಿರುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ.
  • ಆಯುರ್ವೇದದಲ್ಲಿ, ಚಳಿಗಾಲದಲ್ಲಿ ಮೊಸರು ತಿನ್ನುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆ, ವಸಂತ (ಸ್ಪ್ರಿಂಗ್) ಮತ್ತು ಮಳೆಗಾಲದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಮೊಸರಿಗೆ ಉಪ್ಪು ಇತ್ಯಾದಿ ಸೇರಿಸಿ ತಿನ್ನುವುದನ್ನು ತಪ್ಪಿಸಬೇಕು. ಹಾಗೆಯೇ, ರಾತ್ರಿಯಲ್ಲಿ ಮೊಸರನ್ನು ತಿನ್ನಬಾರದು.

ಇದನ್ನೂ ಓದಿ: ಹೈಬಿಪಿ ಇರಲಿ, ಲೋ ಬಿಪಿ ಇರಲಿ, ಯಾವುದೇ ಬ್ಲಡ್ ಪ್ರೆಷರ್​​ಗೂ ಪತಂಜಲಿ BPGrit Vati ಔಷಧ

  • ತುಪ್ಪ ತಿಂದ ನಂತರ ತಣ್ಣೀರು ಕುಡಿಯಬಾರದು. ನೀವು ದೇಸಿ ತುಪ್ಪ ಅಥವಾ ಅದರಿಂದ ಮಾಡಿದ ಯಾವುದೇ ವಸ್ತುವನ್ನು ಸೇವಿಸಿದ್ದರೆ, ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಆಹಾರ ಸೇವಿಸಿದ ನಂತರ ವ್ಯಾಯಾಮ ಮಾಡಬಾರದು. ನೀವು ಗೋಧಿ ಅಥವಾ ಬಾರ್ಲಿಯಿಂದ ಮಾಡಿದ ಏನನ್ನಾದರೂ ತಿನ್ನುತ್ತಿದ್ದರೆ, ಅದರ ನಂತರ ನೀವು ತಣ್ಣೀರು ಕುಡಿಯಬಾರದು.
  • ಅರ್ಧ ಬೇಯಿಸಿದ ಆಹಾರ ಅಥವಾ ಅತಿಯಾಗಿ ಬೇಯಿಸಿದ ಆಹಾರವನ್ನು ಸೇವಿಸಬಾರದು. ನಿಮ್ಮ ಆಹಾರ ಎಷ್ಟು ಆರೋಗ್ಯಕರ ಎಂಬುದು ಯಾವ ಉರಿಯಲ್ಲಿ ಅದನ್ನು ಬೇಯಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಬಹುದು.

ಈ ರೀತಿಯಾಗಿ, ಸಣ್ಣ ಸಣ್ಣ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಒಂದು ಆಹಾರದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ