AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋಕರ್​​ಗಳ ಥರ ಕಾಣ್ತಿದ್ದೀರಿ: ತಾಂಡವ್-ಗಗನ್​​ಗೆ ಕಿಚ್ಚನ ಖಡಕ್ ಮಾತು

Bigg Boss Kannada 13: ಈ ವಾರ ತಾಂಡವ್ ಮತ್ತು ಗನನ್​​ ನಡುವೆ ಜಗಳ ನಡೆದಿದೆ. ಬಿಗ್​​ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್​​ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್​​ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.

ಜೋಕರ್​​ಗಳ ಥರ ಕಾಣ್ತಿದ್ದೀರಿ: ತಾಂಡವ್-ಗಗನ್​​ಗೆ ಕಿಚ್ಚನ ಖಡಕ್ ಮಾತು
Bigg Boss Sudeep
ಮಂಜುನಾಥ ಸಿ.
|

Updated on: Nov 14, 2026 | 10:35 PM

Share

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡ ಸೀಸನ್ 13
  • ತಾಂಡವ್ ಮತ್ತು ಗಗನ್ ನಡುವೆ ಫೈಟ್
  • ತಾಂಡವ್ ಮತ್ತು ಗಗನ್ ಜಗಳ ಮಾಡಿದ್ದು ಏಕೆ?

ಪ್ರತಿ ವಾರ ಬಿಗ್​​ಬಾಸ್​ ಮನೆಯಲ್ಲಿ ನಡೆಯುವ ಟಾಸ್ಕ್​​ಗಳ ವೇಳೆ ಜಗಳು ನಡೆಯುವುದು ತೀರಾ ಸಾಮಾನ್ಯ. ಈ ಸೀಸನ್​​ನಲ್ಲೂ ಸಹ ಹಲವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ವಾರ ನಡೆದ ಜಗಳ ಬಹಳ ಗಮನ ಸೆಳೆದಿದೆ. ಈ ವಾರ ತಾಂಡವ್ ಮತ್ತು ಗನನ್​​ ನಡುವೆ ಜಗಳ ನಡೆದಿದೆ. ಬಿಗ್​​ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್​​ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್​​ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.

ಟಾಸ್ಕ್ ವೇಳೆ ಗಗನ್ ಹಾಗೂ ತಾಂಡವ್ ನಡುವೆ ಕಿರಿಕ್ ಆಯ್ತು. ಗಗನ್, ಒಮ್ಮೆಲೆ ತಾಂಡವ್ ಮೇಲೆ ಹರಿಹಾಯ್ದರು. ತಾಂಡವ್ ಅನ್ನು ‘ಕುನ್ನಿ’ ಎಂದರು. ತಾಂಡವ್, ಮೊದಲಿಗೆ ‘ಸುಮ್ಮನಿರು, ಸಮಾಧಾನವಾಗಿರು, ಮಾತನಾಡಬೇಡಿ, ರೇಗಿಸಬೇಡ’ ಎಂದೆಲ್ಲ ಗಗನ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳುತ್ತಲೇ ಇದ್ದರು. ಆದರೆ ಗಗನ್ ಸುಮ್ಮನಾಗಲಿಲ್ಲ. ಕೊನೆಗೆ ತಾಂಡವ್ ಸಹ ತಾಳ್ಮೆ ಕಳೆದುಕೊಂಡು ಹೊಡೆಯುವ-ಬಡಿಯುವ ಮಾತುಗಳನ್ನಾಡಿದರು. ಅಲ್ಲಿಗೆ ಇಬ್ಬರ ನಡುವೆ ದೊಡ್ಡ ಜಗಳವೇ ಆಯ್ತು. ಅದಾದ ಕೆಲವೇ ದಿನಗಳ ಬಳಿಕ ಇಬ್ಬರೂ ಒಂದಾದರು. ಊಟದ ಟೇಬಲ್​​ನಲ್ಲಿ ಗಗನ್, ತಾಂಡವ್​​ಗೆ ತುತ್ತು ಮಾಡಿ ಊಟ ತಿನ್ನಿಸಿದರು.

ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಈ ಜಗಳದ ವಿಷಯ ಮಾತನಾಡಿದರು. ‘ಮಂಜ ಬಂದು ಹೊರಗಿನ ರಿಪೋರ್ಟ್ ಹೇಳಿದ್ದಕ್ಕೆ ನಿಮ್ಮಿಬ್ಬರ ನಡುವೆ ಜಗಳ ಆಯ್ತು’ ಎಂದರು. ಆದರೆ ಇಬ್ಬರೂ ಇದನ್ನು ಒಪ್ಪದೆ ಬೇರೆ ಬೇರೆ ಕಾರಣಗಳನ್ನು ಹೇಳಿದರು. ಸುದೀಪ್ ಅವರು ಕೆದಕಿ-ಕೆದಕಿ ಕೇಳಿದಾಗ ಬೇರೆ ಕೆಲವು ಆಂತರಿಕ ಕಾರಣಗಳನ್ನು ಸಹ ನೀಡಿದರು.

ಇದನ್ನೂ ಓದಿ:ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ

ಕೊನೆಗೆ ಮಾತನಾಡಿದ ಸುದೀಪ್, ಗಗನ್ ಅವರನ್ನು ಉದ್ದೇಶಿಸಿ, ಒಂದು ಚೆಂಡಿಗೆ ನೀವು ತಾಂಡವ್ ವಿರುದ್ಧ ಅಷ್ಟು ರಾಂಗ್ ಆಗುವ ಅಗತ್ಯ ಇರಲಿಲ್ಲ ಎಂದರು. ತಾಂಡವ್​​ಗೆ ಸಹ ‘ಅಷ್ಟು ಹಿಂಸಾತ್ಮಕ ಬೆದರಿಕೆ ಹಾಕುವ ಅಗತ್ಯ ಇರಲಿಲ್ಲ’ ಎಂದರು. ಅಷ್ಟೆಲ್ಲ ಆದ ಮೇಲೆ ಅಂತಿಮವಾಗಿ ಒಬ್ಬರಿಗೊಬ್ಬರು ಊಟ ತಿನ್ನಿಸುವ ಅವಶ್ಯಕತೆ ಏನಿತ್ತು. ಅಷ್ಟೆಲ್ಲ ಜಗಳ ಮಾಡಿ ಈಗ ಪರಸ್ಪರ ಊಟ ತಿನ್ನಿಸಿದರೆ ಹೊರಗಡೆ ನೋಡುವವರಿಗೆ ಇದು ಫೇಕ್ ಜಗಳ, ಫೇಕ್ ಫ್ರೆಂಡ್​​ಶಿಪ್ ಅನಿಸುತ್ತದೆ ಎಂದರು. ನೀವು ಹೊರಗೆ ‘ಜೋಕರ್’ಗಳ ರೀತಿ ಕಾಣುತ್ತೀರಿ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More