AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಪೊಲೀಸ್ ಠಾಣೆಯೊಳಗೆ ಚಾಕು ದಾಳಿಗೆ 5 ಪೊಲೀಸರಿಗೆ ಗಾಯ; ಆರೋಪಿ ಕಾಲಿಗೆ ಗುಂಡೇಟು

ಇಂದು ದೆಹಲಿಯ ಜಾಮಾ ಮಸೀದಿ ಪೊಲೀಸ್ ಠಾಣೆಯೊಳಗೆ ವಿಚಾರಣೆಗಾಗಿ ಕರೆಸಲಾಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮವಾಗಿ 9 ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ನಬೀಲ್ ಎಂದು ಗುರುತಿಸಲಾಗಿದೆ. ತನ್ನ ತಾಯಿ ಮತ್ತು ಸಹೋದರಿಗೆ ಕಿರುಕುಳ ನೀಡಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಆತನನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಆಗ ಈ ಘಟನೆ ನಡೆದಿದೆ.

ದೆಹಲಿ ಪೊಲೀಸ್ ಠಾಣೆಯೊಳಗೆ ಚಾಕು ದಾಳಿಗೆ 5 ಪೊಲೀಸರಿಗೆ ಗಾಯ; ಆರೋಪಿ ಕಾಲಿಗೆ ಗುಂಡೇಟು
ನಬೀಲ್
ಸುಷ್ಮಾ ಚಕ್ರೆ
|

Updated on: Nov 23, 2026 | 7:34 PM

Share

ನವದೆಹಲಿ, ನವೆಂಬರ್ 23: ರಾಷ್ಟ್ರ ರಾಜಧಾನಿ ದೆಹಲಿಯ ಜಾಮಾ ಮಸೀದಿ ಪೊಲೀಸ್ ಠಾಣೆಯೊಳಗೆ ವಿಚಾರಣೆಗೆ ಕರೆಸಲಾಗಿದ್ದ ವ್ಯಕ್ತಿಯೊಬ್ಬ ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಬಳಿಕ ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ಘಟನೆ ಇಂದು ನಡೆದಿದೆ. ಆತನನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ತನ್ನ ತಾಯಿ ಮತ್ತು ಸಹೋದರಿಗೆ ಕಿರುಕುಳ ನೀಡಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ನಬೀಲ್ ಎಂಬ ಆರೋಪಿಯನ್ನು ಜಾಮಾ ಮಸೀದಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ವಿಚಾರಣೆ ನಡೆಯುತ್ತಿದ್ದಾಗ ಆಕ್ರೋಶಗೊಂಡ ಆರೋಪಿ, ಏಕಾಏಕಿ ಚಾಕು ಹೊರತೆಗೆದು ಪೊಲೀಸರ ಕುತ್ತಿಗೆ ಮತ್ತು ಮುಖಕ್ಕೆ ಇರಿದಿದ್ದಾನೆ. ಈ ದಾಳಿಯಲ್ಲಿ ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು, ಒಬ್ಬ ಎಎಸ್‌ಐ ಮತ್ತು ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಬೈಕ್ ಕದ್ದು ಪರಾರಿ:

ಪೊಲೀಸ್ ಠಾಣೆಯೊಳಗೆ ದಾಳಿ ನಡೆಸಿದ ತಕ್ಷಣ ಆರೋಪಿ ಹೊರಗೆ ಓಡಿಹೋಗಿ, ಬೈಕನ್ನು ಕದ್ದು ಹಳೆಯ ದೆಹಲಿಯ ಚಿಟ್ಲಿ ಕಬರ್ ಪ್ರದೇಶದತ್ತ ಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಆರೋಪಿಯನ್ನು ಬೆನ್ನಟ್ಟಿ ಸುತ್ತುವರಿದಿದೆ. ಈ ವೇಳೆಯೂ ಆತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಮನೆಯಲ್ಲಿ ಹ್ಯಾಂಡ್‌ಪಂಪ್‌ನಲ್ಲಿ ನೀರಿನ ಬದಲು ಹರಿದ ಕಳ್ಳಭಟ್ಟಿ ಸಾರಾಯಿ; ಮಹಿಳೆ ಬಂಧನ

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಠಾಣೆಯೊಳಗೆ ಆರೋಪಿ ಚಾಕು ತಂದಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ