ನಿತ್ಯ ಭವಿಷ್ಯ : ಇಂದು ಈ ರಾಶಿಯವರ ವಸ್ತುವನ್ನು ಅನ್ಯರು ವಶಪಡಿಸಿಕೊಳ್ಳವ ಹುನ್ನಾರ…
ನವೆಂಬರ್ 24, 2026 ರ ಇಂದಿನ ನಿತ್ಯ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ಪ್ರಮುಖ ಅಂಶಗಳನ್ನು ತಿಳಿಸುತ್ತದೆ. ಮಾನಸಿಕ ಒತ್ತಡ, ಹಣಕಾಸಿನ ಗೊಂದಲ, ಆರೋಗ್ಯ ಸಮಸ್ಯೆಗಳು, ಪ್ರೀತಿ ಮತ್ತು ಸಂಬಂಧಗಳ ಚಿಂತೆ, ಹಾಗೂ ವೃತ್ತಿಜೀವನದಲ್ಲಿನ ಸವಾಲುಗಳ ಕುರಿತು ಮಾಹಿತಿ ಇಲ್ಲಿದೆ. ದೈನಂದಿನ ಜೀವನದಲ್ಲಿ ಎದುರಾಗಬಹುದಾದ ಏರಿಳಿತಗಳನ್ನು ಅರಿತುಕೊಳ್ಳಲು ಈ ಜ್ಯೋತಿಷ್ಯ ಫಲವು ಸಹಕಾರಿಯಾಗಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಮಂಗಳವಾರದಂದು ಮಾನಸಿಕ ಒತ್ತಡದಿಂದ ಆಯಾಸ, ದೂರಪ್ರಯಾಣ, ಹಣಕಾಸಿನ ಗೊಂದಲ, ಧಾರ್ಮಿಕ ಕಾರ್ಯ, ವಿಪರೀತ ನೋವು, ಸ್ಪರ್ಧೆಯಲ್ಲಿ ಉತ್ಸಾಹ, ಪ್ರೀತಿಯ ಚಿಂತೆ ಇವೆಲ್ಲ ಇಂದಿನ ಭವಿಷ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವ್ಯತಿಪಾತ್, ಕರಣ : ಭದ್ರ, ಸೂರ್ಯೋದಯ – 06 – 23 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:58 – 16:26, ಯಮಗಂಡ ಕಾಲ 09:15 – 10:41, ಗುಳಿಕ ಕಾಲ 12:06 – 13:32
ಮೇಷ ರಾಶಿ : ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ಸಂಸ್ಥೆಯ ಭಾಗವಾಗಿ ನೀವು ಪ್ರಾಮಾಣಿಕ ಕೆಲಸವನ್ನು ಮಾಡುವಿರಿ. ಉನ್ನತ ಅಧಿಕಾರವು ನಿಮ್ಮನ್ನು ಹುಡುಕಿಕೊಂಡು ಬಂದೀತು. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ.
ವೃಷಭ ರಾಶಿ : ಮನೆಯವರ ಜೊತೆ ವಿನಾಕಾರಣ ಏರುದನಿಯಲ್ಲಿ ಮಾತನಾಡುವಿರಿ. ಆಸ್ತಿಯು ನಷ್ಟವಾಗುದು ಎಂಬ ಹೆದರಿಕೆ ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ವಾಹನ ಚಾಲನೆಯಲ್ಲಿ ಭೀತಿ ಕಾಣಿಸುವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೀರಿ. ಪುಣ್ಯಸ್ಥಳಗಳ ದರ್ಶನವು ಇರಲಿದೆ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು.
ಮಿಥುನ ರಾಶಿ : ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಹಣವನ್ನು ಕೊಟ್ಟಾದರೂ ಆಗಬೇಕಾದ ಕಾರ್ಯವನ್ನು ಶೀಘ್ರವಾಗಿ ಮಾಡಿಸಿಕೊಳ್ಳಿ. ಚರ್ಮದ ತೊಂದರೆಯಿಂದ ಆತಂಕ ಜಾಸ್ತಿ. ಅತಿಯಾದ ಖರ್ಚನ್ನು ಮಾಡಿಕೊಳ್ಳುವಿರಿ. ಮನೆಯ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಪ್ರಯತ್ನ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸಬಹುದು. ಭವಿಷ್ಯದ ದೃಷ್ಟಿಯಿಂದ ಸಂವಹನ ಅಧಿಕ. ಸಹೋದರಿಯ ಜೊತೆ ಭಾವನೆಯನ್ನು ತೆರೆದಿಡುವಿರಿ.
ಕರ್ಕಾಟಕ ರಾಶಿ : ನಿಮ್ಮ ವೇಗದ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಬಂದ ಹಣವನ್ನು ಕೊಡಬೇಕಾದವರಿಗೆ ನೀಡಿ. ಮನೆಯವರ ಸಣ್ಣ ತಪ್ಪುಗಳೂ ನಿಮಗೆ ಸಹ್ಯವಾಗದೇ ಇರುವುದು. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು. ಶ್ರಮವು ಯುಕ್ತಿಯಿಂದ ಕೂಡಿರಲಿ. ಮಾತಿನಲ್ಲಿನ ಅತಿರೇಕ ತಪ್ಪಿಸಿದರೆ ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಆತ್ಮವಿಶ್ವಾಸ ಹೆಚ್ಚುತ್ತದೆ.
ಸಿಂಹ ರಾಶಿ : ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಉದ್ಯೋಗದಲ್ಲಿ ಅಧಿಕ ಆದಾಯು ಸಿಗುವುದು ಎಂಬ ನಿರೀಕ್ಷೆ ಇರಲಿದೆ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಮಾನಸಿಕ ಬೆಂಬಲವನ್ನು ನೀಡುವಿರಿ. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಸಿಗುವುದು. ದೂರದಲ್ಲಿರುವ ಆತ್ಮೀಯರಿಂದ ಶುಭಸುದ್ದಿ. ವಸ್ತುಗಳ ಮೇಲೆ ಅಧಿಕ ಮೋಹವನ್ನು ಇಟ್ಟುಕೊಳ್ಳಲಾರಿರಿ. ಸಮಯಕ್ಕೆ ಆಗಬೇಕಾದುದು ಆಗುವುದು.
ಕನ್ಯಾ ರಾಶಿ : ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಅನಾದರದಿಂದ ನಿಮಗೆ ಸಿಟ್ಟುಬರಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಚಂಚಲವಾದ ಮನಸ್ಸಿನಿಂದ ಯಾರು ಹೇಳಿದ್ದೂ ನಿಮಗೆ ಗೊತ್ತಾಗದು. ನಿಮ್ಮ ಬಗ್ಗೆ ನಿಮ್ಮನ್ನೇ ಕೇಳಿಕೊಳ್ಳಿ.
ತುಲಾ ರಾಶಿ : ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ನಿಮ್ಮಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು. ಅಪರಿಚಿತರು ಮನೆಗೆ ಬರಬಹುದು. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಕೆಲಸದ ಒತ್ತಡ ಇದ್ದರೂ ಫಲ ಉತ್ತಮ. ನಿಮ್ಮ ವೃತ್ತಿಯನ್ನು ಪ್ರೀತಿಸುವುದು ಅನಿವಾರ್ಯವೇ ಆಗಿರುತ್ತದೆ. ಅದು ನಿಮಗೆ ಅನುಕೂಲವನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಇನ್ನೊಬ್ಬರಿಗೆ ಕೊಡುವ ಮೊದಲು ಯೋಚಿಸಿ.
ವೃಶ್ಚಿಕ ರಾಶಿ : ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ಧಾರ್ಮಿಕ ಆಚರಣೆಯಲ್ಲಿ ಅನಿರೀಕ್ಷಿತವಾಗಿ ತೊಡಗುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ಪ್ರೀತಿಭಾವ ಮತ್ತು ಸ್ನೇಹ ಬೆಳೆಸಲು ಸೂಕ್ತ ದಿನ. ಮನೆಯಲ್ಲಿ ಅಧ್ಯಯನಕ್ಕೆ ತೊಂದರೆಯಾಗಿ ಎಲ್ಲಿಗಾದರೂ ದೂರ ಹೋಗುವಿರಿ.
ಧನು ರಾಶಿ : ಮನೋವಿಕಾರದಿಂದ ಜೊತೆಗಾರರಿಗೆ ತೊಂದರೆಯಾಗುವುದು. ಪ್ರವಾಸಕ್ಕೆ ಸ್ನೇಹಿತರ ಜೊತೆ ಎಲ್ಲಗಾದರೂ ಹೋಗುವಿರಿ. ಅನಿರೀಕ್ಷಿತ ಧನವನ್ನು ಪಡೆಯುವಿರಿ. ಸಮಾರಂಭಗಳಿಗೆ ಹೋಗುವಿರಿ. ವಂಚನೆಗೆ ಸಿಕ್ಕಿಕೊಳ್ಳುವಿರಿ. ಯೋಗ್ಯತೆ ಅನುಸಾರವಾಗಿ ನಿಮ್ಮ ಮಾತು ಇರಲಿ. ಯಾರು ಏನೇ ಅಂದರೂ ನೀವು ಮಾತ್ರ ಯಥಾಸ್ಥಾನದಲ್ಲಿ ಇರುವುದು. ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶಗಳು ಸಿಗದೇ ಹೋಗಬಹುದು. ವೃತ್ತಿಯಲ್ಲಿ ನಿಮ್ಮ ಸ್ಥಾನವನ್ನು ಭದ್ರವಾಗಿರಿಸಿಕೊಳ್ಳಲು ನೋಡುವಿರಿ.
ಮಕರ ರಾಶಿ : ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಇಂದು ವಿಸ್ಮರಣೆಯಿಂದ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕೆಲಸವನ್ನು ಬಹಳ ಕಾಲ ಮಾಡುವುದು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗದು. ಸಾಕಾಗದು.
ಕುಂಭ ರಾಶಿ : ಮನೆಯವರ ಸಲಹೆ ನಿಮಗೆ ಉಪಯುಕ್ತವಾಗುವುದು. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ನೀವು ಇಂದು ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿ ಇರುವಿರಿ. ಸುಲಭವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ಹಣವನ್ನು ಬಹಳ ಜೋಪಾನವಾಗಿ ತೆಗೆದಿಟ್ಟುಕೊಳ್ಳಿ. ಇಷ್ಟ ಮಿತ್ರರ ಸಹವಾಸವು ಸಿಗಬಹುದು. ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಲಿದೆ. ಯಾವುದಾದರೂ ಸರಳ ವೃತ್ತಿಯಲ್ಲಿ ಕೆಲಸ ಮಾಡುವಿರಿ.
ಮೀನ ರಾಶಿ : ವಿದ್ಯಾಭ್ಯಾಸದಲ್ಲಿ ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಇನ್ನೊಬ್ಬರಲ್ಲಿ ತಪ್ಪನ್ನೇ ಹುಡುಕುವ ಕೆಲಸ ಇಂದು ಬೇಡ. ಇಂದು ನೀವು ಮಾತನಾಡುವ ಸಂದರ್ಭವು ಕಡಿಮೆ ಇರುವುದು. ಧೈರ್ಯವಿಲ್ಲದೇ ಸಾಹಸ ಮಾಡುವುದು ಬೇಡ. ವ್ಯಕ್ತಿತ್ವವನ್ನು ನೀವು ಸರಿಯಾಗಿ ಮಾಡಿಕೊಳ್ಳಲು ಗಮನವಿರುವುದು. ಓಡಾಟವು ಅಧಿಕ ಆಯಾಸವನ್ನು ತರಿಸಬಹುದು.
-ಲೋಹಿತ ಹೆಬ್ಬಾರ್-8762924271 (what’s app only)




