AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ

ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ

ಸುಷ್ಮಾ ಚಕ್ರೆ
|

Updated on: May 16, 2025 | 4:36 PM

ಕೇರಳದ ಪೆರಿಂಗಲಂ-ಕೋಝಿಕೋಡ್ ರಸ್ತೆಯಲ್ಲಿ ಟ್ರಕ್ ಹಿಂದಕ್ಕೆ ಉರುಳಿದ ಹಿನ್ನೆಲೆಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಕೇರಳದ ಮಹಿಳೆಯೊಬ್ಬರು ಭೀಕರ ಅಪಘಾತದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ. ಒಂದು ಟ್ರಕ್ ಬೆಟ್ಟದ ಮೇಲೆ ಉರುಳಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ. ಮಹಿಳೆ ನೆಲಕ್ಕೆ ಬಿದ್ದು ಟ್ರಕ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇಡೀ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ.

ಕೋಝಿಕೋಡ್, ಮೇ 16: ಕೇರಳದ ಕೋಝಿಕೋಡ್‌ನಲ್ಲಿ ತನ್ನ ಸ್ಕೂಟಿಯ ಮುಂದೆ ಚಲಿಸುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡು ಹಿಂದಕ್ಕೆ ಚಲಿಸಲು ಪ್ರಾರಂಭಿಸಿದ ನಂತರ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದಿದ್ದಾರೆ. ಪವಾಡಸದೃಶವಾಗಿ ಆ ಟ್ರಕ್ ಆಕೆಯ ಕಾಲ ಬಳಿಯಿಂದ ಹಾದುಹೋಗಿ ಸ್ಕೂಟಿಯನ್ನು ಅಪ್ಪಚ್ಚಿ ಮಾಡಿದೆ. ಸ್ವಲ್ಪ ಯಾಮಾರಿದ್ದರೂ ಆ ಮಹಿಳೆ ಕೂಡ ಅಪ್ಪಚ್ಚಿಯಾಗುತ್ತಿದ್ದರು. ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ವೀಡಿಯೊ (Viral Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೆರಿಂಗಲಂ ಪಟ್ಟಣದ ರಸ್ತೆಯ ಎತ್ತರದ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ