Viral: ಬೇಗ ಬಂದು ಬಾಳೆಹಣ್ಣು ಕೊಡಣ್ಣ; ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಕಾದು ಕುಳಿತ ಶ್ವಾನ
ಸೋಷಿಯಲ್ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮ ಮನಗೆಲ್ಲುತ್ತವೆ. ಇದೀಗ ಅಂತಹದ್ದೊಂದು ಮುದ್ದಾದ ದೃಶ್ಯ ಹರಿದಾಡುತ್ತಿದ್ದು, ಹಣ್ಣಿನ ವ್ಯಾಪಾರಿ ಹಾಗೂ ಗೋಲ್ಡನ್ ರಿಟ್ರೈವರ್ ಶ್ವಾನದ ಸುಂದರ ಬಾಂಧವ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಒಂದು ಬಾಳೆಹಣ್ಣಿಗಾಗಿ ಪ್ರತಿದಿನ ಬೆಳಗ್ಗೆ ಬಾಲ ಅಲ್ಲಾಡಿಸುತ್ತಾ ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಕಾದು ಕೂರುವ ಈ ಮುದ್ದು ಶ್ವಾನದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಾಯಿ (Dog) ಹಾಗೂ ಮನುಷ್ಯರ (Human) ನಡುವಿನ ಪ್ರೀತಿ, ಒಡನಾಟ, ಬಾಂಧವ್ಯ ತುಂಬಾನೇ ವಿಶೇಷವಾದದ್ದು, ಅದರಲ್ಲೂ ಶ್ವಾನವಂತೂ ತನಗೆ ಒಂದು ತುತ್ತು ಊಟ ಕೊಟ್ಟ ವ್ಯಕ್ತಿಯನ್ನು ಸಾಯುವ ತನಕ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಇದಕ್ಕೆ ಉದಾಹರಣೆಯಂತಿರುವ ಅದೆಷ್ಟೋ ಘಟನೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇನ್ನೂ ಮನುಷ್ಯ ಹಾಗೂ ಶ್ವಾನದ ಸುಂದರ ಬಂಧದ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದ್ದು, ಒಂದು ಬಾಳೆಹಣ್ಣಿಗಾಗಿ ಪ್ರತಿದಿನ ಬೆಳಗ್ಗೆ ಬಾಲ ಅಲ್ಲಾಡಿಸುತ್ತಾ ಹಣ್ಣಿನ ವ್ಯಾಪಾರಿಯ (fruit vendor) ಬರುವಿಕೆಗಾಗಿ ಕಾದು ಕೂರುವ ಈ ಮುದ್ದು ಶ್ವಾನದ ಮುಗ್ಧತೆಗೆ ಹಾಗೂ ಹಣ್ಣಿನ ವ್ಯಾಪಾರಿಯ ಹೃದಯ ಶ್ರೀಮಂತಿಕೆಗೆ ನೆಟ್ಟಿಗರು ಮನಸೋತಿದ್ದಾರೆ.
ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಕಾದು ಕುಳಿತ ಶ್ವಾನ:
ಟ್ಯಾಕ್ಸ್ ಕಲೆಕ್ಟರ್‌ನಂತೆ ಪ್ರತಿದಿನ ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಕಾದು ಕೂರುವ ಈ ಗೋಲ್ಡನ್ ರಿಟ್ರೈವರ್ ಶ್ವಾನಕ್ಕೆ, ಹಣ್ಣಿನ ವ್ಯಾಪಾರಿ ಕೊಡುವ ಬಾಳೆ ಹಣ್ಣು ತಿಂದ್ರೆಯೇ ಸಮಧಾನವಂತೆ. ಈ ನಿಷ್ಕಲ್ಮಶ ಮನಸ್ಸುಗಳ ಸುಂದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು misty_eva_mauli ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಮ್ಮ ದೈನಂದಿನ ದಿನಚರಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನ ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಬಾಲ ಅಲ್ಲಾಡಿಸುತ್ತಾ ಕೂತಿರುವ ದೃಶ್ಯವನ್ನು ಕಾಣಬಹುದು. ಹಣ್ಣಿನ ವ್ಯಾಪಾರಿ ಗಾಡಿಯನ್ನು ತಳ್ಳುತ್ತಾ ಬರುತ್ತಿದ್ದಂತೆ, ಶ್ವಾನವನ್ನು ಕಂಡು ಗಾಡಿಯನ್ನು ನಿಲ್ಲಿಸಿ, ಅದಕ್ಕೊಂದು ಬಾಳೆ ಹಣ್ಣು ತಿನ್ನಿಸಿ ಮುಂದೆ ಸಾಗಿದ್ದಾನೆ.
ಇದನ್ನೂ ಓದಿ: ಕೇಕ್ ಕತ್ತರಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಹಿರಿಜೀವ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಒಂದು ವಾರಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 6.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಣ್ಣಿನ ವ್ಯಾಪಾರಿ ನಿಜಕ್ಕೂ ಹೃದಯ ಶ್ರೀಮಂತʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಷ್ಟು ಮುದ್ದಾಗಿದೆ ಈ ದೃಶ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಶ್ವಾನಕ್ಕೆ ದಿನ ಹಣ್ಣು ತಿನ್ನಿಸುವ ಆ ವ್ಯಕ್ತಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








