ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿರನ್ನು ಮಂಡಿಯೂರಿ ಕೈ ಮುಗಿದು ಸ್ವಾಗತಿಸಿದ ಅಲ್ಬೇನಿಯಾದ ಪ್ರಧಾನಿ
ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿ ಆಯೋಜಿಸಲಾಗಿದ್ದ ಯುರೋಪಿಯನ್ ರಾಜಕೀಯ ಸಮುದಾಯದ ಶೃಂಗಸಭೆಯಲ್ಲಿ ಅಪರೂಪದ ದೃಶ್ಯವೊಂದು ಎಲ್ಲರ ಗಮನ ಸೆಳೆದಿದೆ. ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿಯವರನ್ನು ಅಲ್ಬೇನಿಯಾದ ಪ್ರಧಾನಿ ಮಂಡಿಯೂರಿ, ಕೈ ಮುಗಿದು ತಮ್ಮ ದೇಶಕ್ಕೆ ಸ್ವಾಗತಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಟಿರಾನಾ, ಮೇ 17: ಅಲ್ಬೇನಿಯಾದ ರಾಜಧಾನಿ ಟಿರಾನಾ (Tirana) ದಲ್ಲಿ ಆಯೋಜಿಸಲಾಗಿದ್ದ ಯುರೋಪಿಯನ್ ರಾಜಕೀಯ ಸಮುದಾಯದ ಶೃಂಗಸಭೆಯಲ್ಲಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italian Prime Minister Giorgia Meloni)ರನ್ನು ಅಲ್ಬೇನಿಯಾ ಪ್ರಧಾನಿ ಎಡಿ ರಾಮ (Albanian Prime Minister Edi Ram) ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಹೌದು, ಇಟಲಿ ಪ್ರಧಾನಿ ಯುರೋಪಿಯನ್ ರಾಜಕೀಯ ಸಮುದಾಯದ ಶೃಂಗಸಭೆಯಲ್ಲಿ ಭಾಗವಹಿಸಲು ಟಿರಾನಾ ತಲುಪುತ್ತಿದ್ದಂತೆ ಅಲ್ಲಿನ ಪ್ರಧಾನಿ ಮಂಡಿಯೂರಿ ಕೈ ಮುಗಿದು ನಮಸ್ಕರಿಸುವ ಮೂಲಕ ತಮ್ಮ ದೇಶಕ್ಕೆ ಬರಮಾಡಿಕೊಂಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿಭಿನ್ನವಾಗಿ ಸ್ವಾಗತ ಕೋರಿದ ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@joeymannarinoUS ಹೆಸರಿನ ಖಾತೆಯಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿಯವರನ್ನು ಅಲ್ಬೇನಿಯಾದ ಪ್ರಧಾನಿ ಮಂಡಿಯೂರಿ, ಕೈ ಮುಗಿದು ಸ್ವಾಗತಿಸಿದ ಕ್ಷಣದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಳೆ ಬರುತ್ತಿರುವುದನ್ನು ಗಮನಿಸಬಹುದು. ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಅವರು ನೀಲಿ ಬಣ್ಣದ ಕೊಡೆಯನ್ನು ಪಕ್ಕದಲ್ಲಿಟ್ಟು, ಇಟಾಲಿಯನ್ ಪ್ರಧಾನಿ ಮೆಲೋನಿ ಬರುತ್ತಿದ್ದಂತೆ ರೆಡ್ ಕಾರ್ಪೆಟ್ ಮೇಲೆ ಮಂಡಿಯೂರಿ ಕುಳಿತಿದ್ದಾರೆ. ಇಟಲಿ ಪ್ರಧಾನಿ ಮೆಲೋನಿಯ ತಮ್ಮ ಹತ್ತಿರ ಬರುತ್ತಿದ್ದಂತೆ, ಪ್ರಧಾನಿ ಎಡಿ ರಾಮ ತನ್ನ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದು ನಮಸ್ಕರಿಸಿದ್ದು ಈ ಮೂಲಕ ಸ್ವಾಗತ ಕೋರಿರುವುದನ್ನು ಕಾಣಬಹುದು. ಸ್ವಾಗತ ಕೋರಿದ ರೀತಿಗೆ ಮೆಲೋನಿ ನಕ್ಕಿದ್ದು, ತದನಂತರದಲ್ಲಿ ಈ ಇಬ್ಬರೂ ನಾಯಕರು ಪರಸ್ಪರ ಅಪ್ಪಿಕೊಳ್ಳುವುದನ್ನು ಕಾಣಬಹುದು.
ಇದನ್ನೂ ಓದಿ : ಏಜ್ ಇಸ್ ಜಸ್ಟ್ ಎ ನಂಬರ್ : ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Giorgia Meloni truly commands the utmost respect of world leaders. This is quite the sight to see. pic.twitter.com/xBp3d0Qi7j
— Joey Mannarino 🇺🇸 (@JoeyMannarinoUS) May 16, 2025
ಈ ವಿಡಿಯೋವೊಂದು ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಸುಂದರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಬುದ್ಧಿವಂತೆ, ದೃಢ ನಿಶ್ಚಯ ಹೊಂದಿರುವವಳು, ಯಾವುದಕ್ಕೂ ಅಂಜದ ಸುಂದರಿ ಒಟ್ಟಾರೆ ಆಕೆ ಪೂರ್ಣ ಪ್ರಮಾಣದ ಪ್ಯಾಕೇಜ್ ಎಂದಿದ್ದಾರೆ. ಮತ್ತೊಬ್ಬರು, ಈ ರೀತಿ ಸ್ವಾಗತಕ್ಕೆ ಅವಳು ಅರ್ಹಳು ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಜತೆಗೆ ಅನೇಕ ಭಾರತೀಯರು ಕೂಡ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಅಯ್ಯೋ ಮೋದಿಜೀ ಇಲ್ಲಿ ನೋಡಿ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




