AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ತಿಂಗಳ ಆರ್ ಡಿ ಮೊತ್ತ ಬಾಕಿ ಇಟ್ಟುಕೊಂಡರೆ ಈ ಸಮಸ್ಯೆ ಆಗೋದು ಗ್ಯಾರಂಟಿ

ನೀವೇನಾದ್ರೂ ಒಂದು ತಿಂಗಳು ಆರ್ ಡಿ ಮೊತ್ತವನ್ನು ಪಾವತಿಸದಿದ್ದರೆ ಖಾತೆ ತಕ್ಷಣವೇ ರದ್ದಾಗುವುದಿಲ್ಲ. ಆದರೆ ಬ್ಯಾಂಕ್ ಸಣ್ಣ ಪ್ರಮಾಣದಲ್ಲಿ ದಂಡ ವಿಧಿಸುತ್ತದೆ. ಹೀಗಾಗಿ ಸ್ವಯಂಚಾಲಿತ ಪಾವತಿ ಸೆಟ್ ಮಾಡುವುದರಿಂದ ಇಂತಿಷ್ಟು ಹಣ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ತಿಂಗಳ ಆರ್ ಡಿ ಮೊತ್ತ ಬಾಕಿ ಇಟ್ಟುಕೊಂಡರೆ ಈ ಸಮಸ್ಯೆ ಆಗೋದು ಗ್ಯಾರಂಟಿ
ಸಾಂದರ್ಭಿಕ ಚಿತ್ರImage Credit source: anand purohit/Moment Getty Images
ಸಾಯಿನಂದಾ
|

Updated on: Nov 23, 2026 | 7:14 PM

Share

ಮುಖ್ಯಾಂಶಗಳು

  • ಕೆಲವರು ಅಲ್ಪ ದುಡ್ಡನ್ನು ಮರುಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡಬಹುದು
  • ಮರುಕಳುಹಿಸುವ ಠೇವಣಿ ಬಡ್ಡಿಯ ಜತೆಗೆ ಒಟ್ಟು ಮೊತ್ತ ಪಡೆಯಬಹುದಾಗಿದೆ.
  • ಆರ್‌ಡಿ ಮೊತ್ತ ಕಟ್ಟದೇ ಹೋದಲ್ಲಿ ಬ್ಯಾಂಕ್‌ ದಂಡ ವಿಧಿಸುತ್ತದೆ ಹಾಗೂ ಬಡ್ಡಿ ಕಡಿಮೆಯಾಗುತ್ತದೆ

ತಿಂಗಳ ಖರ್ಚು ಎಷ್ಟೇ ಇರಲಿ, ಆದರೆ ದುಡಿದ ದುಡ್ಡಲ್ಲಿ ಸ್ವಲ್ಪ ಹಣವಾದ್ರೂ ಉಳಿತಾಯ (savings) ಮಾಡಬೇಕು. ಕೆಲವರು ತಿಂಗಳ ಇಂತಿಷ್ಟು ಹಣವನ್ನು ಆರ್ ಡಿಗಾಗಿ ಎತ್ತಿಡುತ್ತಾರೆ. ನಿರ್ದಿಷ್ಟ ಅವಧಿಗೆ ಮಾಡುವ ಹೂಡಿಕೆಯಾಗಿದ್ದು, ತದನಂತರದಲ್ಲಿ ಬಡ್ಡಿ ಸಮೇತ ಮೊತ್ತವನ್ನು ಪಡೆಯಬಹುದು. ಆದರೆ ಕೆಲವೊಮ್ಮೆ ಮರುಕಳಿಸುವ ಠೇವಣಿ ಕಟ್ಟಲು ತಡವಾದರೆ ಅಥವಾ ಆರ್ ಡಿ ಮೊತ್ತವನ್ನು ಪಾವತಿಸದಿದ್ದರೆ ಏನಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಮುಂದಿನ ತಿಂಗಳು ಸೇರಿಸಿ ಕಟ್ಟಿದರಾಯ್ತು ಅಂದುಕೊಳ್ಳುತ್ತಾರೆ. ಆದರೆ ಮೊತ್ತ ಜಮಾ ಆಗದ ಕಾರಣ ಬಡ್ಡಿ ಕಡಿಮೆಯಾಗುತ್ತದೆ.

ಒಂದು ತಿಂಗಳ ಆರ್ ಡಿ ತಡವಾದರೆ ಏನಾಗುತ್ತದೆ?

ದಂಡ ವಿಧಿಸುವಿಕೆ: ಹೆಚ್ಚಿನ ಬ್ಯಾಂಕ್‌ಗಳು ನಿಮ್ಮ ಕಂತಿನ ಮೊತ್ತಕ್ಕೆ ಅನುಗುಣವಾಗಿ ದಂಡ ವಿಧಿಸುತ್ತದೆ.100 ರೂ ಕಂತಿಗೆ ತಿಂಗಳಿಗೆ 1.50 ರೂ ರಿಂದ 2.00 ರೂ ರವರೆಗೆ ಅಥವಾ 1,000 ರೂ ಕ್ಕೆ ಸುಮಾರು 8 ರಿಂದ 12 ರೂ ದಂಡ ವಿಧಿಸುತ್ತವೆ.

ಖಾತೆ ಸ್ಥಗಿತವಾಗುವ ಸಾಧ್ಯತೆ: ಆರ್ ಡಿ ಮೊತ್ತವೂ ಒಂದು ತಿಂಗಳು ಕಟ್ಟದಿದ್ದರೆ ಖಾತೆ ಸ್ಥಗಿತಗೊಳ್ಳುವುದಿಲ್ಲ. ಆದರೆ ಸತತವಾಗಿ 3 ರಿಂದ 6 ತಿಂಗಳು ಕಂತು ಕಟ್ಟದೇ ಹೋದಲ್ಲಿ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸಾಲ ಬೇಗನೇ ಕ್ಲಿಯರ್ ಮಾಡ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ಬಡ್ಡಿ ಆದಾಯದಲ್ಲಿ ಇಳಿಕೆ: ಪ್ರತಿ ತಿಂಗಳು ಕಟ್ಟುವ ಮರುಕಳಿಸುವ ಠೇವಣಿ ಮೊತ್ತವೂ ಜಮೆಯಾಗದೇ ಹೋದಲ್ಲಿ ಆ ಅವಧಿಗೆ ಸಿಗಬೇಕಿದ್ದ ಚಕ್ರಬಡ್ಡಿ ಕಡಿಮೆಯಾಗುತ್ತದೆ. ಇನ್ನು ದಂಡದ ಮೊತ್ತವನ್ನು ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ಕೈಸೇರುವ ಮೊತ್ತದಲ್ಲಿ ಕಡಿತಗೊಳಿಸಿ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ