ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್; ಈ ಕಂಪೆನಿಯಲ್ಲಿ ಭಾರೀ ಸವಲತ್ತು
ಈಗಿನ ಕಾಲದಲ್ಲಿ ಎಷ್ಟು ಓದಿದ್ದರೂ ಕೂಡ ಒಳ್ಳೆಯ ಉದ್ಯೋಗ ಸಿಗುವುದು ಕಷ್ಟವೇ. ಹೀಗಾಗಿ ಯುವಕ ಯುವತಿಯರು ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ಉದ್ಯೋಗಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲ ಕಂಪೆನಿಗಳು ಈ ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಹೌದು, ಕಂಪನಿಯು ಉದ್ಯೋಗ ಜಾಹೀರಾತಿನಲ್ಲಿ ಉದ್ಯೋಗಿಗಳಿಗೆ ಇರಬೇಕಾದ ಅರ್ಹತೆಗಳು, ಸಂಬಳದ ಜೊತೆಗೆ ಕೆಲಸದ ವಿವರಗಳನ್ನು ಉಲ್ಲೇಖಿಸುವುದು ಸಹಜ. ಆದರೆ ಚೀನಿ ಕಂಪೆನಿಯ ಉದ್ಯೋಗ ಜಾಹೀರಾತಿನ ಪೋಸ್ಟ್ ವೈರಲ್ ಆಗಿದ್ದು, ಇದನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ಕೈ ತುಂಬಾ ಸಂಬಳ ಸಿಗುವ ಉದ್ಯೋಗ (job) ಸಿಕ್ಕರೆ ಸಾಕು, ಲೈಫ್ ಸೆಟ್ಲ್ ಆದ ಹಾಗೆ, ಅಂದುಕೊಳ್ಳುವವರೇ ಹೆಚ್ಚು. ಹೀಗಾಗಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರನ್ನು ನೋಡಿರಬಹುದು. ಇನ್ನು ಕೆಲವು ಕಂಪೆನಿಗಳು ಯೋಗ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಜಾಹೀರಾತನ್ನು ಪ್ರಕಟಿಸುತ್ತದೆ. ಈ ಜಾಹೀರಾತಿನಲ್ಲಿ ಉದ್ಯೋಗಿಗೆ ಇರಬೇಕಾದ ಅರ್ಹತೆಗಳು, ಸಂಬಳ, ಸಮಯ ಹಾಗೂ ಕೆಲಸದ ವಿವರಗಳಿರುತ್ತದೆ. ಕೆಲವೊಮ್ಮೆ ಯುವಕ ಹಾಗೂ ಯುವತಿಯರನ್ನು ಆಕರ್ಷಿಸಲು ಹೆಚ್ಚುವರಿ ಭತ್ಯೆಗಳನ್ನು ನೀಡುವುದಾಗಿ ತಮ್ಮ ಜಾಹೀರಾತಿನಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಆದರೆ ಚೀನಾದ ಕಂಪೆನಿ (Chinese Company) ಯೊಂದು ಒಂದು ಹೆಜ್ಜೆ ಮುಂದೆ ಹೋಗಿದ್ದು, ಉದ್ಯೋಗಿಗಳಿಗೆ ನೀಡಲಾಗುವ ಭತ್ಯೆಗಳೊಂದಿಗೆ ವಿಚಿತ್ರವಾದ ಸವಲತ್ತುಗಳನ್ನು ಉಲ್ಲೇಖಿಸಿದ್ದು, ಇದು ಚರ್ಚೆಗೆ ಕಾರಣವಾಗಿದೆ.
ವರ್ಕ್ ಪ್ಲೇಸ್ ಸ್ಲ್ಯಾಕರ್ಸ್ ಹೆಸರಿನ ಖಾತೆಯಲ್ಲಿ ಈ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಚೀನಿ ಕಂಪೆನಿ ಪ್ರಕಟಿಸಿದ ಜಾಹೀರಾತಿನಲ್ಲಿ ಉದ್ಯೋಗಿಗಳಿಗೆ ನೀಡಲಾಗುವ ವಿಲಕ್ಷಣ ಸವಲತ್ತುಗಳನ್ನು ನೋಡಬಹುದು. ಇದರಲ್ಲಿ ಎಕ್ಸೆಲ್ ಕೌಶಲ್ಯ ಹಾಗೂ ಅನುಭವವಿರುವ ಅಭ್ಯರ್ಥಿಗಳ ಅಗತ್ಯವಿದೆ ಎಂದು ಬರೆಯಲಾಗಿದೆ.
ಅದಲ್ಲದೇ, ಇಲ್ಲಿ ಎರಡು ಶಿಫ್ಟ್ ಗಳಿದ್ದು, ಎಂಟು ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡಬೇಕಾಗುತ್ತದೆ ಎಂದು ಉದ್ಯೋಗ ಜಾಹೀರಾತಿನಲ್ಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಮೊದಲ ಶಿಫ್ಟ್ ಇರಲಿದ್ದು, ಮಧ್ಯಾಹ್ನ 1 ರಿಂದ ರಾತ್ರಿ 10 ರವರೆಗೆ ಎರಡನೇ ಶಿಫ್ಟ್ ಇರಲಿದೆ. ಒಂದು ಗಂಟೆ ವಿರಾಮದ ಸಮಯವಿದ್ದು, ಪ್ರೊಬೇಷನರಿ ಅವಧಿಯಲ್ಲಿ ಮಾಸಿಕ ವೇತನ 4,000 ಯುವಾನ್ (US$550) ಉದ್ಯೋಗಿಗಳ ಕೈ ಸೇರುತ್ತದೆ. ಅದಲ್ಲದೆ ನೌಕರರಿಗೆ ತಿಂಗಳಿಗೆ ನಾಲ್ಕು ದಿನ ರಜೆಯಿದ್ದು ಹಾಗೂ ರಾಷ್ಟ್ರೀಯ ರಜಾದಿನಗಳಲ್ಲಿ ಎರಡು ಪಟ್ಟು ವೇತನ ಸಿಗುತ್ತದೆ. ಈ ಒಂದು ವರ್ಷ ಕೆಲಸ ಮಾಡಿದರೆ ಉದ್ಯೋಗಿಗಳಿಗೆ 100-ಯುವಾನ್ ನಷ್ಟು ಮಾಸಿಕ ಮೂಲ ವೇತನ ಹೆಚ್ಚಳವಾಗುತ್ತದೆ. ಅದರೊಂದಿಗೆ ಈ ಉದ್ಯೋಗಿಗಳಿಗೆ ಟೀಮ್ ಬಿಲ್ಡಿಂಗ್ ಚಟುವಟಿಕೆಗಳು, ಮಧ್ಯಾಹ್ನದ ಚಹಾ ಹಾಗೂ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವವರಿಗೆ ಸ್ನಾಕ್ಸ್ ಸೇರಿದಂತೆ ಇನ್ನಿತ್ತರ ಸವಲತ್ತುಗಳು ಸೇರಿಕೊಂಡಿವೆ.
ಇದನ್ನೂ ಓದಿ : ನಿನ್ನ ನಾಟಕ ಸಾಕು, ಖರ್ಚು ಮಾಡಿದ ದುಡ್ಡನ್ನು ವಾಪಸ್ಸು ಕೊಡು ಅಷ್ಟೇ, ಕೈ ಕೊಟ್ಟ ಹುಡುಗಿಗೆ ಶಾಕ್ ಕೊಟ್ಟ ಮಾಜಿ ಪ್ರಿಯಕರ
ಈ ಉದ್ಯೋಗ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಬಳಕೆದಾರರೊಬ್ಬರು, ‘ಈ ರೀತಿ ವಿಲಕ್ಷಣ ಸವಲತ್ತುಗಳನ್ನು ನೀಡುವ ವಿಚಿತ್ರ ಕಂಪೆನಿಗಳು ಸಾಕಷ್ಟು ಇವೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಚೀನಾದಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ಸ್ವರೂಪವನ್ನು ಇದು ಎತ್ತಿ ತೋರಿಸುತ್ತಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಉದ್ಯೋಗ ಜಾಹೀರಾತಿನಲ್ಲಿ ಈ ರೀತಿ ವಿಲಕ್ಷಣವಾದ ಸವಲತ್ತುಗಳ ಪಟ್ಟಿಯನ್ನು ಉಲ್ಲೇಖಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








