AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮನ ಅಯೋಧ್ಯೆಯಿಂದ ನೇಪಾಳದಲ್ಲಿರುವ ಸೀತೆಯ ತವರೂರು ಜನಕಪುರದ ಹೊಸ ರೈಲು ಪ್ರಯಾಣಕ್ಕೆ ಎಷ್ಟು ಸಮಯ ಬೇಕು?

ಭಾರತ ಮತ್ತು ನೇಪಾಳದ ನಡುವಿನ ದ್ವಿಪಕ್ಷೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಉತ್ತರ ಪ್ರದೇಶದ ಅಯೋಧ್ಯೆ ಮತ್ತು ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ಹೊಸ ಗಡಿಯಾಚೆಗಿನ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಗಿದೆ. ನೇಪಾಳದ ಪ್ರಧಾನಮಂತ್ರಿ ಬಾಲೇನ್ ಶಾ ಅವರ ಚೊಚ್ಚಲ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಈ ಮಹತ್ವದ ಯೋಜನೆಯ ಕುರಿತು ಘೋಷಿಸಲಾಗಿದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಮತ್ತು ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರವನ್ನು ನೇರವಾಗಿ ಬೆಸೆಯುವ ಮೂಲಕ, ಎರಡೂ ದೇಶಗಳ ನಡುವಿನ ‘ರಾಮಾಯಣ ಸರ್ಕ್ಯೂಟ್’ ಪ್ರವಾಸೋದ್ಯಮಕ್ಕೆ ಈ ರೈಲು ಮಾರ್ಗವು ಹೊಸ ವೇಗ ನೀಡಲಿದೆ.

ಶ್ರೀರಾಮನ ಅಯೋಧ್ಯೆಯಿಂದ ನೇಪಾಳದಲ್ಲಿರುವ ಸೀತೆಯ ತವರೂರು ಜನಕಪುರದ ಹೊಸ ರೈಲು ಪ್ರಯಾಣಕ್ಕೆ ಎಷ್ಟು ಸಮಯ ಬೇಕು?
Ayodhya Janakpur Express
ಸುಷ್ಮಾ ಚಕ್ರೆ
|

Updated on: Nov 23, 2026 | 11:02 PM

Share

ನವದೆಹಲಿ, ನವೆಂಬರ್ 23: ಅಯೋಧ್ಯೆಯಿಂದ ನೇಪಾಳವನ್ನು ಸಂಪರ್ಕಿಸುವ ರೈಲಿಗೆ ಇಂದು ಚಾಲನೆ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಮಂತ್ರಿ ಬಾಲೆನ್ ಶಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಯೋಧ್ಯೆ ಮತ್ತು ಜನಕಪುರ ಧಾಮ ನಡುವಿನ ‘ಸರಯೂ-ಕಮಲಾ ಎಕ್ಸ್‌ಪ್ರೆಸ್’ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಅಯೋಧ್ಯೆ ಮತ್ತು ಜನಕಪುರ ಧಾಮಗಳ ಪ್ರಸಿದ್ಧಿಯಾಗಿರುವ 2 ನದಿಗಳ ಹೆಸರನ್ನು ಈ ರೈಲಿಗೆ ಇಡಲಾಗಿದೆ. ಈ ರೈಲು ಅಯೋಧ್ಯೆಯಲ್ಲಿರುವ ಭಗವಾನ್ ಶ್ರೀರಾಮನ ಜನ್ಮಸ್ಥಳ ಮತ್ತು ನೇಪಾಳದಲ್ಲಿರುವ ಸೀತಾದೇವಿಯ ಜನ್ಮಸ್ಥಳವನ್ನು ಬೆಸೆಯಲಿದೆ. ಈ ವಾರಕ್ಕೊಮ್ಮೆ ಸಂಚರಿಸುವ ರೈಲು ನವೆಂಬರ್ 28ರಿಂದ ಪ್ರಯಾಣಿಕರಿಗೆ ಲಭ್ಯವಾಗಲಿದ್ದು, ಭಾರತ ಮತ್ತು ನೇಪಾಳ ನಡುವಿನ ಪ್ರಯಾಣಕ್ಕೆ ಉತ್ತೇಜನ ನೀಡಲಿದೆ.

ಹೊಸ ರೈಲು ಸೇವೆಯಿಂದಾಗಿ ಭಾರತ ಮತ್ತು ನೇಪಾಳದ ಲಕ್ಷಾಂತರ ಭಕ್ತರು, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ಸುಗಮ, ಸುರಕ್ಷಿತ ಮತ್ತು ವೇಗದ ಪ್ರಯಾಣದ ಸೌಲಭ್ಯ ದೊರೆಯಲಿದೆ. ಧಾರ್ಮಿಕ ಪ್ರವಾಸೋದ್ಯಮದ ಜೊತೆಗೆ ಗಡಿ ಭಾಗದ ಜನರ ನಡುವಿನ ಸಂಪರ್ಕ ಹಾಗೂ ದ್ವಿಪಕ್ಷೀಯ ವ್ಯಾಪಾರ-ವಹಿವಾಟುಗಳಿಗೂ ಈ ರೈಲು ಸಂಪರ್ಕವು ಹೆಚ್ಚಿನ ಉತ್ತೇಜನ ನೀಡಲಿದೆ.

ಇದನ್ನೂ ಓದಿ: ರಾಮಾಯಣದ ಪೇಂಟಿಂಗ್​ನಿಂದ ಗಂಗಾಜಲದವರೆಗೆ; ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಮೋದಿ ನೀಡಿದ ಉಡುಗೊರೆಗಳಿವು

ಅಯೋಧ್ಯೆ ಕ್ಯಾಂಟ್ ಮತ್ತು ಜನಕಪುರ ಧಾಮ ನಡುವಿನ 604 ಕಿಲೋಮೀಟರ್ ದೂರವನ್ನು ಈ ರೈಲು ಸುಮಾರು 19 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರಯಾಣದ ವೇಳೆ ಪ್ರಯಾಣಿಕರು ರೈಲು ಬದಲಾಯಿಸುವ ಅಗತ್ಯವಿರುವುದಿಲ್ಲ.

ಸರಯೂ-ಕಮಲಾ ಎಕ್ಸ್‌ಪ್ರೆಸ್ ನಿಲ್ದಾಣಗಳು, ಮಾರ್ಗ ಮತ್ತು ಇತರ ವಿವರಗಳು:

ಅಯೋಧ್ಯೆ ಮತ್ತು ಜನಕಪುರ ನಡುವಿನ ಪ್ರಯಾಣದ ವೇಳೆ ಈ ರೈಲು 10 ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಜಯನಗರ, ಮಧುಬನಿ, ಶಿಶೋ, ಸೀತಾಮರ್ಹಿ, ರಕ್ಸೌಲ್, ನರಕಟಿಯಾಗಂಜ್, ಗೋರಖ್‌ಪುರ, ಬಸ್ತಿ, ಮನಕಾಪುರ ಮತ್ತು ಅಯೋಧ್ಯೆ ಧಾಮ ನಿಲ್ದಾಣಗಳಲ್ಲಿ ಇದು ನಿಲ್ಲಲಿದೆ.

ಈ ಹೊಸ ರೈಲು ಸೋಮವಾರ ಸಂಜೆ 5.50ಕ್ಕೆ ಅಯೋಧ್ಯೆಯಿಂದ ಹೊರಟು, ಮಂಗಳವಾರ ಮಧ್ಯಾಹ್ನ 12.40ಕ್ಕೆ ಜನಕಪುರ ಧಾಮ ತಲುಪಲಿದೆ. ಮರಳಿ ಸಂಚರಿಸುವ ರೈಲು ಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ 1.10ಕ್ಕೆ ಜನಕಪುರ ಧಾಮದಿಂದ ಹೊರಟು, ಭಾನುವಾರ ಬೆಳಿಗ್ಗೆ 8.10ಕ್ಕೆ ಅಯೋಧ್ಯೆ ತಲುಪಲಿದೆ.

ಇದನ್ನೂ ಓದಿ: ನೇಪಾಳವಿಲ್ಲದೆ ರಾಮನ ಕಥೆ ಪೂರ್ಣವಾಗದು, ಭಾರತ-ನೇಪಾಳ ಸಂಬಂಧಕ್ಕೆ ಹೊಸ ಬಲ: ಪ್ರಧಾನಿ ಮೋದಿ

ಸರಯೂ-ಕಮಲಾ ಎಕ್ಸ್‌ಪ್ರೆಸ್ ರೈಲು 17 ಎಲ್‌ಎಚ್‌ಬಿ ಬೋಗಿಗಳನ್ನು ಹೊಂದಿರಲಿದ್ದು, ಎಸಿ, ಸ್ಲೀಪರ್ ಸೇರಿದಂತೆ ವಿವಿಧ ದರ್ಜೆಗಳ ವ್ಯವಸ್ಥೆ ಇರಲಿದೆ. ಅಯೋಧ್ಯೆ ಮತ್ತು ಜನಕಪುರ ನಡುವಿನ ಈ ನೇರ ಸೇವೆಯು ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸಲಿದೆ.

ಈ ಸೇವೆಯು ಪ್ರಯಾಣಿಕರಿಗೆ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುವುದಲ್ಲದೆ, ಉಭಯ ದೇಶಗಳ ನಡುವಿನ ಹಂಚಿಕೆಯ ನಾಗರಿಕ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಸಂಪರ್ಕ ಜಾಲ ಹೆಚ್ಚುವುದರಿಂದ ಸ್ಥಳೀಯ ಹೋಟೆಲ್‌ಗಳು, ವ್ಯಾಪಾರಗಳು, ಸಾರಿಗೆ ನಿರ್ವಾಹಕರು ಮತ್ತು ಪ್ರವಾಸೋದ್ಯಮಕ್ಕೂ ಬೆಂಬಲ ದೊರೆತು, ಸಂಪರ್ಕಿತ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕೊಡುಗೆ ನೀಡಲಿದೆ.

ಈ ಯೋಜನೆಯು ಎರಡೂ ಸ್ಥಳಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸಲಿದೆ. ಇದು ‘ರಾಮಾಯಣ ಸರ್ಕ್ಯೂಟ್’ ಪ್ರವಾಸವನ್ನು ಬಲಪಡಿಸಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಮೂಲಸೌಕರ್ಯ ಉಪಕ್ರಮವು ಉತ್ತರ ಪ್ರದೇಶ, ಬಿಹಾರ ಮತ್ತು ನೇಪಾಳದ ಗಡಿ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.

ಭಾರತ ಮತ್ತು ನೇಪಾಳವನ್ನು ಸಂಪರ್ಕಿಸುವ ಏಕೈಕ ಸಾರಿಗೆ ಯೋಜನೆ ಅಯೋಧ್ಯೆ-ಜನಕಪುರ ಎಕ್ಸ್‌ಪ್ರೆಸ್ ಅಲ್ಲ. ಜಯನಗರ-ಬಿಜಲ್ಪುರ-ಬರ್ಡಿಬಾಸ್ ಮತ್ತು ಜೋಗಬನಿ-ಬಿರಾಟ್‌ನಗರ ರೈಲು ಸಂಪರ್ಕ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಗಡಿಯಾಚೆಗಿನ ಸಂಪರ್ಕವನ್ನು ಸುಧಾರಿಸಲು ಉದ್ದೇಶಿಸಲಾದ ರಕ್ಸೌಲ್-ಕಠ್ಮಂಡು ರೈಲು ಮಾರ್ಗವು ಮತ್ತೊಂದು ಪ್ರಮುಖ ಯೋಜನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ