AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತು ಉಳಿಸಿಕೊಂಡ ನಟ ಅಲ್ಲು ಅರ್ಜುನ್: ಭೇಷ್ ಎಂದ ನೆಟ್ಟಿಗರು

Allu Arjun social work: ಅಲ್ಲು ಅರ್ಜುನ್, ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಈ ಹಿಂದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದ ಅಲ್ಲು ಅರ್ಜುನ್, ಆ ಕಾರ್ಯವನ್ನು ಜೀವನ ಪರ್ಯಂತ ಮಾಡುವುದಾಗಿ ಹೇಳಿದ್ದರು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.

ಕೊಟ್ಟ ಮಾತು ಉಳಿಸಿಕೊಂಡ ನಟ ಅಲ್ಲು ಅರ್ಜುನ್: ಭೇಷ್ ಎಂದ ನೆಟ್ಟಿಗರು
Allu Arjun Social Service
ಮಂಜುನಾಥ ಸಿ.
|

Updated on: Mar 19, 2026 | 7:20 PM

Share

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳ ಬಳಿಕ ಅಲ್ಲು ಅರ್ಜುನ್ ರೇಂಜ್ ಭಾರತದ ಗಡಿ ದಾಟಿದೆ. ಇದೀಗ ಭಾರತದ ಸ್ಟಾರ್ ನಿರ್ದೇಶಕರುಗಳು ಒಬ್ಬರಾದ ಬಳಿಕ ಒಬ್ಬರೆಂಬಂತೆ ಅಲ್ಲು ಅರ್ಜುನ್ ಜೊತೆ ಸಾಲುಗಟ್ಟಿ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಈ ಹಿಂದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದ ಅಲ್ಲು ಅರ್ಜುನ್, ಆ ಕಾರ್ಯವನ್ನು ಜೀವನ ಪರ್ಯಂತ ಮಾಡುವುದಾಗಿ ಹೇಳಿದ್ದರು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.

ಕಳೆದ ತಿಂಗಳ ಅಂತ್ಯದಲ್ಲಿ ಅಂದರೆ ಫೆಬ್ರವರಿ 28ರಂದು ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಸಮಲಕೋಟ ಮಂಡಲದ ವೆಟ್ಲಪಾಲೆಂ ಹೆಸರಿನ ಹಳ್ಳಿಯೊಂದರಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ 22 ಮಂದಿ ಮೃತರಾಗಿ ಹಲವಾರು ಮಂದಿ ಗಾಯಗೊಂಡಿದ್ದರು. ಅವಘಡದಲ್ಲಿ ಮೃತರಾದ ವ್ಯಕ್ತಿಗಳ ಹಿನ್ನೆಲೆ, ಅವರ ಕುಟುಂಬದ ಹಿನ್ನೆಲೆಗಳ ಬಗ್ಗೆ ಆ ನಂತರ ಹಲವು ವರದಿಗಳು ಪ್ರಕಟಗೊಂಡವು. ಇದೇ ಅವಘಡದಲ್ಲಿ ಕಡಿಂಪಲ್ಲಿ ಧನರಾಜು ಹೆಸರಿನ ವ್ಯಕ್ತಿ ಮೃತರಾಗಿದ್ದರು. ಅವರಿಗೆ ಮಗಳೊಬ್ಬಳಿದ್ದು, ಆಕೆ ಬುದ್ಧಿಮಾಂದ್ಯತೆ ಹೊಂದಿದ್ದರು. ಇದ್ದ ಒಬ್ಬ ತಂದೆಯನ್ನು ಕಳೆದುಕೊಂದ್ದ ಕಡಿಂಪಲ್ಲಿ ದುರ್ಗ ಪರಿಸ್ಥಿತಿ ಅಂಧಕಾರದಲ್ಲಿ ಮುಳುಗುವುದರಲ್ಲಿತ್ತು. ಆದರೆ ಅಲ್ಲು ಅರ್ಜುನ್ ಆ ಬಾಲಕಿಗೆ ನೆರವಾಗುವುದಾಗಿ ಘೋಷಿಸಿದರು.

ಆಕೆ ಇರುವವರೆಗೆ ಆಕೆಯ ಜೀವನಕ್ಕಾಗಿ ಪ್ರತಿತಿಂಗಳು 7500 ರೂಪಾಯಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದರು. ಅಲ್ಲದೆ ತನ್ನ ಅಭಿಮಾನಿ ಬಳಗಕ್ಕೂ ಸಹ ಕಡಿಂಪಲ್ಲಿ ದುರ್ಗಾಗೆ ನೆರವಾಗುವಂತೆ ಮನವಿ ಮಾಡಿದರು. ಅದರಂತೆ ಇದೀಗ ಕಂಡಿಪಲ್ಲಿ ದುರ್ಗಾರ ಖಾತೆಗೆ ಹಣವನ್ನು ಅಲ್ಲು ಅರ್ಜುನ್ ಹಾಕಿದ್ದಾರೆ. ಕಂಡಿಪಲ್ಲಿ ದುರ್ಗ ಜೀವನ ಪರ್ಯಂತ ಅಲ್ಲು ಅರ್ಜುನ್ ಅವರು ಪ್ರತಿತಿಂಗಳು 7500 ರೂಪಾಯಿ ಹಣವನ್ನು ಹಾಕಲಿದ್ದಾರೆ. ಅಲ್ಲು ಅರ್ಜುನ್ ಅವರು ಒಬ್ಬ ಬುದ್ದಿಮಾಂದ್ಯ ಯುವತಿಯ ಜೀವನಕ್ಕಾಗಿ ಮಾಡುತ್ತಿರುವ ಈ ಮಾನವೀಯ ಸಹಾಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ಅಲ್ಲು ಅರ್ಜುನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ

ಈ ಹಿಂದೆ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಕಾಲ್ತುಳಿತದಿಂದ ಒಬ್ಬ ಮಹಿಳೆ ಮೃತಪಟ್ಟು, ಆಕೆಯ ಮಗ ಕೋಮಾಕ್ಕೆ ಜಾರಿದ್ದ. ಅವರಿಗೂ ಸಹ ಅಲ್ಲು ಅರ್ಜುನ್ ಕೋಟ್ಯಂತರ ರೂಪಾಯಿ ಸಹಾಯ ಮಾಡಿದ್ದು ಮಾತ್ರವೇ ಅಲ್ಲದೆ, ಈಗಲೂ ಕೋಮಾನಲ್ಲಿಯೇ ಇರುವ ಆ ಬಾಲಕನ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅಲ್ಲು ಅರ್ಜುನ್ ಅವರೇ ಭರಿಸುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ ಇನ್ನೂ ಹಲವು ಸಾಮಾಜಿಕ ಕಾರ್ಯಗಳಲ್ಲಿ ಅಲ್ಲು ಅರ್ಜುನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ