AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್​​, ಧ್ವನಿ ಮಾದರಿ ಎಫ್​​ಎಸ್​​ಎಲ್​​ಗೆ

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು ಚುರುಕುಗೊಳಿಸಿದ್ದಾರೆ. ಕೃಪಾ ಆಳ್ವಾ ಹಸ್ತಾಂತರಿಸಿದ ಮೊಬೈಲ್ ಹಾಗೂ ಅವರ ಧ್ವನಿ ಮಾದರಿಯನ್ನು ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಪ್ರಕರಣದ ತನಿಖೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕೃಪಾ ಮೊಬೈಲ್ ಕೊಡಲು ಹಿಂದೇಟು ಹಾಕಿದ್ದರು ಎಂಬುದಿಲ್ಲಿ ಗಮನಾರ್ಹ.

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್​​, ಧ್ವನಿ ಮಾದರಿ ಎಫ್​​ಎಸ್​​ಎಲ್​​ಗೆ
ಸಿದ್ದರಾಮಯ್ಯ ಮತ್ತು ಕೃಪಾ ಆಳ್ವ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 25, 2026 | 12:46 PM

Share

ಬೆಂಗಳೂರು, ನವೆಂಬರ್​​ 25: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್ ಸಂಬಂಧ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಕೇಳಿದ್ದ ಮೊಬೈಲ್​​ನ ಕೊನೆಗೂ ತನಿಖಾಧಿಕಾರಿ ಎಸಿಪಿ ರವಿಗೆ ಕೃಪಾ ಆಳ್ವಾ ನೀಡಿದ್ದು, ಅದನ್ನು ಸೀಜ್​​ ಮಾಡಿ ಪರಿಶೀಲನೆ ನಡೆಸಲಾಗ್ತಿದೆ. ಸ್ಟಿಂಗ್ ವಿಡಿಯೋ ರೆಕಾರ್ಡ್ ಆಗಿದ್ದ ವೇಳೆ ಈ ಮೊಬೈಲ್​​ ಬಳಕೆಯಾಗಿತ್ತು ಎನ್ನಲಾಗಿದೆ. ಈ ಹಿಂದೆ ವಿಚಾರಣೆ ಸಂದರ್ಭವೇ ಮೊಬೈಲ್​​ ಹಸ್ತಾಂತರಿಸುವಂತೆ ಪೊಲೀಸರು ಕೃಪಾ ಆಳ್ವಾಗೆ ಖಡಕ್​​ ಸೂಚನೆ ನೀಡಿದ್ದರು.

ಮೊಬೈಲ್​​, ಧ್ವನಿ ಮಾದರಿ ಎಫ್​​ಎಸ್​​ಎಲ್​​ಗೆ

ಇನ್ನು ಕೃಪಾ ಆಳ್ವಾ ನೀಡಿರುವ ಮೊಬೈಲ್​​ನಲ್ಲಿ ಸಾಕಷ್ಟು ಪೈಲ್ಸ್ ಡಿಲೀಟ್ ಆಗಿರೋ ಅನುಮಾನ ಹಿನ್ನಲೆ ಅದನ್ನು ಎಫ್​​ಎಸ್​​ಎಲ್​​ಗೆ ರವಾನಿಸಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ತನಿಖೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕೃಪಾ ಮೊಬೈಲ್ ಕೊಡಲು ಹಿಂದೇಟು ಹಾಕಿದ್ದರು. ಇನ್ನು ಮತ್ತೊಂದೆಡೆ ಕೃಪಾ ಆಳ್ವಾ ಧ್ವನಿ ಮಾದರಿಯನ್ನೂ ಪೊಲೀಸರು ಪಡೆದಿದ್ದು, ವಿಡಿಯೋದಲ್ಲಿದ್ದ ಕೃಪಾ ಧ್ವನಿಗೆ ಅದನ್ನು ಮ್ಯಾಚ್ ಮಾಡಲು ತಯಾರಿ ನಡೆಸಿದ್ದಾರೆ. ಆ ಕಾರಣಕ್ಕೆ ಧ್ವನಿ ಮಾದರಿಯನ್ನೂ ಎಫ್​​ಎಸ್​​ಎಲ್​​ಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ, ಸಿಸಿಬಿಗೆ ಸವಾಲು

2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಮತ್ತು 2026ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೋದಲ್ಲಿ ಕೃಪಾ ಆಳ್ವಾ ಹಾಗೂ ಖಾಸಗಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಇವರಿಬ್ಬರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಪಕ್ಷವಿರೋಧಿ ಚಟುವಟಿಕೆ ಮತ್ತು ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೃಪಾ ಆಳ್ವಾರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು. ಆದರೆ ವಿಚಾರಣೆ ವೇಳೆ ತಾವು ನಿರಪರಾಧಿ ಎಂದು ಹೇಳಿಕೊಂಡಿರುವ ಕೃಪಾ ಆಳ್ವಾ, ಸ್ಟಿಂಗ್ ವಿಡಿಯೋ ವಿಚಾರವಾಗಿ ರಾಕೇಶ್ ಶೆಟ್ಟಿ ತಮ್ಮನ್ನು ಸಂಪರ್ಕಿಸಿದ್ದರು ಎಂದಿದ್ದರು. ಪ್ರಕರಣ ಸಂಬಂಧ ಕೃಪಾ ಆಳ್ವಾ ಅದಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ