AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್: ತಮ್ಮ ನಿಲುವು ಪ್ರಕಟಿಸಿದ ಕುಮಾರಸ್ವಾಮಿ

ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್: ತಮ್ಮ ನಿಲುವು ಪ್ರಕಟಿಸಿದ ಕುಮಾರಸ್ವಾಮಿ

ರಮೇಶ್ ಬಿ. ಜವಳಗೇರಾ
|

Updated on: Nov 24, 2026 | 9:19 PM

Share

ಹಿರಿಯೂರು ವಿಧಾನಸಭಾ ಉಪಚುನಾವಣೆ ಟಿಕೆಟ್​​ಗಾಗಿ ದೋಸ್ತಿಯಲ್ಲಿ ಕುಸ್ತಿ ಶುರುವಾಗಿದೆ. ತಮ್ಮ ಪಕ್ಷಕ್ಕೆ ಬೇಕೆಂದು ಮಿತ್ರ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಇದು ಹೈಕಮಾಂಡ್ ಮಟ್ಟಕ್ಕೂ ಹೋಗಿದೆ. ಈ ಸಂಬಂಧ ಈಗಾಗಲೇ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಪತ್ಯೇಕವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇನ್ನು ಹಿರಿಯೂರು ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಅವರು ಇಂದು (ನವೆಂಬರ್ 24) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ, ನವೆಂಬರ್ 24: ಹಿರಿಯೂರು ವಿಧಾನಸಭಾ ಉಪಚುನಾವಣೆ ಟಿಕೆಟ್​​ಗಾಗಿ ದೋಸ್ತಿಯಲ್ಲಿ ಕುಸ್ತಿ ಶುರುವಾಗಿದೆ. ತಮ್ಮ ಪಕ್ಷಕ್ಕೆ ಬೇಕೆಂದು ಮಿತ್ರ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಇದು ಹೈಕಮಾಂಡ್ ಮಟ್ಟಕ್ಕೂ ಹೋಗಿದೆ. ಈ ಸಂಬಂಧ ಈಗಾಗಲೇ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಪತ್ಯೇಕವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇನ್ನು ಹಿರಿಯೂರು ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಅವರು ಇಂದು (ನವೆಂಬರ್ 24) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹಿರಿಯೂರು ಟಿಕೆಟ್ ಯಾರಿಗೆಂದು ನವೆಂಬರ್ 26ರಂದು ನಡೆಯುವ ಸಭೆ ಬಳಿಕ ತೀರ್ಮಾನ ಆಗಲಿದೆ. ಚುನಾವಣೆ ಗೆಲ್ಲುವುದು ನಮ್ಮ ಮುಖ್ಯ ಉದ್ದೇಶ. ಹೀಗಾಗಿ ಗ್ರೌಂಡ್ ರಿಪೋರ್ಟ್ ನೋಡಿಕೊಂಡು ಟಿಕೆಟ್ ನೀಡಬೇಕು. ಒಟ್ಟಿನಲ್ಲಿ ಎನ್‌ಡಿಎ ಗೆಲ್ಲುವುದು ನಮ್ಮ ಉದ್ದೇಶ ಎಂದಿದ್ದಾರೆ. ಈ ಮೂಲಕ ಬಿಜೆಪಿಗೆ ಆದರೂ ಕೊಡಲಿ ಜೆಡಿಎಸ್​​ಗೆ ಆದರೂ ಕೊಡಲಿ ಒಟ್ಟಿನಲ್ಲಿ ಗೆಲ್ಲಬೇಕು ಅಷ್ಟೇ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More