AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಮನೆಯಲ್ಲಿ ಹ್ಯಾಂಡ್‌ಪಂಪ್‌ನಲ್ಲಿ ನೀರಿನ ಬದಲು ಹರಿದ ಕಳ್ಳಭಟ್ಟಿ ಸಾರಾಯಿ; ಮಹಿಳೆ ಬಂಧನ

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಮನೆಯೊಂದರಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ, ಸಾಮಾನ್ಯ ನೀರಿನ ಹ್ಯಾಂಡ್‌ಪಂಪ್‌ನಿಂದ ನೀರಿನ ಬದಲಾಗಿ ಕಳ್ಳಭಟ್ಟಿ ಸಾರಾಯಿ ಹರಿದುಬಂದ ಅಚ್ಚರಿಯ ಪ್ರಸಂಗ ಬೆಳಕಿಗೆ ಬಂದಿದೆ. ಝಾನ್ಸಿ ಜಿಲ್ಲೆಯ ಸಕ್ರಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜ್‌ಪುರ ಘುರಾಟ್ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿ ದಾಳಿ ನಡೆಸಿದರು. ಮನೆಯ ಆವರಣದಲ್ಲಿದ್ದ ಹ್ಯಾಂಡ್‌ಪಂಪ್ ಅನ್ನು ಅಧಿಕಾರಿಗಳು ಒತ್ತಿದಾಗ, ಅದರಿಂದ ನೀರಿನ ಬದಲಾಗಿ ಕಳ್ಳಭಟ್ಟಿ ಸಾರಾಯಿ ಧಾರೆಯಾಗಿ ಹೊರಬಂದಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಉತ್ತರ ಪ್ರದೇಶದ ಮನೆಯಲ್ಲಿ ಹ್ಯಾಂಡ್‌ಪಂಪ್‌ನಲ್ಲಿ ನೀರಿನ ಬದಲು ಹರಿದ ಕಳ್ಳಭಟ್ಟಿ ಸಾರಾಯಿ; ಮಹಿಳೆ ಬಂಧನ
ನೀರಿನ ಬದಲು ಹ್ಯಾಂಡ್‌ಪಂಪ್‌ನಿಂದ ಹರಿದ ಕಳ್ಳಭಟ್ಟಿ
ಸುಷ್ಮಾ ಚಕ್ರೆ
|

Updated on: Nov 23, 2026 | 6:53 PM

Share

ಝಾನ್ಸಿ, ನವೆಂಬರ್ 23: ಉತ್ತರ ಪ್ರದೇಶದ ಝಾನ್ಸಿಯ ಮನೆಯೊಂದರ ಅಂಗಳದಲ್ಲಿ ಅಳವಡಿಸಲಾಗಿದ್ದ ಹ್ಯಾಂಡ್‌ಪಂಪ್ ಅನ್ನು ದಾಳಿಯ ವೇಳೆ ಪೊಲೀಸ್ ಅಧಿಕಾರಿಗಳು ಒತ್ತಿದಾಗ, ಅದರಿಂದ ನೀರಿನ ಬದಲಾಗಿ ಕಳ್ಳಭಟ್ಟಿ ಹೊರಬರಲು ಪ್ರಾರಂಭಿಸಿತು. ಅಕ್ರಮ ಮದ್ಯ ದಂಧೆಯ ವಿರುದ್ಧ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ಅಸಾಮಾನ್ಯ ಸಂಗತಿ ಪತ್ತೆಯಾಗಿದೆ. ಈ ದಾಳಿಯ ವಿಡಿಯೋವೊಂದು ಹೊರಬಿದ್ದಿದ್ದು, ಪೊಲೀಸ್ ಅಧಿಕಾರಿಗಳು ಹ್ಯಾಂಡ್‌ಪಂಪ್ ಒತ್ತುತ್ತಿರುವುದು ಮತ್ತು ಸಾರಾಯಿಯನ್ನು ಟಬ್‌ನಲ್ಲಿ ಸಂಗ್ರಹಿಸಿ ನಂತರ ಜೆರ್ರಿಕ್ಯಾನ್‌ಗೆ ತುಂಬಿಸುತ್ತಿರುವುದು ಅದರಲ್ಲಿ ಕಂಡುಬಂದಿದೆ.

ನವೆಂಬರ್ 21ರಂದು ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಭೂಮಿಯ ಅಡಿಯಲ್ಲಿ ಕಚ್ಚಾ ಸಾರಾಯಿಯನ್ನು ಸಂಗ್ರಹಿಸಿಡಲಾಗಿದ್ದು, ಆ ರಹಸ್ಯ ಸಂಗ್ರಹಣಾ ವ್ಯವಸ್ಥೆಯ ಮೇಲೆ ಸಾರಾಯಿಯನ್ನು ಹೊರತೆಗೆಯಲು ಹ್ಯಾಂಡ್‌ಪಂಪ್ ಅಳವಡಿಸಲಾಗಿತ್ತು ಎಂಬುದನ್ನು ಪೊಲೀಸ್ ತಂಡ ಪತ್ತೆಹಚ್ಚಿದೆ. ಯಾರಿಗೂ ಅನುಮಾನ ಬಾರದಂತೆ ಅಕ್ರಮ ಮದ್ಯವನ್ನು ಮೇಲೆತ್ತಲು ಮೇಲ್ನೋಟಕ್ಕೆ ಸಾಮಾನ್ಯ ನೀರಿನ ಪಂಪ್‌ನಂತೆ ಕಾಣುವ ಈ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು.

ಇದನ್ನೂ ಓದಿ: “ನಿಮ್ಮ ಕಾಲಿಗೆ ಬೀಳ್ತೀವಿ, ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ”: ಶಾಸಕರ ಮುಂದೆ ಕಣ್ಣೀರು ಹಾಕಿದ ಮಹಿಳೆಯರು

ಪೊಲೀಸ್ ಮತ್ತು ಅಬಕಾರಿ ತಂಡವು ಸುಮಾರು 30 ಲೀಟರ್ ಅಕ್ರಮ ಕಚ್ಚಾ ಸಾರಾಯಿಯನ್ನು ವಶಪಡಿಸಿಕೊಂಡಿದ್ದು, ಅಕ್ರಮ ಮಾರಾಟಕ್ಕೆ ಬಳಸುವುದನ್ನು ತಡೆಯಲು ಸ್ಥಳದಲ್ಲಿ ಪತ್ತೆಯಾದ ಸುಮಾರು 1,000 ಲೀಟರ್ ಕಚ್ಚಾ ಸಾರಾಯಿಯನ್ನು ನಾಶಪಡಿಸಿದೆ. ತೇಜ್‌ಪುರ ಘುರಾಟ್ ಗ್ರಾಮದ 30 ವರ್ಷದ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಆಕೆಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More