‘ಬಿಗ್ ಬಾಸ್ ಕನ್ನಡ 13’ ಫಿನಾಲೆ ಸಮೀಪಿಸುವಾಗ ಯಶಸ್ ಆಟಕ್ಕೆ ಆಘಾತ; ಸೌಂದರ್ಯಾಗೆ ಬೇಸರ
ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಮನಸ್ತಾಪ ಉಂಟಾಗಿದೆ. ಯಶಸ್ ಅವರನ್ನು ಇಡೀ ಸೀಸನ್ ಪೂರ್ತಿ ನಾಮಿನೇಟ್ ಮಾಡಲಾಗಿದೆ. ಇದಕ್ಕೆ ಕಾರಣ ಆಗಿರುವುದೇ ಗಗನ್ ಚಿನ್ನಪ್ಪ. ಈ ರೀತಿ ಪರಿಸ್ಥಿತಿ ಬಂದಿರುವುದರಿಂದ ಯಶಸ್ ಅವರ ಆಟ ಚುರುಕುಗೊಳ್ಳಬೇಕಿರುವುದು ಅನಿವಾರ್ಯ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಹಾಗಾಗಿ ಎಲ್ಲರೂ ಸಖತ್ ತಂತ್ರಗಾರಿಕೆ ಮಾಡುತ್ತಿದ್ದಾರೆ. ಈ ವಾರ ಕ್ಯಾಪ್ಟನ್ ಆಗಿರುವ ಗಗನ್ ಚಿನ್ನಪ್ಪ ಅವರಿಗೆ ಸೋಮವಾರದ (ನವೆಂಬರ್ 23) ಸಂಚಿಕೆಯಲ್ಲಿ ಒಂದು ವಿಶೇಷ ಅಧಿಕಾರ ನೀಡಲಾಯಿತು. ಮುಂದಿನ ಎಲ್ಲ ವಾರಕ್ಕೂ ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಅವರಿಗೆ ಸಿಕ್ಕಿತು. ಹಾಗಾಗಿ ಗಗನ್ ಅವರು ಯಶಸ್ ಅವರನ್ನು ನಾಮಿನೇಟ್ ಮಾಡಿದರು. ಇದರಿಂದಾಗಿ ಯಶಸ್ ಅವರಿಗೆ ಶಾಕ್ ಆಯಿತು. ಅಲ್ಲದೇ, ಅವರ ಆಪ್ತರಾದ ಸೌಂದರ್ಯಾ ಶೆಟ್ಟಿ ಅವರಿಗೂ ಬೇಸರ ಆಯಿತು.
ಒಂದು ವಾರ ನಾಮಿನೇಟ್ ಆದರೂ ಸ್ಪರ್ಧಿಗಳು ಸಹಿಸುವುದಿಲ್ಲ. ಅಂಥದ್ದರಲ್ಲಿ ಮುಂದಿನ ಎಲ್ಲ ವಾರವೂ ನಾಮಿನೇಟ್ ಆಗುವುದು ಎಂದರೆ ನಿಜಕ್ಕೂ ಆಘಾತಕಾರಿ ವಿಚಾರ. ತಾವು ಈ ರೀತಿ ನಾಮಿನೇಟ್ ಆಗಬಹುದು ಎಂದು ಯಶಸ್ ಅವರು ಊಹಿಸಿರಲಿಲ್ಲ. ಯಾಕೆಂದರೆ, ಅವರು ಅಷ್ಟೇನೂ ದುರ್ಬಲ ಸ್ಪರ್ಧಿ ಅಲ್ಲ. ಆದರೆ ಗಗನ್ ಚಿನ್ನಪ್ಪ ಅವರ ತಂತ್ರಗಾರಿಕೆಯಿಂದ ಯಶಸ್ ಅವರಿಗೆ ಈ ಪರಿಸ್ಥಿತಿ ಎದುರಾಗಿದೆ.
ಇದು ಯಶಸ್ ಅವರಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಆಗಿದೆ. ಯಾಕೆಂದರೆ, ಗಗನ್ ಅವರು ನೀಡಿದ ಕಾರಣ ಆ ರೀತಿ ಇದೆ. ‘ನೀನು ಕಠಿಣ ಪೈಪೋಟಿ ನೀಡುವ ಸ್ಪರ್ಧಿ. ಹಾಗಾಗಿ ನಿನ್ನಿಂದ ನನ್ನ ಆಟಕ್ಕೆ ತೊಂದರೆ ಇದೆ. ಆದ್ದರಿಂದ ನಿನ್ನನ್ನು ನಾನು ನಾಮಿನೇಟ್ ಮಾಡಿದ್ದೇನೆ’ ಎಂದು ಗಗನ್ ಚಿನ್ನಪ್ಪ ಹೇಳಿದ್ದಾರೆ. ಅಂದರೆ, ನೇರವಾಗಿ ಯಶಸ್ ಅವರನ್ನು ಗಗನ್ ಹೊಗಳಿದಂತೆ ಆಗಿದೆ. ಇದು ಪ್ಲಸ್ ಆದರೆ, ಎಲ್ಲ ವಾರವೂ ನಾಮಿನೇಟ್ ಆಗಿರುವುದು ಮೈನಸ್ ಆಗಿದೆ.
‘ಕಠಿಣ ಸ್ಪರ್ಧಿ ಎಂಬ ಕಾರಣಕ್ಕೆ ನೀನು ತಾಂಡವ್ ರಾಮ್ ಅವರನ್ನು ಕೂಡ ನಾಮಿನೇಟ್ ಮಾಡಬಹುದಿತ್ತು ಅಲ್ಲವೇ?’ ಎಂದು ಯಶಸ್ ಪ್ರಶ್ನಿಸಿದರು. ‘ನೀನು ಸೌಂದರ್ಯಾ ಶೆಟ್ಟಿಯನ್ನು ಹೇಗೆ ನಾಮಿನೇಟ್ ಮಾಡಲ್ಲವೋ ಅದೇ ರೀತಿ ನಾನು ತಾಂಡವ್ ಅವರನ್ನು ನಾಮಿನೇಟ್ ಮಾಡಲ್ಲ’ ಎಂಬರ್ಥದಲ್ಲಿ ಗಗನ್ ಹೇಳಿದರು. ಗಗನ್ ಅವರು ಈ ನಿರ್ಧಾರವನ್ನು ವೈಯಕ್ತಿಕ ಕಾರಣಕ್ಕಾಗಿಯೂ ತೆಗೆದುಕೊಂಡಿದ್ದಾರೆ ಎಂಬುದನ್ನು ಯಶಸ್ ಅವರು ಈ ಮಾತಿನ ಮೂಲಕ ಸಾಬೀತು ಮಾಡಿದರು.
ಇದನ್ನೂ ಓದಿ: ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
‘ಈ ಹಿಂದೆ ನೀನು ನನ್ನ ಬಗ್ಗೆ ಮಾತನಾಡಿದ್ದು ನನಗೆ ಇಷ್ಟ ಆಗಿಲ್ಲ. ಆ ಕಾರಣದಿಂದಲೂ ನಿನ್ನನ್ನು ನಾಮಿನೇಟ್ ಮಾಡಿದ್ದೇನೆ’ ಎಂದು ಗಗನ್ ಬಾಯಿಬಿಟ್ಟರು. ಒಟ್ಟಿನಲ್ಲಿ ಈ ಘಟನೆಯ ಬಳಿಕ ಬಿಗ್ ಬಾಸ್ ಮನೆಯಲ್ಲಿ ಯಶಸ್ ಅವರಿಗೆ ಒತ್ತಡ ಹೆಚ್ಚಾಗಿದೆ. ಕ್ಯಾಪ್ಟೆನ್ಸಿ ಓಟಕ್ಕೆ ನೇರ ಅರ್ಹತೆ ಪಡೆಯುವ ಮೂಲಕ ಗಗನ್ ಅವರ ಇಮ್ಯೂನಿಟಿ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




