ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರ ಸರ್ಕಾರ ಎರಡು ವರ್ಷಗಳಿಂದ ಸುಭದ್ರವಾಗಿದೆ: ಶಿವಲಿಂಗೇಗೌಡ
ಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡ ಶಿವಲಿಂಗೇಗೌಡ, ಮಂತ್ರಿ ಮಾಡುವ ಭರವಸೆ ನೀಡಿಯೇ ಸಿದ್ದರಾಮಯ್ಯನವರು ತನ್ನನ್ನು ಜೆಡಿಎಸ್ ನಿಂದ ಕಾಂಗ್ರೆಸ್ಗೆ ಕರೆತಂದಿದ್ದಾರೆ, ಮಂತ್ರಿಸ್ಥಾನ ನೀಡುವ ಆಶ್ವಾಸನೆಯನ್ನು ಪದೇಪದೆ ನೀಡುತ್ತಿದ್ದಾರೆ, ಎರಡೂವರೆ ವರ್ಷಗಳ ನಂತರ ಮಂತ್ರಿಮಂಡಳದ ಪುನಾರಚನೆಯಾದಾಗ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದರು.
ಹಾಸನ, ಮೇ 16: ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಕೆಎಂ ಶಿವಲಿಂಗೇಗೌಡ, ಆರ್ಥಿಕ ತಜ್ಞರಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah) ಎರಡು ವರ್ಷಗಳಿಂದ ಸುಭದ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ, ಬಡವರ ಮನೆಗಳಿಗೆ ಬೇರೆ ಬೇರೆ ಯೋಜನೆಗಳ ಮೂಲಕ ಪ್ರತಿ ತಿಂಳು ₹ 5,000 ತಲುಪಿಸುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ, ವಿರೋಧ ಪಕ್ಷಗಳು ಅವರನ್ನು ಟೀಕಿಸುತ್ತಿವೆ, ಯಾರೇನೇ ಕಾಮೆಂಟ್ ಮಾಡಿದರೂ ಅವರನ್ನು ಏನೂ ಮಾಡಕ್ಕಾಗಲ್ಲ, ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳಬಹುದು ಎಂದು ಹೇಳಿದರು.
ಇದನ್ನೂ ಓದಿ: ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯವಾಗದಿದ್ರೆ ರಾಜ್ಯ ರೆವಿನ್ಯೂ ಸರ್ಪ್ಲಸ್ ಒಳಗಡೆ ಬರಬಹುದು: ಶಿವಲಿಂಗೇಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

