Chiranjeevi
ತೆಲುಗು ಚಿತ್ರರಂಗದ ಸ್ಟಾರ್ ನಟ ಚಿರಂಜೀವಿ, ಮೆಗಾಸ್ಟಾರ್ ಚಿರಂಜೀವಿ ಎಂದೇ ಪರಿಚಿತರಯ. ಚಿರಂಜೀವಿ ಜನಿಸಿದ್ದು 1955ರ ಆಗಸ್ಟ್ 22ರಂದು. ಅವರ ಮೂಲ ಹೆಸರು ಕೋನಿಡೇಲ ಶಿವಶಂಕರ ವರಪ್ರಸಾದ್. ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದ ಚಿರಂಜೀವಿ ಅಲ್ಲಿಂದ ನೇರವಾಗಿ ಬಂದಿದ್ದು ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ಗೆ. ಸ್ಪುರದ್ರೂಪಿ ಯುವಕರಾಗಿದ್ದ ಚಿರಂಜೀವಿಗೆ ಆರಂಭದಲ್ಲಿ ವಿಲನ್ ಪಾತ್ರಗಳು ದೊರಕಿದವು. ಅವರು ನಟಿಸಿದ ಮೊದಲ ಸಿನಿಮಾ ‘ಪುನಾದಿರಾಳ್ಳು’ ಆದರೆ ಬಿಡುಗಡೆ ಆಗಿದ್ದು ‘ಪ್ರಾಣಂಖರೀದು’. 1982ರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಚಿರಂಜೀವಿ ನಟಿಸಿದರು. ಅಂದಿನಿಂದ ಹಿಂತಿರುಗಿ ನೋಡಿದ್ದಿಲ್ಲ. ಈವರೆಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಚಿರಂಜೀವಿ.