CBSE 10th Result 2025: ಮಗ ಎಲ್ಲ ವಿಷಯದಲ್ಲೂ ಜಸ್ಟ್ ಪಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಪ್ಪ
ಹತ್ತನೇ ತರಗತಿ ಫಲಿತಾಂಶದ ಬಗ್ಗೆ ಮಕ್ಕಳಿಗಿಂತ ಹೆತ್ತವರಿಗೆ ಆತಂಕ ಭಯ ಹೆಚ್ಚು ಇರುತ್ತದೆ. ಇದೀಗ 2025ನೇ ಸಾಲಿನ ಸಿಬಿಎಸ್ ಇ 10ನೇ ತರಗತಿ ಫಲಿತಾಂಶವು ಮೇ 13 ರಂದು ಪ್ರಕಟವಾಗಿದೆ. ಸೋಲಾಪುರದ ಶಿವಂ ಎಂಬ ವಿದ್ಯಾರ್ಥಿಯ ಸಿಬಿಎಸ್ ಇ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಕಂಡು ಇಡೀ ಕುಟುಂಬವೇ ಸಂಭ್ರಮಿಸಿದೆ. ಈ ವಿದ್ಯಾರ್ಥಿಯೂ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ನಿಜಕ್ಕೂ ತಪ್ಪು, ಅಸಲಿ ವಿಚಾರ ಬೇರೇನೇ ಇದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಮಹಾರಾಷ್ಟ್ರ, ಮೇ 14 : ಮಕ್ಕಳು ಚೆನ್ನಾಗಿ ಒಳ್ಳೆಯ ಅಂಕ ಗಳಿಸಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವು ಮಕ್ಕಳು ಓದಿನಲ್ಲಿ ಹಿಂದೆ ಇರುತ್ತಾರೆ. ಹೀಗಾಗಿ ಈ ಮಕ್ಕಳ ಹೆತ್ತವರು ತಮ್ಮ ಜಸ್ಟ್ ಪಾಸ್ ಆದರೆ ಸಾಕು ಎಂದುಕೊಳ್ಳುತ್ತಾರೆ. ಮೇ 13 ರಂದು ಸಿಬಿ ಎಸ್ ಇ ಹತ್ತನೆ ತರಗತಿ (CBSE 10 th Standard) ಫಲಿತಾಂಶವು ಪ್ರಕಟಗೊಂಡಿದೆ. ಹೀಗಿರುವಾಗ ಮಹಾರಾಷ್ಟ್ರದ ಸೋಲಾಪುರ (solapur of maharastra) ದ ವಿದ್ಯಾರ್ಥಿ ಶಿವಂ ಹೆತ್ತವರ ಮಗನ ಫಲಿತಾಂಶ ಕಂಡು ಖುಷಿಪಟ್ಟಿದ್ದಾರೆ. ಮಗ ಶಿವಂ (shivam) ಪ್ರತಿಯೊಂದು ವಿಷಯದಲ್ಲೂ ಶೇ 35 ಅಂಕಗಳನ್ನು ಗಳಿಸಿ, ಪರೀಕ್ಷೆಯಲ್ಲಿ ಉತ್ತಿರ್ಣನಾಗಿದ್ದಾನೆ ಎನ್ನುವುದೇ ಹೆತ್ತವರ ಖುಷಿಗೆ ಮುಖ್ಯ ಕಾರಣವಾಗಿದೆ.
ಹೌದು, ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ, ಮಹಾರಾಷ್ಟ್ರದ ಸೋಲಾಪುರದ ಶಿವಂ ವಾಘ್ಮೋರೆ ಕೂಡ ಒಬ್ಬನಾಗಿದ್ದಾನೆ. ಓದಿನಲ್ಲಿ ಹಿಂದೆ ಇದ್ದ ಮಗ ಹತ್ತನೇಯ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣವಾಗುವುದಿಲ್ಲ ಎಂದೇ ಭಾವಿಸಿದ್ದರು. ಆದರೆ ಈ ಸಿದ್ಧೇಶ್ವರ ಬಾಲಕ ಮಂದಿರ ಶಾಲೆಯ ವಿದ್ಯಾರ್ಥಿ ಶಿವಂ, ಎಲ್ಲಾ ವಿಷಯಗಳಲ್ಲಿ 35 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದು, ಹೆತ್ತವರು ಮಗನ ಫಲಿತಾಂಶ ಕಂಡು ಖುಷಿ ಪಟ್ಟುಕೊಂಡಿದೆ. ಸ್ಥಳೀಯರು ಮೆರವಣಿಗೆ ಮಾಡುವ ಮೂಲಕ ಶಿವಂ ಉತ್ತೀರ್ಣನಾಗಿರುವುದನ್ನೂ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಈ ಸಲ ಕಪ್ ನಮ್ದೆ, ಈ ಹುಡುಗ ಗುಡ್ ಬ್ಯಾಟ್ಸ್ಮನ್ ಆಗುವ ಲಕ್ಷಣ ಕಾಣುತ್ತಿದೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
हे बातम्या वाले खरचं येडे झाले आहेत सोलापुरातील Shivam Waghmare याला दहावी परीक्षेत 35 % मिळालेत. Waghmare याने मिळवलेल्या यशाबद्दल त्याच्या मित्र परिवाराने गुलाल उडवत जल्लोष साजरा केला. ह्याची पण बातमी केली pic.twitter.com/RXqB6btnFj
— Shekhar (@Shekharcoool5) May 13, 2025
ಇಂಡಿಯಾ ಟುಡೇ ಜೊತೆಗೆ ಮಾತನಾಡಿರುವ ವಿದ್ಯಾರ್ಥಿ ಶಿವಂ, ನಾನು ಎಲ್ಲಾ ವಿಷಯದಲ್ಲಿಯೂ 35 ಅಂಕಗಳನ್ನು ಪಡೆಯುತ್ತೇನೆ ಎಂದು ನಾನು ಊಹಿಸಿಯೆ ಇರಲಿಲ್ಲ. ಫಲಿತಾಂಶ ನೋಡಿ ನನಗೆ ನೋಡಿಯೇ ಶಾಕ್ ಆಯಿತು. ಆದರೆ ನಾನು ಫಲಿತಾಂಶವು ನನಗೆ ಸಂತೋಷ ತಂದಿದೆ. ಮುಂದಿನ ಬಾರಿ ನಾನು ಕಷ್ಟಪಟ್ಟು ಓದುತ್ತೇನೆ, ಐಟಿಐ ಮಾಡುತ್ತೇನೆ ಎಂದಿದ್ದಾನೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








