AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ 19 ದಿನಕ್ಕೆ 1,704 ಕೋಟಿ ರೂಪಾಯಿ ಗಳಿಕೆ; 2,000 ಕೋಟಿ ಕ್ಲಬ್ ಸೇರುತ್ತಾ ಸಿನಿಮಾ?

ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಿಡುಗಡೆಯಾದ 19 ದಿನಗಳ ಅಂತ್ಯಕ್ಕೆ ವಿಶ್ವಾದ್ಯಂತ ಬರೋಬ್ಬರಿ 1,704.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 19ನೇ ದಿನದಂದು ದೇಶಾದ್ಯಂತ 12.70 ಕೋಟಿ ನೆಟ್ ಗಳಿಸಿರುವ ಈ ಸಿನಿಮಾ 2,000 ಕೋಟಿ ಕ್ಲಬ್ ಸೇರುತ್ತದೆಯೇ ನೋಡಬೇಕು.

‘ರಾಮಾಯಣ’ 19 ದಿನಕ್ಕೆ 1,704 ಕೋಟಿ ರೂಪಾಯಿ ಗಳಿಕೆ; 2,000 ಕೋಟಿ ಕ್ಲಬ್ ಸೇರುತ್ತಾ ಸಿನಿಮಾ?
ರಾಮಾಯಣ
ರಾಜೇಶ್ ದುಗ್ಗುಮನೆ
|

Updated on: Nov 24, 2026 | 7:01 AM

Share

ಮುಖ್ಯಾಂಶಗಳು

  • 19ನೇ ದಿನವೂ ಮುಂದುವರಿದ 'ರಾಮಾಯಣ' ಬಾಕ್ಸ್ ಆಫೀಸ್ ಅಬ್ಬರ
  • ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ
  • 18ನೇ ದಿನಕ್ಕೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಶೇ. 64.3 ರಷ್ಟು ಕುಸಿತ

ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ರಾಮಾಯಣ‘ ಬಾಕ್ಸ್ ಆಫೀಸ್‌ನಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಬಿಡುಗಡೆಯಾದ 19ನೇ ದಿನದಂದು ದೇಶಾದ್ಯಂತ ಒಟ್ಟು 12.70 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಪ್ರದರ್ಶನಗೊಂಡ ಒಟ್ಟು 15,696 ಪ್ರದರ್ಶನಗಳಲ್ಲಿ ಪ್ರತಿ ಪ್ರದರ್ಶನಕ್ಕೆ ಸರಾಸರಿ 8,091 ಗಳಿಕೆಯನ್ನು ಈ ಚಿತ್ರ ದಾಖಲಿಸಿದೆ.

ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಹಿಂದಿ ಅವತರಣಿಕೆಯು 13,442 ಪ್ರದರ್ಶನಗಳಿಂದ 9.25 ಕೋಟಿ ರೂಪಾಯಿ ಗಳಿಸಿ ಮುಂಚೂಣಿಯಲ್ಲಿದ್ದರೆ, ಮಲಯಾಳಂ 826 ಪ್ರದರ್ಶನಗಳಿಂದ 1.50 ಕೋಟಿ ರೂಪಾಯಿ, ಕನ್ನಡ 438 ಪ್ರದರ್ಶನಗಳಿಂದ 85 ಲಕ್ಷ ರೂಪಾಯಿ, ತಮಿಳು 565 ಪ್ರದರ್ಶನಗಳಿಂದ 80 ಲಕ್ಷ ರೂಪಾಯಿ ಮತ್ತು ತೆಲುಗು 425 ಪ್ರದರ್ಶನಗಳಿಂದ 30 ಲಕ್ಷ ರೂಪಾಯಿ ನೆಟ್ ಗಳಿಕೆ ಕಂಡಿದೆ.

19ನೇ ದಿನದ ಈ ಕಲೆಕ್ಷನ್‌ನೊಂದಿಗೆ ಭಾರತದಲ್ಲಿ ‘ರಾಮಾಯಣ’ ಚಿತ್ರದ ಒಟ್ಟು ನಿವ್ವಳ ಗಳಿಕೆ 955.45 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 1,141.65 ಕೋಟಿ ರೂಪಾಯಿ ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಗರೋತ್ತರ ದೇಶಗಳಿಂದ ಇಲ್ಲಿಯವರೆಗೆ ಬರೋಬ್ಬರಿ 563.00 ಕೋಟಿ ಗ್ರಾಸ್ ರೂಪಾಯಿ ಗಳಿಕೆಯಾಗಿದೆ. ಈ ಮೂಲಕ ದೇಶೀಯ ಮತ್ತು ವಿದೇಶಿ ಗಳಿಕೆಗಳೆರಡನ್ನೂ ಒಟ್ಟುಗೂಡಿಸಿದರೆ, ‘ರಾಮಾಯಣ’ ಚಿತ್ರದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 19 ದಿನಗಳ ಅಂತ್ಯಕ್ಕೆ 1,704.65 ಕೋಟಿ ರೂಪಾಯಿ ಗಡಿ ದಾಟಿದೆ.

18ನೇ ದಿನದ ಗಳಿಕೆಗೆ ಹೋಲಿಸಿದರೆ 19ನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 18ನೇ ದಿನ ಎಲ್ಲಾ ಭಾಷೆಗಳಿಂದ 35.60 ಕೋಟಿ ಗಳಿಸಿದ್ದ ಚಿತ್ರವು, 19ನೇ ದಿನ 12.70 ಕೋಟಿಗೆ ಇಳಿಯುವ ಮೂಲಕ ಶೇಕಡಾ 64.3 ರಷ್ಟು ಕುಸಿತ ದಾಖಲಿಸಿದೆ. ವಾರಾಂತ್ಯದ ನಂತರ ವಾರದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಸಹಜವಾಗಿ ಇಳಿಕೆಯಾಗುವುದು ಸಾಮಾನ್ಯ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:  ‘ರಾಮಾಯಣ’ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪುಟ್ಟಪರ್ತಿಗೆ ಭೇಟಿ ನೀಡಿದ ಸಾಯಿ ಪಲ್ಲವಿ

ಈ ಸಿನಿಮಾ 2,000 ಕೋಟಿ ರೂಪಾಯಿಗಳ ಐತಿಹಾಸಿಕ ಕ್ಲಬ್ ಸೇರುತ್ತದೆಯೇ ಎಂಬುದು ಈಗ ಸಿನಿಪ್ರಿಯರ ಮತ್ತು ಟ್ರೇಡ್ ವಿಶ್ಲೇಷಕರ ಕುತೂಹಲವಾಗಿದೆ. ಸದ್ಯ 1,704.65 ಕೋಟಿ ಗಳಿಸಿರುವ ಚಿತ್ರಕ್ಕೆ 2,000 ಕೋಟಿ ತಲುಪಲು ಇನ್ನೂ 295.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅವಶ್ಯಕತೆಯಿದೆ. ‘ರಾಮಾಯಣ’ ಚಿತ್ರವು 2,000 ಕೋಟಿ ರೂಪಾಯಿಗಳ ಗಡಿ ತಲುಪುವುದು ಮುಂಬರುವ ವಾರಾಂತ್ಯದ ಪ್ರದರ್ಶನ ಮತ್ತು ವಿದೇಶಿ ಮಾರುಕಟ್ಟೆಯ ಸ್ಥಿರತೆಯನ್ನು ಅವಲಂಬಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ