AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಲಕ್ ಶತಕದಿಂದ ತಂಡಕ್ಕೇನು ಲಾಭ? ಮಾಜಿ ಕೋಚ್ ಅಸಮಾಧಾನ

2026 ಏಷ್ಯಾಕಪ್‌ನಲ್ಲಿ ಭಾರತ ಎ ತಂಡ ಪಾಕ್ ಎ ವಿರುದ್ಧ ಸೋಲಲು ತಿಲಕ್ ವರ್ಮಾ ನಿಧಾನಗತಿಯ ಬ್ಯಾಟಿಂಗ್ ಒಂದು ಕಾರಣ ಎನ್ನಲಾಗುತ್ತಿದೆ. 100 ರನ್ ಗಳಿಸಿದ್ದರೂ, 149 ಎಸೆತಗಳನ್ನು ಎದುರಿಸಿದ್ದರು. ಅವರ 67.11 ಸ್ಟ್ರೈಕ್ ರೇಟ್ ತಂಡದ ಮೇಲೆ ಒತ್ತಡ ಹೇರಿತು. ಸಂಜಯ್ ಬಂಗಾರ್ ಕೂಡ ಅವರ ಆಟದ ವೇಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್ ವೇಗವನ್ನು ಸುಧಾರಿಸಬೇಕಿದೆ.

ತಿಲಕ್ ಶತಕದಿಂದ ತಂಡಕ್ಕೇನು ಲಾಭ? ಮಾಜಿ ಕೋಚ್ ಅಸಮಾಧಾನ
Tilak Varma
ಪೃಥ್ವಿಶಂಕರ
|

Updated on: Nov 23, 2026 | 7:32 PM

Share

2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ಎ ತಂಡ ಪಾಕಿಸ್ತಾನ ಎ ವಿರುದ್ಧ 48 ರನ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿಗೆ ನಾಯಕ ತಿಲಕ್ ವರ್ಮಾ ಅವರ ನಿಧಾನಗತಿಯ ಬ್ಯಾಟಿಂಗ್ ಕೂಡ ಒಂದು ಕಾರಣ ಎಂಬ ಚರ್ಚೆ ಶುರುವಾಗಿದೆ. ಪಂದ್ಯದಲ್ಲಿ ತಿಲಕ್ ವರ್ಮಾ ಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅವರು ಬರೋಬ್ಬರಿ 149 ಎಸೆತಗಳನ್ನು ಎದುರಿಸಿ 100 ರನ್ ಗಳಿಸಿದರು. ಅಂದರೆ ಅವರ ಸ್ಟ್ರೈಕ್ ರೇಟ್ ಕೇವಲ 67.11 ಆಗಿತ್ತು. ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಹೋರಾಡಿದ ತಿಲಕ್, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಇದೀಗ ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಭಾರತ ಎ ಪರ ಲಿಸ್ಟ್ ಎ ಪಂದ್ಯಗಳಲ್ಲೂ ತಿಲಕ್ ಇದೇ ರೀತಿಯ ಬ್ಯಾಟಿಂಗ್ ಮಾಡಿದ್ದಾರೆ. ಅವರ ಅಂಕಿ-ಅಂಶಗಳನ್ನು ಗಮನಿಸಿದರೆ ಈ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ.

ಭಾರತ ಎ ಪರ ತಿಲಕ್ ವರ್ಮಾ ದಾಖಲೆ ಹೇಗಿದೆ?

ತಿಲಕ್ ವರ್ಮಾ ಭಾರತ ಎ ತಂಡದ ಪರ ಇದುವರೆಗೆ 14 ಲಿಸ್ಟ್ ಎ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ವೇಳೆ 54.46ರ ಸರಾಸರಿಯಲ್ಲಿ ಒಟ್ಟು 708 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕ ಹಾಗೂ ಎರಡು ಶತಕಗಳು ಸೇರಿವೆ. ಆದರೆ ಅವರ ಸ್ಟ್ರೈಕ್ ರೇಟ್ ಮಾತ್ರ ಅಚ್ಚರಿ ಮೂಡಿಸುವಂತಿದೆ. ಭಾರತ ಎ ಪರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಿಲಕ್ ಕೇವಲ 73.52ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಸಾಮಾನ್ಯವಾಗಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ರನ್ ಗಳಿಸುವುದು ಬಹಳ ಮುಖ್ಯ. ಆದರೆ ತಿಲಕ್ ಅವರ ಸ್ಟ್ರೈಕ್ ರೇಟ್ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚು ಸೂಕ್ತವಾಗಿರುವಂತಿದೆ. ಹೀಗಾಗಿ ಅವರ ಬ್ಯಾಟಿಂಗ್ ಶೈಲಿ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಸಂಜಯ್ ಬಂಗಾರ್ ಅಸಮಾಧಾನ

ಪಾಕಿಸ್ತಾನ ಎ ವಿರುದ್ಧ ಭಾರತ ಸೋತ ಬೆನ್ನಲ್ಲೇ ಮಾಜಿ ಭಾರತೀಯ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ತಿಲಕ್ ವರ್ಮಾ ಅವರ ಬ್ಯಾಟಿಂಗ್ ವೇಗದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಿಲಕ್ ಆರಂಭದಲ್ಲಿ ತುಂಬಾ ನಿಧಾನವಾಗಿ ರನ್ ಗಳಿಸಿದ್ದರಿಂದ ಮತ್ತೊಂದು ತುದಿಯಲ್ಲಿದ್ದ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಾಗಿರಬಹುದು ಎಂದು ಅವರು ಹೇಳಿದ್ದಾರೆ. ಪಂದ್ಯದಲ್ಲಿ ತಿಲಕ್ 149 ಎಸೆತಗಳಲ್ಲಿ 100 ರನ್ ಗಳಿಸಿದರೂ, 314 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು.

ಈ ಬಗ್ಗೆ ಮಾತನಾಡಿದ ಸಂಜಯ್ ಬಂಗಾರ್, ‘ತಿಲಕ್ ವರ್ಮಾ ಮೊದಲ 25 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು. ನಂತರದ 25 ಎಸೆತಗಳಲ್ಲಿ 12-13 ರನ್ ಸೇರಿಸಿದರು. ಅಂದರೆ, 50 ಎಸೆತಗಳನ್ನು ಎದುರಿಸಿದ ಬಳಿಕ ಅವರ ಸ್ಕೋರ್ ಸುಮಾರು 18ರಿಂದ 21 ರನ್ ಮಾತ್ರ ಆಗಿತ್ತು. ಇಂತಹ ಸಂದರ್ಭದಲ್ಲಿ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಆಟಗಾರನ ಮೇಲೆ ಯಾವ ರೀತಿಯ ಒತ್ತಡ ಉಂಟಾಗಬಹುದು? ತಿಲಕ್ ಕೊನೆಯಲ್ಲಿ ವೇಗವಾಗಿ ರನ್ ಗಳಿಸಿ ಆರಂಭದ ಕೊರತೆಯನ್ನು ಸರಿದೂಗಿಸಬಹುದು ಎಂಬ ವಿಶ್ವಾಸ ಹೊಂದಿದ್ದರು. ಆದರೆ ಅವರ ನಿಧಾನಗತಿಯ ಆಟದಿಂದ ಮತ್ತೊಬ್ಬ ಬ್ಯಾಟರ್ ಯಾವ ನಿರ್ಧಾರ ತೆಗೆದುಕೊಳ್ಳಬೇಕು?

ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕು

ಅವರು ಅಪಾಯ ತೆಗೆದುಕೊಂಡು ಹೊಡೆಯಬೇಕೇ ಅಥವಾ ಒತ್ತಡದಿಂದಾಗಿ ದೊಡ್ಡ ಹೊಡೆತಗಳಿಗೆ ಮುಂದಾಗಬೇಕೇ? ಇಂತಹ ಪರಿಸ್ಥಿತಿ ಎದುರಾಳಿ ಬೌಲರ್‌ಗಳಿಗೆ ವಿಕೆಟ್ ಪಡೆಯುವ ಅವಕಾಶ ಮಾಡಿಕೊಡುತ್ತದೆ’ ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ತಿಲಕ್ ವರ್ಮಾ ಅವರ ಶತಕದ ಹೊರತಾಗಿಯೂ ಅವರ ಬ್ಯಾಟಿಂಗ್ ವೇಗದ ಬಗ್ಗೆ ಚರ್ಚೆ ಮುಂದುವರಿದಿದೆ. ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯ ಜೊತೆಗೆ, ನಿರ್ಣಾಯಕ ಪಂದ್ಯಗಳಲ್ಲಿ ರನ್ ಗಳಿಸುವ ವೇಗವನ್ನೂ ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ತಿಲಕ್ ಮುಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಸಾಮಾನ್ಯ ಹಾಲ್ಮಾರ್ಕ್ ಪರೀಕ್ಷೆಗೂ ಸಿಗದ ನಕಲಿ ಚಿನ್ನದ ಜಾಲ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ