ಕಾರಿನ ಮೇಲೆ ನವಜೋಡಿಗಳ ಅಪಾಯಕಾರಿ ಸ್ಟಂಟ್, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ನಿತ್ಯ ನೂರಾರು ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತದೆ. ಕೆಲವರು ಫೇಮಸ್ ಆಗಲೆಂದೇ ವಿಡಿಯೋಗಳು ಮಾಡುತ್ತಿರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಾರಿನ ಮೇಲೆ ನಿಂತು ವಧು ವರರು ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಧ್ಯಪ್ರದೇಶ ಮೇ 14: ಎಲ್ಲರೂ ಕೂಡ ತಮ್ಮ ಮದುವೆ (marriage) ಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ತಮ್ಮ ಮದುವೆ ವಿಭಿನ್ನವಾಗಿರಲು ಕೂಡ ಬಯಸುತ್ತಾರೆ. ಅದಲ್ಲದೇ, ವಧು ವರರು ಕೂಡ ಸ್ಟಂಟ್ (stunt) ಮಾಡುವ ಮೂಲಕ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಇಂತಹದೊಂದು ವಿಡಿಯೋವೊಂದು ವೈರಲ್ ಆಗಿದ್ದು, ವಧುವರರು ಸಂಚಾರಿ ನಿಯಮಗಳನ್ನು ಬ್ರೇಕ್ ಮಾಡುವ ಮೂಲಕ ಕಾರಿನ ಮೇಲೆ ನಿಂತುಕೊಂಡು ವಧು ವರರು ಸ್ಟಂಟ್ ಮಾಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಗ್ವಾಲಿಯರ್ (gwalior of madhyapradesh) ನಲ್ಲಿ ನಡೆದಿದೆ.
Todays Voice imransayyaed ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹೂವುಗಳಿಂದ ಅಲಂಕಾಗೊಂಡ ಕಾರು ಸೇತುವೆಯ ಮೇಲೆ ಚಲಿಸುತ್ತಿದೆ. ಇತ್ತ ವರನು ಚಲಿಸುವ ಕಾರಿನ ಚಾವಣಿಯ ಮೇಲೆ ನಿಂತು ಖಡ್ಗವನ್ನು ಬೀಸುತ್ತಿದ್ದರೆ, ವಧು ಕಾರಿನ ಬಾನೆಟ್ ಮೇಲೆ ಕುಳಿತು ಡ್ಯಾನ್ಸ್ ಮಾಡುವುದನ್ನೂ ನೋಡಬಹುದು. ವಧು ಮತ್ತು ವರರು ಸ್ಟಂಟ್ ಮಾಡುವ ಮೂಲಕ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಇದನ್ನೂ ಓದಿ : ಹೇ ನಾನಲ್ಲ ಮಾರ್ರೆ ನಿನ್ನ ಮಗು: ಯಕ್ಷಗಾನದ ಸ್ತ್ರಿ ಪಾತ್ರಧಾರಿ ಜತೆಗೆ ಮಗುವಿನ ಜಗಳ, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು
ವೈರಲ್ ವಿಡಿಯೋ ಇಲ್ಲಿದೆ ನೋಡಿ
In Gwalior, a bride and groom violated traffic rules in order to go viral. A video of the groom doing stunts with a sword on the car and the bride dancing on the bonnet is becoming increasingly viral on social media#MadhyaPradesh #MetGala #MetGala2025 #MetGala2025xFREEN #Stunt pic.twitter.com/JrBfc58JTB
— TodaysVoice ImranSayyed (@todaysvoice24nz) May 6, 2025
ಈ ವಿಡಿಯೋವೊಂದು ಈಗಾಗಲೇ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಗರಂ ಆಗಿದ್ದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇವರೆಂತ ಮೂರ್ಖರು, ಇವರಿಗೆ ಸಾಮಾನ್ಯ ಜ್ಞಾನವೇ ಇಲ್ಲವೇ’ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಇವರು ಮದುವೆಯಾಗುತ್ತಿದ್ದಾರೆಯೇ? ಅಥವಾ ಕಾರ್ಯಕ್ರಮ ನೀಡುತ್ತಿದ್ದಾರೆಯೇ? ಮದುವೆ ಹೆಸರಿನಲ್ಲಿ ಈ ರೀತಿ ಕೆಲಸ ಮಾಡುವುದು ನಿಜಕ್ಕೂ ದುಃಖಕರ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವಧು ವರನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








