AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಂಜೀವಿ ಹೆಸರಲ್ಲಿ ‘ಎನ್’ ಕಾಣೆ: ‘ಎನ್’ ಹೋಗಿದ್ದೆಲ್ಲಿ?

ಸುಮಾರು ಐದು ದಶಕಗಳಿಂದಲೂ ದೊಡ್ಡ ಪರದೆಯ ಮೇಲೆ ರಾರಾಜಿಸುತ್ತಿರುವ ನಟ ಚಿರಂಜೀವಿ ಇದೇ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಮೆಗಾಸ್ಟಾರ್ ಬಿರುದಿಗೆ ತಕ್ಕನಾಗಿಯೇ ಅವರ ಒಟಿಟಿ ಎಂಟ್ರಿ ಇರಲಿದ್ದು, ಚಿರಂಜೀವಿ ಒಟಿಟಿ ಎಂಟ್ರಿಯ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೊ ಸಹ ವಿಭಿನ್ನವಾಗಿದ್ದು, ‘ಚಿರಂಜೀವಿ’ ಅವರ ಹೆಸರಿನಲ್ಲಿ ಎನ್ ನಾಪತ್ತೆ ಆಗಿದೆ. ಆ ನಾಪತ್ತೆಯಾದ ‘ಎನ್​​’ ಅಕ್ಷರದಲ್ಲಿ ಸಣ್ಣ ಗುಟ್ಟು ಅಡಗಿದೆ.

ಚಿರಂಜೀವಿ ಹೆಸರಲ್ಲಿ ‘ಎನ್’ ಕಾಣೆ: ‘ಎನ್’ ಹೋಗಿದ್ದೆಲ್ಲಿ?
Chiranjeevi
ಮಂಜುನಾಥ ಸಿ.
|

Updated on: Nov 25, 2026 | 2:56 PM

Share

ಮುಖ್ಯಾಂಶಗಳು

  • ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ ಚಿರಂಜೀವಿ
  • ಚಿರಂಜೀವಿ ಹೆಸರಿನಂದ ಎನ್ ಕಾಣೆ ಆಗಿದೆ
  • ಏನದು ‘ಎನ್’ ಗುಟ್ಟು, ಇಲ್ಲಿದೆ ಮಾಹಿತಿ

ಮೆಗಾಸ್ಟಾರ್ ಚಿರಂಜೀವಿ, ಭಾರತದ ಟಾಪ್ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಈಗಲೂ ಸಹ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಚಿರಂಜೀವಿ ಅವರ ಸಿನಿಮಾಗಳಿಗಾಗಿ ಈಗಲೂ ಪ್ರೇಕ್ಷಕರು ಮೊದಲ ದಿನ ಚಿತ್ರಮಂದಿರದ ಎದುರು ಕ್ಯೂ ನಿಲ್ಲುತ್ತಾರೆ. ಪ್ರಸ್ತುತ ಚಿರಂಜೀವಿ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿವೆ. ಎರಡೂ ಸಿನಿಮಾಗಳು ಮುಂದಿನ ವರ್ಷ ಜನವರಿ ತಿಂಗಳಲ್ಲಿ ರಿಲೀಸ್ ಆಗಲಿವೆ ಎನ್ನಲಾಗುತ್ತಿದೆ. ಇವುಗಳ ನಡುವೆ ಚಿರಂಜೀವಿ ಹೊಸ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಅದರ ಘೋಷಣೆಯನ್ನು ಬಲು ಭಿನ್ನವಾಗಿ ಮಾಡಲಾಗಿದೆ.

ಚಿರಂಜೀವಿ ಅವರು ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಸುಮಾರು ಐದು ದಶಕಗಳಿಂದಲೂ ದೊಡ್ಡ ಪರದೆಯ ಮೇಲೆ ರಾರಾಜಿಸುತ್ತಿರುವ ನಟ ಚಿರಂಜೀವಿ ಇದೇ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಮೆಗಾಸ್ಟಾರ್ ಬಿರುದಿಗೆ ತಕ್ಕನಾಗಿಯೇ ಅವರ ಒಟಿಟಿ ಎಂಟ್ರಿ ಇರಲಿದ್ದು, ಚಿರಂಜೀವಿ ಒಟಿಟಿ ಎಂಟ್ರಿಯ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೊ ಸಹ ವಿಭಿನ್ನವಾಗಿದ್ದು, ‘ಚಿರಂಜೀವಿ’ ಅವರ ಹೆಸರಿನಲ್ಲಿ ಎನ್ ನಾಪತ್ತೆ ಆಗಿದೆ. ಆ ನಾಪತ್ತೆಯಾದ ‘ಎನ್​​’ ಅಕ್ಷರದಲ್ಲಿ ಸಣ್ಣ ಗುಟ್ಟು ಅಡಗಿದೆ.

ಇದೀಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ, ಚಿರಂಜೀವಿ ಅವರ ಹೆಸರು, ಪೋಸ್ಟರ್​​ಗಳನ್ನು ಎಲ್ಲೆಂದರಲ್ಲಿ ಅಂಟಿಸಲಾಗಿದೆ. ಅವರ ಕಟೌಟ್​​ಗಳನ್ನು ಹಾಕಲಾಗಿದೆ. ಆಟೋಗಳ ಹಿಂದೆ ಅವರದ್ದೇ ಪೋಸ್ಟರ್, ಟಿಶರ್ಟ್​​ಗಳ ಮೇಲೂ ಅವರೇ ಆದರೆ ಎಲ್ಲೆಡೆ ‘ಚಿರಂಜೀವಿ’ ಇಂಗ್ಲಿಷ್ (Chiranjeevi) ಹೆಸರಿನಲ್ಲಿ ‘ಎನ್’ ಅಕ್ಷರ ಮಿಸ್ಸಿಂಗ್ ಆಗಿದೆ. ಅರೆ, ‘ಎನ್’ ಅಕ್ಷರ ಎಲ್ಲಿ ಹೋಯಿತು ಎಂದು ಎಲ್ಲರೂ ಹುಡುಕುತ್ತಿರುವಾಗ ಖುದ್ದು ಚಿರಂಜೀವಿ ಅವರು ‘ಎನ್’ ಎಂದು ಕೈಯಿಂದ ಗಾಳಿಯಲ್ಲಿ ಬರೆಯುತ್ತಾರೆ. ಆ ‘ಎನ್’ ನೆಟ್​​ಫ್ಲಿಕ್ಸ್​​ನ ‘ಎನ್’ ಆಗಿರುತ್ತದೆ. ಆ ಮೂಲಕ ತಾವು ನೆಟ್​​ಫ್ಲಿಕ್ಸ್​​ ಮೂಲಕ ಒಟಿಟಿಗೆ ಕಾಲಿಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ ಚಿರಂಜೀವಿ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಮೆಗಾಸ್ಟಾರ್ ಚಿರಂಜೀವಿ ಅವರು ಒಟಿಟಿ, ನೆಟ್​​ಫ್ಲಿಕ್ಸ್​​ಗಾಗಿ ಹೊಸ ಟಾಕ್ ಶೋ ನಡೆಸಿಕೊಡಲಿದ್ದಾರೆ. ಟಾಕ್ ಶೋ ಹೆಸರು ‘ಇದಿ ನಾ ಅಡ್ಡ’. ಈ ಟಾಕ್ ಶೋ ತೆಲುಗಿನಲ್ಲಿ ಇರಲಿದೆ. ತೆಲುಗಿನ ಹಲವು ಖ್ಯಾತನಾಮ ಸಿನಿಮಾ ತಾರೆಯರು, ರಾಜಕಾರಣಿಗಳನ್ನು ಚಿರಂಜೀವಿ ಅವರು ಈ ಶೋಗೆ ಅತಿಥಿಗಳಾಗಿ ಕರೆಸಲಿದ್ದಾರೆ. ಚಿರಂಜೀವಿ ಅವರಿಗೆ ನೋ ಹೇಳುವ ಯಾವ ಸೆಲೆಬ್ರಿಟಿಗಳೂ ತೆಲುಗು ಚಿತ್ರರಂಗದಲ್ಲಿಲ್ಲ. ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ ಇನ್ಯಾವ ಚಿತ್ರರಂಗದಲ್ಲೂ ಇಲ್ಲ. ಹಾಗಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಟ-ನಟಿಯರು ಈ ಟಾಕ್ ಶೋನಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶೀಘ್ರವೇ ಈ ಶೋ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌