ಯಾರೂ ಸಹ ಈ ರೀತಿ ರನೌಟ್ ಮಾಡಬೇಡಿ: ಕೈಫ್ ಕಿವಿಮಾತು
ಪಾಕ್ ತಂಡದ ಆಟಗಾರನ ಸಲ್ಮಾನ್ ಅಲಿ ಅಘಾ ಅವರು ಕ್ರೀಸ್‌ನಿಂದ ಸ್ವಲ್ಪ ಹೊರಬಂದು, ಕೆಳಗೆ ಬಿದ್ದಿದ್ದ ಚೆಂಡನ್ನು ಎತ್ತಿ ಬೌಲರ್‌ಗೆ (ಮಿರಾಝ್) ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಿರಾಝ್ ಅವರು ಚೆಂಡನ್ನು ತಕ್ಷಣವೇ ಎತ್ತಿ ಸ್ಟಂಪ್‌ಗೆ ಎಸೆದು ಔಟ್ ಮಾಡಿದ್ದಾರೆ. ಅತ್ತ ಥರ್ಡ್ ಅಂಪೈರ್ ಪರಿಶೀಲಿಸಿದಾಗ ಸಲ್ಮಾನ್ ಅಲಿ ಅಘಾ ಕ್ರೀಸ್‌ನಿಂದ ಹೊರಗಿರುವುದು ಕಂಡು ಬಂದಿದೆ. ಹೀಗಾಗಿ ಔಟ್ ಎಂದು ತೀರ್ಪು ನೀಡಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ನಾಯಕ ಮೆಹಿದಿ ಹಸನ್ ಮಿರಾಝ್ ಅವರು ಸಲ್ಮಾನ್ ಅಲಿ ಅಘಾ ಅವರನ್ನು ರನ್ ಔಟ್ ಮಾಡಿದ ರೀತಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ವಿಕೆಟ್ ಪಡೆಯುವ ಹಪಾಹಪಿಯು ಕ್ರೀಡಾ ಸ್ಫೂರ್ತಿಗಿಂತ ದೊಡ್ಡದಲ್ಲ. ಇದು ವಿಶ್ವಕಪ್ ಫೈನಲ್ ಪಂದ್ಯವಾಗಿದ್ದರೂ ಸಹ ಇಂತಹ ಕೆಲಸ ಮಾಡಬಾರದು. ಯುವ ಕ್ರಿಕೆಟಿಗರು ಇದನ್ನು ಎಂದಿಗೂ ಅನುಕರಿಸಬಾರದು ಎಂದು ಮೊಹಮ್ಮದ್ ಕೈಫ್ ಸೋಷಿಯಲ್ ಮೀಡಿಯಾ ಮೂಲಕ ಕಿವಿಮಾತು ಹೇಳಿದ್ದಾರೆ.
ಘಟನೆ ಹಿನ್ನಲೆ:
ಪಾಕ್ ತಂಡದ ಆಟಗಾರನ ಸಲ್ಮಾನ್ ಅಲಿ ಅಘಾ ಅವರು ಕ್ರೀಸ್‌ನಿಂದ ಸ್ವಲ್ಪ ಹೊರಬಂದು, ಕೆಳಗೆ ಬಿದ್ದಿದ್ದ ಚೆಂಡನ್ನು ಎತ್ತಿ ಬೌಲರ್‌ಗೆ (ಮಿರಾಝ್) ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಿರಾಝ್ ಅವರು ಚೆಂಡನ್ನು ತಕ್ಷಣವೇ ಎತ್ತಿ ಸ್ಟಂಪ್‌ಗೆ ಎಸೆದು ಔಟ್ ಮಾಡಿದ್ದಾರೆ. ಅತ್ತ ಥರ್ಡ್ ಅಂಪೈರ್ ಪರಿಶೀಲಿಸಿದಾಗ ಸಲ್ಮಾನ್ ಅಲಿ ಅಘಾ ಕ್ರೀಸ್‌ನಿಂದ ಹೊರಗಿರುವುದು ಕಂಡು ಬಂದಿದೆ. ಹೀಗಾಗಿ ಔಟ್ ಎಂದು ತೀರ್ಪು ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಸಲ್ಮಾನ್ ಅಲಿ ಅಘಾ ಅಸಮಾಧಾನ ಹೊರಹಾಕುತ್ತಾ ಮೈದಾನದಿಂದ ತೆರಳಿದ್ದರು. ಇದನ್ನೇ ಪ್ರಸ್ತಾಪಿಸಿ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್, “ಕ್ರೀಡಾ ಸ್ಫೂರ್ತಿ ಇಲ್ಲದ ಆಟ ಆಟವೇ ಅಲ್ಲ” ಎಂದು ಅವರು ಕಿಡಿಕಾರಿದ್ದಾರೆ.
Published on: Mar 14, 2026 07:33 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ