ಸ್ನೇಹಿತನಿಗಾಗಿ ಚಿರತೆ ಜತೆ ಯುದ್ಧಕ್ಕೆ ನಿಂತ ಶ್ವಾನಗಳು
ಮಾನವನು ಸ್ವಾರ್ಥದಿಂದ ಕಾಡು ಸಂಪೂರ್ಣವಾಗಿ ನಾಶವಾಗಿದೆ. ಹೀಗಾಗಿ ಆಹಾರವನ್ನರಸುತ್ತಾ ನಾಡಿಗೆ ಬರುವ ಪ್ರಾಣಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕ್ರೂರ ಪ್ರಾಣಿಗಳು ರಾತ್ರೋ ರಾತ್ರಿ ನಾಡಿಗೆ ಬಂದು ಶ್ವಾನ ಮತ್ತು ದನಕರುಗಳ ಮೇಲೆ ದಾಳಿ ಮಾಡುತ್ತವೆ.ಆದರೆ ಇದೀಗ ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಮುಂದೇನಾಯ್ತು ಗೊತ್ತಾ? ಈ ಕುರಿತಾದ ಮಾಹಿತಿಯೂ ಇಲ್ಲಿದೆ.

ಉತ್ತರಾಖಂಡ್, ಮೇ 14: ಇತ್ತೀಚೆಗಿನ ದಿನಗಳಲ್ಲಿ ಹುಲಿ, ಚಿರತೆ ಸೇರಿದಂತೆ ಇನ್ನಿತ್ತರ ಕಾಡು ಪ್ರಾಣಿಗಳು ಆಹಾರ (food) ವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬರುತ್ತಿರುತ್ತದೆ. ಹೀಗೆ ಬರುವ ಕ್ರೂರ ಪ್ರಾಣಿಗಳು ಮನೆಯ ಬಳಿ ಇದ್ದ ಶ್ವಾನಗಳು, ದನಕರುಗಳು ಹಾಗೂ ಜನರ ಮೇಲೆ ದಾಳಿ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ದಾಳಿಗೆ ಸಂಬಂಧ ಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಮಲಗಿದ್ದ ನಾಯಿ (dog) ಯ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಆದರೆ ಈ ವೇಳೆಯಲ್ಲಿ ಅಲ್ಲೇ ಇದ್ದ ಇತರ ಶ್ವಾನಗಳು ಚಿರತೆಯನ್ನು ಓಡಿಸಿ ತನ್ನ ಸ್ನೇಹಿತನನ್ನು ಕಾಪಾಡಿದೆ. ಈ ಘಟನೆಯೂ ಉತ್ತರಾಖಂಡದ ಹರಿದ್ವಾರ (haridwara of uttarakhand) ದಲ್ಲಿ ನಡೆದಿದ್ದು ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
@gharke kalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿರುವ ವಿಡಿಯೋದಲ್ಲಿ ಆಹಾರವನ್ನರಸುತ್ತ ಬಂದ ಚಿರತೆಯೊಂದು ರಸ್ತೆಯಲ್ಲಿ ಮಲಗಿದ್ದಂತ ಸಾಕು ನಾಯಿಯ ಮೇಲೆ ದಾಳಿ ಮಾಡಿದೆ. ಚಿರತೆಯೂ ನಾಯಿಯ ಕುತ್ತಿಗೆಗೆ ಬಾಯಿ ಹಾಕುತ್ತಿದ್ದಂತೆ ಅಲ್ಲೇ ಇದ್ದ ಮೂರ್ನಾಲ್ಕು ಶ್ವಾನಗಳು ಚಿರತೆಯ ಮೇಲೆ ಎಗರಿ, ಚಿರತೆಯನ್ನು ಅಲ್ಲಿಂದ ಓಡಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ :ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಬಿಗ್ ಫೈಟ್, ಕಾರಣ ಏನು ಗೊತ್ತಾ? ಇಲ್ಲಿದೆ ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh b/w Dogs and Leopard (In Haridwar, a leopard attacked a dog sleeping on the road. It grabbed its neck. Meanwhile, several other dogs came. They attacked the leopard and chased him away) pic.twitter.com/AfbYGZJgED
— Ghar Ke Kalesh (@gharkekalesh) May 14, 2025
ಈ ವಿಡಿಯೋವೊಂದು ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಈ ಶ್ವಾನಗಳ ಒಗ್ಗಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಈ ಮನುಷ್ಯರಿಗಿಂತ ಶ್ವಾನಗಳೇ ವಾಸಿ. ಶ್ವಾನಗಳಿಗಿರುವ ಸಹಾಯ ಮಾಡುವ ಮನೋಭಾವ ಈ ಮನುಷ್ಯರಿಗಿಲ್ಲ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನನ್ನ ಜೀವನದಲ್ಲಿ ಇಂತಹ ಶ್ವಾನಗಳಂತಹ ಸ್ನೇಹಿತರು’ ಇದ್ದಾರೆ. ಮತ್ತೊಬ್ಬರು, ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








