ಕೇಕ್ ಕತ್ತರಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಹಿರಿಜೀವ, ವಿಡಿಯೋ ವೈರಲ್
ನಿಯತ್ತು, ನಿಷ್ಠೆ, ನಿಸ್ವಾರ್ಥ ಪ್ರೀತಿಗೆ ಮತ್ತೊಂದು ಹೆಸರೇ ಈ ಶ್ವಾನಗಳು. ಒಂದು ಹೊತ್ತು ಊಟ ಹಾಕಿದವರಿಗಾಗಿ, ಪ್ರೀತಿ ತೋರಿಸಿದ ಮನೆ ಮಾಲೀಕನ ಬಳಿ ನಿಷ್ಠೆಯಿಂದ ಇರುತ್ತದೆ. ಕೆಲವರು ಶ್ವಾನವನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುವುದಿದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ತನ್ನ ಮುದ್ದಿನ ಶ್ವಾನದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಶ್ವಾನ (dog) ಗಳೆಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಈ ಶ್ವಾನಗಳ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲಲು ಸಾಧ್ಯವಿಲ್ಲ. ಹೌದು ಕೆಲವೊಮ್ಮೆ ಮನುಷ್ಯರಿಗಿಂತ ಈ ಶ್ವಾನಗಳೇ ಆಪ್ತ ಸ್ನೇಹಿತರಾಗಿ ಬಿಡುತ್ತವೆ. ಅದಲ್ಲದೇ ಈ ಶ್ವಾನಗಳು ಮನೆಯ ಸದಸ್ಯರಂತೆ ಇದ್ದು ಬಿಡುತ್ತವೆ. ತಮ್ಮ ಮನೆಯ ಸದ್ಯಸರಂತೆ ಇರುವ ಈ ಮುದ್ದಾದ ಶ್ವಾನದ ಹುಟ್ಟುಹಬ್ಬ (dog birthday) ವನ್ನು ಅದ್ದೂರಿಯಾಗಿ ಆಚರಿಸುವುದನ್ನು ನೋಡಿರಬಹುದು. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದಿದೆ. ಈ ವಿಡಿಯೋದಲ್ಲಿ ಅಜ್ಜಿ (grand mother) ಯೊಬ್ಬರು ಮನೆಯ ಸದಸ್ಯರಂತೆ ಇರುವ ಶ್ವಾನದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.
@buitenfebieden ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಕುಳಿತುಕೊಂಡಿದ್ದಾರೆ. ಅವರ ಮುಂದೆ ಶ್ವಾನವೊಂದು ಕುಳಿತುಕೊಂಡಿದ್ದು ಟೇಬಲ್ ಮೇಲೆ ಕೇಕ್ ಇಡಲಾಗಿದೆ. ಆದರೆ ಶ್ವಾನ ಮಾತ್ರ ಕೇಕ್ ನೋಡುವ ಬದಲು ಅಜ್ಜಿಯನ್ನೇ ದಿಟ್ಟಿಸಿ ನೋಡುತ್ತಿದೆ.
ಇದನ್ನೂ ಓದಿ : ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ, ಯಾರು ಈ ಕಾಶಿಶ್ ಚೌಧರಿ? ಇಲ್ಲಿದೆ ಮಾಹಿತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
A grandma celebrating the birthday of her dog. The dog didn’t even look at the food, the eyes were all on grandma.. 🥺 pic.twitter.com/J6FDwsUeyE
— Buitengebieden (@buitengebieden) May 12, 2025
ಈ ವಿಡಿಯೋವನ್ನು ಮೇ 12 ರಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 5.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಕಾಮೆಂಟ್ ಗಳು ಹೀಗಿವೆ. ಬಳಕೆದಾರರು, ಮಕ್ಕಳಿಲ್ಲದ ಅದೆಷ್ಟೋ ದಂಪತಿಗಳಿಗೆ ಈ ಶ್ವಾನಗಳೇ ಮಕ್ಕಳಾಗಿವೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇದು ತುಂಬಾ ಹೃದಯಸ್ಪರ್ಶಿ ವಿಡಿಯೋ, ವಯಸ್ಸಾದ ಕಾಲಘಟ್ಟದಲ್ಲಿ ಇಂತಹ ನಿಷ್ಕಲ್ಮಶ ಪ್ರೀತಿ ನೀಡುವ ಜೀವಗಳು ಬೇಕಾಗುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ನಿಷ್ಕಲ್ಮಶ ಪ್ರೀತಿ ನೀಡುವ ಶ್ವಾನಗಳೊಂದಿಗೆ ಕಳೆದ ಇಂತಹ ಕ್ಷಣಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Thu, 15 May 25








