AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಭಾಗದ ಅಸಮಾಧಾನಿತ ಶಾಸಕರ ಸಭೆ: ವಿಚಾರ ತಿಳಿದು ಓಡೋಡಿ ಬಂದ ಯತೀಂದ್ರ

ಮೈಸೂರು ಭಾಗದ ಅಸಮಾಧಾನಿತ ಶಾಸಕರ ಸಭೆ: ವಿಚಾರ ತಿಳಿದು ಓಡೋಡಿ ಬಂದ ಯತೀಂದ್ರ

ರಾಮ್​, ಮೈಸೂರು
| Edited By: |

Updated on: Aug 11, 2026 | 4:47 PM

Share

ರಾಜ್ಯದಲ್ಲಿ ನೂತನವಾಗಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ಅದರಲ್ಲೂ ಸಚಿವ ಸಂಪುಟ ಪುನಾರಚನೆ (Karnataka Cabinet Expansion) ಆದ ಬಳಿಕ ಕಾಂಗ್ರೆಸ್ (Karnataka Congress) ಒಳಗೆ ಅಸಮಾಧಾನದ ಹೊಗೆ ಬಹಿರಂಗವಾಗಿ ಭುಗಿಲೇಳುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಭಿನ್ನಮತ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಖುದ್ದು ಅಸಮಾಧಾನಿತ ಹಿರಿಯ ಶಾಸಕರ ಮನೆಗೆ ತೆರಳಿ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದರೂ ಸಹ ಕೆಲ ಹಿರಿಯ ಶಾಸಕರ ಅಸಮಾಧಾನ ತಣ್ಣಗಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ, ಹಿರಿಯ ನಾಯಕ ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆ ನಡೆಸಿದ್ದಾರೆ.

ಮೈಸೂರು, (ಆಗಸ್ಟ್ 11): ರಾಜ್ಯದಲ್ಲಿ ನೂತನವಾಗಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ಅದರಲ್ಲೂ ಸಚಿವ ಸಂಪುಟ ಪುನಾರಚನೆ (Karnataka Cabinet Expansion) ಆದ ಬಳಿಕ ಕಾಂಗ್ರೆಸ್ (Karnataka Congress) ಒಳಗೆ ಅಸಮಾಧಾನದ ಹೊಗೆ ಬಹಿರಂಗವಾಗಿ ಭುಗಿಲೇಳುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಭಿನ್ನಮತ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಖುದ್ದು ಅಸಮಾಧಾನಿತ ಹಿರಿಯ ಶಾಸಕರ ಮನೆಗೆ ತೆರಳಿ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದರೂ ಸಹ ಕೆಲ ಹಿರಿಯ ಶಾಸಕರ ಅಸಮಾಧಾನ ತಣ್ಣಗಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ, ಹಿರಿಯ ನಾಯಕ ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆ ನಡೆಸಿದ್ದಾರೆ. ಇದು ಸಚಿವ ಯತೀಂದ್ರ ಸಿದ್ದರಾಮಯ್ಯನವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ನೇರವಾಗಿ ಅಸಮಾಧಾನಿತ ಶಾಸಕರ ಸಭೆ ಸ್ಥಳಕ್ಕೆ ತೆರಳಿ ಸಮಾಧಾನ ಮಾಡುವ ಕಸರತ್ತು ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us