AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ? ಮಾಡುವುದು ತುಂಬಾ ಸುಲಭ

ಐಸ್ ಆಪಲ್​​ ಈ ಬೇಸಿಗೆಗೆ ತುಂಬಾ ಉಪಯುಕ್ತವಾಗಿದೆ. ಇದು ದೇಹವನ್ನು ತಂಪಾಗಿರಿಸುತ್ತದೆ. ಆರೋಗ್ಯದ ದೃಷ್ಟಿಯಲ್ಲೂ ಇದು ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಐಸ್ ಆಪಲ್ ಮಿಲ್ಕ್‌ಶೇಕ್ ಮಾಡಿ ಕುಡಿಯುವುದು ಇನ್ನು ಒಳ್ಳೆಯದು. ಈ ಐಸ್ ಆಪಲ್ ಮಿಲ್ಕ್‌ಶೇಕ್ ಮಾಡುವುದು ಹೇಗೆ ಎಂಬ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಐಸ್ ಆಪಲ್ ಮಿಲ್ಕ್‌ಶೇಕ್ ಮಾಡುವ ವಿಧಾನ ಇಲ್ಲಿದೆ.

Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ? ಮಾಡುವುದು ತುಂಬಾ ಸುಲಭ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: May 19, 2025 | 6:07 PM

Share

ಈ ಬೇಸಿಗೆಯಲ್ಲಿ ಐಸ್ ಆಪಲ್​​ಗಳ (ice apple) ವ್ಯಾಪಾರ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಐಸ್ ಆಪಲ್ ಗೆ ಬೇಡಿಕೆ ಹೆಚ್ಚು, ಬೆಂಗಳೂರಿನ ಬಿದಿ ಬಿದಿಯಲ್ಲಿ ಐಸ್ ಆಪಲ್ ಸಿಗುತ್ತಿದೆ. ಆದರೆ ಈ ಐಸ್ ಆಪಲ್ ಮಿಲ್ಕ್‌ಶೇಕ್ (ice apple shake) ಯಾವತ್ತಾದರೂ ಸೇವನೆ ಮಾಡಿದ್ದೀರಾ? ಖಂಡಿತ, ಯಾಕೆಂದರೆ ಐಸ್ ಆಪಲ್ ಮಿಲ್ಕ್‌ಶೇಕ್ ತಯಾರಿಸುವುದು ಹೇಗೆ ಎಂಬ ಬಗ್ಗೆ ಐಡಿಯಾ ಕೂಡ ಇರಲ್ಲ, ಈ ಐಸ್ ಆಪಲ್​ನ್ನು ತಾಳೆ ಹಣ್ಣು ಎಂದು ಕರೆಯುತ್ತೇವೆ. ಇದು ಬೇಸಿಗೆಯಲ್ಲಿ ತುಂಬಾ ತಂಪು ಅನುಭವವನ್ನು ನೀಡುತ್ತದೆ.ಈ ಬೇಸಿಗೆಯಲ್ಲಿ ಹೆಚ್ಚು ಮಾರಾಟ ಆಗುತ್ತಿದ್ದು, ಸಿಹಿಯಾಗಿ, ಆರೋಗ್ಯಕರವಾಗಿ ತಾಳೆ ಹಣ್ಣು ಇರುತ್ತದೆ. ಇದರ ಮಿಲ್ಕ್‌ಶೇಕ್ ಮಾಡಿ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಈಗಾಗಲೇ ಈ ವಿಡಿಯೋ 4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಮೊದಲಿಗೆ ಐಸ್ ಆಪಲ್ ಕತ್ತರಿಸುವುದನ್ನು ಕಾಣಬಹುದು, ನಂತರ ಅದರ ಹಸಿರು ಭಾಗಗಳನ್ನು ತೆಗೆದು, ಚಾಕುವನ್ನು ಬಳಸಿ, ಅದರ ಹೊರ ಪದರದಿಂದ ತಿರುಳನ್ನು ತೆಗೆಯುತ್ತಾರೆ. ಆ ಇಡೀ ಐಸ್ ಆಪಲ್​​ನಲ್ಲಿ ಒಳಗೆ ಕಣ್ಣಿನಂತಿರುವ ಬಿಳಿಯಾದ ಹೋಳಿನಲ್ಲಿ ಎಲ್ಲವು ಅಡಗಿದೆ. ಅದನ್ನು ತೆಗೆಯುವುದು ದೊಡ್ಡ ಸಾಹಸವಾಗಿದೆ. ನಂತರ ಒಂದು ಬೌಲ್​​ನಲ್ಲಿ ಒಂದು ಹಿಡಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಅವುಗಳ ಸಿಪ್ಪೆ ಸುಲಿದು, ಪ್ರತ್ಯೇಕ ಪಾತ್ರೆಯಲ್ಲಿ ಹಾಕುತ್ತಾರೆ. ನಂತರ ಚಿಯಾ ಬೀಜಗಳನ್ನು ಬೌಲ್​​ನಲ್ಲಿ ಹಾಕಿ. ಅದಕ್ಕೆ ನೀರು ಹಾಗೂ ಬೆಲ್ಲವನ್ನು ಹಾಕುತ್ತಾರೆ. ನಂತರ ಒಂದು ಮಿಕ್ಸಿ ಜಾರ್​​​ಗೆ ತೆಗೆದುಕೊಂಡು ಅದಕ್ಕೆ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯ ಸಿಪ್ಪೆ ತೆಗೆದು ಹಾಕುತ್ತಾರೆ. ಆದನಂತರ ಅದಕ್ಕೆ ಐಸ್ ಆಪಲ್ ತಿರುಳು, ಬೆಲ್ಲ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ತಿಳಿಸುತ್ತಂತೆ ನಿಮ್ಮ ರಹಸ್ಯ ಗುಣ ಸ್ವಭಾವ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Nalla Iruku (@nalla_irukuuu)

ಈ ಮಿಶ್ರಣ ಆದ್ಮೇಲೆ, ಒಂದು ದೊಡ್ಡ​​​ ಲೋಟಕ್ಕೆ ಈ ನೆನೆಸಿದ ಚಿಯಾ ಬೀಜ, ಹೆಪ್ಪುಗಟ್ಟಿದ ಹಾಲು, ಜೊತೆಗೆ ಐಸ್ ಆಪಲ್ ಪೇಸ್ಟ್ ಹಾಕುತ್ತಾರೆ. ಅಲಂಕಾರ ಮತ್ತು ಹೆಚ್ಚುವರಿ ಸುವಾಸನೆಗಾಗಿ ಕತ್ತರಿಸಿದ ಐಸ್ ಆಪಲ್ ತಿರುಳನ್ನು ಸಣ್ಣ ತುಂಡುಗಳಾಗಿ ಮಾಡಿ ಹಾಕುತ್ತಾರೆ. ಮತ್ತೆ ಅದಕ್ಕೆ ಹಾಲು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುತ್ತಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಐಸ್ ಆಪಲ್ ಮಿಲ್ಕ್‌ಶೇಕ್ ಪಾಕವಿಧಾನಕ್ಕೆ ಆಹಾರಪ್ರಿಯರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು, “ದಯವಿಟ್ಟು ನನಗಾಗಿ ಒಂದನ್ನು ನೀಡಬಹುದೇ…” ಕೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ನನಗೆ ಈ ಹಣ್ಣು ತುಂಬಾ ಇಷ್ಟ!” ಎಂದು ಕಮೆಂಟ್ ಮಾಡಿದ್ದಾರೆ. ಇದು ಮಿಲ್ಕ್ ಶೇಕ್ ಅಲ್ಲ ಆದರೆ ಈಗ ಅದು ಫಲೂದಾ ಎಂದು ಮತ್ತೊಬ್ಬ ಕಾಮೆಂಟ್​​ ಮಾಡಿದ್ದಾರೆ. ಅನೇಕರು ಈ ಪಾಕವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್