AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವೀಯತೆ ಮೆರೆದ ಬಂಗಾರಪೇಟೆ ಶಾಸಕ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ನೆರವಿಗೆ ಧಾವಿಸಿದ ಎಸ್.ಎನ್.ನಾರಾಯಣಸ್ವಾಮಿ

ಮಾನವೀಯತೆ ಮೆರೆದ ಬಂಗಾರಪೇಟೆ ಶಾಸಕ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ನೆರವಿಗೆ ಧಾವಿಸಿದ ಎಸ್.ಎನ್.ನಾರಾಯಣಸ್ವಾಮಿ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Aug 11, 2026 | 2:29 PM

Share

ಕೋಲಾರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ನೆರವಿಗೆ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಧಾವಿಸಿದರು. ಅವರು ತಕ್ಷಣ ತುರ್ತು ಸೇವೆಗೆ (108) ಕರೆ ಮಾಡಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ತನಕ ಸ್ಥಳದಲ್ಲಿದ್ದರು. ಶಾಸಕರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಅವರ ಸಕಾಲಿಕ ಸ್ಪಂದನೆ ಜೀವ ಉಳಿಸಲು ನೆರವಾಯಿತು.

ಕೋಲಾರ, ಆ.11: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನೊಬ್ಬನ ನೆರವಿಗೆ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಧಾವಿಸುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಬಂಗಾರಪೇಟೆಯಿಂದ ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಹುದುಕುಳ ಬಳಿ ಬೈಕ್ ಸವಾರನೊಬ್ಬ ರಸ್ತೆ ಅಪಘಾತಕ್ಕೆ ಈಡಾಗಿ ತೀವ್ರವಾಗಿ ಗಾಯಗೊಂಡು ಬಿದ್ದಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ತಮ್ಮ ವಾಹನವನ್ನು ತಡೆದು ಗಾಯಾಳುವಿನ ಬಳಿಗೆ ತೆರಳಿದರು. ಘಟನಾ ಸ್ಥಳದಲ್ಲೇ ಇದ್ದು ತಕ್ಷಣವೇ ತುರ್ತು ಸೇವೆಗೆ (108 ಆಂಬ್ಯುಲೆನ್ಸ್) ಕರೆ ಮಾಡಿದ ಶಾಸಕರು, ಗಾಯಾಳು ಬೈಕ್ ಸವಾರನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸುವ ವರೆಗೆ ಸ್ಥಳದಲ್ಲೇ ಇದ್ದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟ ನಂತರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕೋಲಾರದ ಕೆಡಿಪಿ ಸಭೆಗೆ ತೆರಳಿದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಗಾಯಾಳುವಿನ ಜೀವ ಉಳಿಸಲು ನೆರವಾದ ಶಾಸಕರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us