AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್, ಯಶಸ್ ನಾಮಿನೇಟ್

ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್ ಮತ್ತು ಯಶಸ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ಈ ಸ್ಪರ್ಧಿಗಳ ಎದೆಯಲ್ಲಿ ಢವಢವ ಹೆಚ್ಚಾಗಿದೆ. ಯಶಸ್ ಅವರಿಗೆ ಒಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಅವರಿಗೆ ಗುಳ್ಳೆನರಿಯ ಪಾತ್ರವನ್ನು ನೀಡಲಾಗಿದೆ.

ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್, ಯಶಸ್ ನಾಮಿನೇಟ್
Yashas, Soundarya, Asiya, Jagadish, KiranImage Credit source: Colors Kannada
ಮದನ್​ ಕುಮಾರ್​
|

Updated on: Nov 24, 2026 | 10:52 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 79 ದಿನಗಳು ಕಳೆದಿವೆ. ಫಿನಾಲೆ ಹತ್ತಿರ ಆಗುತ್ತಿರುವುದರಿಂದ ಯಾರು ಕೊನೆಯ ತನಕ ಉಳಿದುಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರ ಕೌತುಕ ಹೆಚ್ಚಿದೆ. ಈ ವಾರ ನಾಮಿನೇಷನ್​ನಿಂದ ಪಾರಾಗಲು ಸ್ಪರ್ಧಿಗಳು ಹಲವು ಬಗೆಯ ಸರ್ಕಸ್ ಮಾಡಿದರು. ಅಂತಿಮವಾಗಿ 5 ಮಂದಿಗೆ ಶಾಕ್ ಎದುರಾಗಿದೆ. ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್ ಹಾಗೂ ಯಶಸ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ಈ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಈ ವಾರ ಧನುಷ್ ಅವರ ಬಳಿ ಜೋಕರ್ ಕಾರ್ಡ್ ಇದೆ. ಹಾಗಾಗಿ ಅವರು ತಮ್ಮ ಅಧಿಕಾರ ಬಳಸಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದಕ್ಕೂ ಮುನ್ನ ಗಗನ್ ಚಿನ್ನಪ್ಪ ಅವರಿಂದ ಯಶಸ್ ಅವರು ನೇರವಾಗಿ ನಾಮಿನೇಟ್ ಆದರು. ಜಗದೀಶ್ ಅವರನ್ನು ಮನವೊಲಿಸಿ ತಾವು ಸೇಫ್ ಆಗಲು ಸೌಂದರ್ಯಾ ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಯಶಸ್ ಅವರಿಗೆ ಹೆಚ್ಚು ಒತ್ತಡ ಇದೆ. ಯಾಕೆಂದರೆ ಅವರು ಮುಂದಿನ ಎಲ್ಲ ವಾರಗಳಿಗೂ ನಾಮಿನೇಟ್ ಆಗಿದ್ದಾರೆ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಚ್ಚು ಕಷ್ಟಪಡಬೇಕಿದೆ. ಆರಂಭದಿಂದಲೂ ಅವರು ಸೌಂದರ್ಯಾ ಶೆಟ್ಟಿ ಜೊತೆ ಆಪ್ತವಾಗಿದ್ದಾರೆ. ಆದರೆ ಇನ್ಮುಂದೆ ಆಟದಲ್ಲಿ ಪೈಪೋಟಿ ಜಾಸ್ತಿ ಆಗಲಿದೆ. ಸ್ನೇಹವನ್ನು ಬದಿಗಿಟ್ಟು ಆಟ ಆಡಬೇಕಿರುವುದು ಅನಿವಾರ್ಯ ಆಗಲಿದೆ.

ಪೈಪೋಟಿ ಹೆಚ್ಚುವುದರ ಜೊತೆಗೆ ಬಿಗ್ ಬಾಸ್ ಹಲವು ಟ್ವಿಸ್ಟ್​​ಗಳನ್ನು ನೀಡುತ್ತಿದ್ದಾರೆ. ಯಶಸ್ ಅವರಿಗೆ ಒಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಅವರಿಗೆ ಗುಳ್ಳೆನರಿಯ ಪಾತ್ರವನ್ನು ನೀಡಲಾಗಿದೆ. ತಂಡದ ಒಳಗೆ ಸೇರಿಕೊಂಡು ಆಟವನ್ನು ಕೆಡಿಸುವ ಗೌಪ್ಯ ಕೆಲಸವನ್ನು ಅವರಿಗೆ ವಹಿಸಲಾಗಿದೆ. ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರಿಗೆ ವಿಶೇಷ ಅಧಿಕಾರ ಸಿಗಲಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 13’ ಫಿನಾಲೆ ಸಮೀಪಿಸುವಾಗ ಯಶಸ್ ಆಟಕ್ಕೆ ಆಘಾತ; ಸೌಂದರ್ಯಾಗೆ ಬೇಸರ

ಈ ಸೀಕ್ರೆಟ್ ಟಾಸ್ಕ್ ತುಂಬಾ ಚೆನ್ನಾಗಿದೆ ಎಂದು ಯಶಸ್ ಅವರು ಎಗ್ಸೈಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ 10 ಜನರು ಇದ್ದಾರೆ. ಟಾಪ್ 5 ಸ್ಪರ್ಧಿ ಆಗಬೇಕು ಎಂಬುದು ಎಲ್ಲರ ಆಸೆ ಆಗಿದೆ. ಆ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More