AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ

ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ

ಸುಷ್ಮಾ ಚಕ್ರೆ
|

Updated on: Mar 19, 2026 | 7:01 PM

Share

ಹಾವುಗಳಂತಹ ಅಪಾಯಕಾರಿ ಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಏಕೆಂದರೆ ಅವು ಪ್ರಾಣವನ್ನೇ ತೆಗೆಯಬಹುದು. ಆದರೆ, ಈ ಮಗುವನ್ನು ನೋಡಿ. ಈ ಬಾಲಕ ಹಾವಿನೊಂದಿಗೆ ಎಂತಹ ಸಾಹಸ ಮಾಡಿದನೆಂದರೆ ನೋಡುಗರು ಆಶ್ಚರ್ಯಚಕಿತರಾದರು. ಅವನು ಹಾವನ್ನು ಹುತ್ತದಿಂದ ಹೊರತೆಗೆದು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಬರಿಗೈಯಲ್ಲಿ ಹಿಡಿದನು. ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ, ಮಾರ್ಚ್ 19: ಈಗಿನ ಮಕ್ಕಳು ಸದಾ ಮೊಬೈಲ್ ಫೋನ್​ನಲ್ಲೇ ಮುಳುಗಿರುತ್ತಾರೆ. ಆದರೆ, ಹಳ್ಳಿಗಳಲ್ಲಿ ಇನ್ನೂ ಮಕ್ಕಳು ಪ್ರಕೃತಿಯ ಜೊತೆ ಹೆಚ್ಚು ಒಡನಾಡುತ್ತಾರೆ. ಇಲ್ಲೊಬ್ಬ ಪುಟ್ಟ ಬಾಲಕ ಬರಿಗೈಯಲ್ಲಿ ಹುತ್ತದೊಳಗೆ ಕೈಹಾಕಿ ಹಾವಿನ ಬಾಲ ಹಿಡಿದು ಹೊರಗೆ ಎಳೆದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ. ಆ ಬಾಲಕನ ಆತ್ಮವಿಶ್ವಾಸ ಎಲ್ಲರನ್ನೂ ಬೆರಗುಗೊಳಿಸಿದೆ. ಆ ಬಾಲಕನ ಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಆ ಹಾವಿಗೆ ಮಿಸುಕಾಡಲೂ ಆಗಲಿಲ್ಲ. ಈ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ @TheVibeBandit ಎಂಬ ಖಾತೆ ಹಂಚಿಕೊಂಡಿದೆ. 23 ಸೆಕೆಂಡುಗಳ ಈ ವಿಡಿಯೋವನ್ನು ಈಗಾಗಲೇ ಎಂಟೂವರೆ ಲಕ್ಷ ಜನರು ವೀಕ್ಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More