ನಯನತಾರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಚಿರಂಜೀವಿ; 29 ವರ್ಷ ವಯಸ್ಸಿನ ಅಂತರ
ಚಿರಂಜೀವಿ ಮತ್ತು ನಯನತಾರಾ ಅವರು ಮೆಗಾ 157 ಚಿತ್ರದಲ್ಲಿ ಒಟ್ಟಾಗಿ ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ವಯಸ್ಸಿನಲ್ಲಿ 29 ವರ್ಷಗಳ ಅಂತರ ಇದ್ದರೂ, ಅದು ಅವರ ತೆರೆಮೇಲಿನ ರೊಮ್ಯಾನ್ಸ್‌ಗೆ ಅಡ್ಡಿಯಾಗಿಲ್ಲ. ಈ ಹಾಡಿನ ಚಿತ್ರೀಕರಣ ಕೇರಳದಲ್ಲಿ ನಡೆಯಲಿದ್ದು, 2026ರ ಸಂಕ್ರಾಂತಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಹೀರೋಗಳಿಗೆ ತೆರೆಮೇಲೆ ರೊಮ್ಯಾನ್ಸ್ ಮಾಡಲು ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಅನೇಕರು ಒಪ್ಪುತ್ತಾರೆ. ಇದು ನಿಜ ಕೂಡ ಹೌದು. ಅವರ ವಯಸ್ಸು 60ರ ಮೇಲೆ ಆಗಿದ್ದರೂ ತಮ್ಮ ವಯಸ್ಸಿಗಿಂತ ಸಾಕಷ್ಟು ಸಣ್ಣ ನಟಿಯರ ಜೊತೆ ತೆರೆ ಹಂಚಿಕೊಳ್ಳುತ್ತಾರೆ. ಈಗ ನಯನತಾರಾ ಹಾಗೂ ಚಿರಂಜೀವಿ (Chiranjeevi) ಮೊದಲ ಬಾರಿಗೆ ರೊಮ್ಯಾನ್ಸ್ ಮಾಡಲು ಒಂದಾಗಿದ್ದಾರೆ. ಇವರು ಒಟ್ಟಾಗಿ ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಚಿರಂಜೀವಿ ಅವರಿಗೆ ಈಗ 69 ವರ್ಷ. ನಯನತಾರಾಗೆ 40 ವರ್ಷ. ಅಂದರೆ ಇಬ್ಬರ ಮಧ್ಯೆ 29 ವರ್ಷ ಗ್ಯಾಪ್ ಇದೆ. ಆದರೆ, ತೆರೆಮೇಲೆ ರೊಮ್ಯಾನ್ಸ್ ಮಾಡಲು ಈ ಏಜ್ ಗ್ಯಾಪ್ ಅನ್ನೋದು ಅಡ್ಡಿ ಬಂದಿಲ್ಲ. ಚಿರಂಜೀವಿ ಅವರ 157ನೇ ಸಿನಿಮಾದಲ್ಲಿ ನಯನತಾರಾ ಹಾಗೂ ಚಿರಂಜೀವಿ ರೊಮ್ಯಾಂಟಿಕ್ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಅನಿಲ್ ರವಿಪುಡಿ ಅವರು ‘ಮೆಗಾ 157’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಯನತಾರಾ ನಾಯಕಿ ಅನ್ನೋದು ಗೊತ್ತಾಗಿದೆ. 2026ರ ಸಂಕ್ರಾಂತಿಗೆ ಈ ಸಿನಿಮಾ ರಿಲೀಸ್ ಆಗಲಿದೆ. ಎರಡು ವರ್ಷಗಳ ಬಳಿಕ ನಯನತಾರಾ ತೆಲುಗು ಅಭಿಮಾನಿಗಳ ಎದುರು ಬರುತ್ತಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆದರೆ, ಅಲ್ಲಿ ಯಾವುದೇ ರೊಮ್ಯಾಂಟಿಕ್ ಸಾಂಗ್ ಇರಲಿಲ್ಲ. ಈಗ ಹೊಸ ಸಾಂಗ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಚಿರಂಜೀವಿ ಹೆಸರಲ್ಲಿ ವಿಶೇಷ ಗಿನ್ನೆಸ್ ದಾಖಲೆ ಇದೆ. ಅತಿ ಹೆಚ್ಚು ಸ್ಟೆಪ್ಸ್ಗಳನ್ನು ಅವರು ಹಾಕಿದ್ದಾರೆ. ಇನ್ನು ನಯನತಾರಾ ಕೂಡ ಒಳ್ಳೆಯ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಹೀಗಾಗಿ, ಇಬ್ಬರ ಕಾಂಬಿನೇಷನ್ ಕುತೂಹಲ ಮೂಡಿಸಿದೆ. ಈ ಹಾಡಿನ ಶೂಟ್ ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಭಾನು ಮಾಸ್ಟರ್ ಅವರು ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಜುಲೈ 23 ವೇಳೆಗೆ ಈ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಳ್ಳಲಿದೆ. ಆ ಬಳಿಕ ಒಂದು ಬ್ರೇಕ್ ಪಡೆದು ಆಗಸ್ಟ್ನಲ್ಲಿ ಹೈದರಾಬಾದ್ನಲ್ಲಿ ತಂಡ ಶೂಟಿಂಗ್ ಮಾಡಲಿದೆ ಎಂದು ತಿಳಿದು ಬಂದಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಶೂಟ್ ಸಂಪೂರ್ಣವಾಗಿ ಮುಗಿಯಲಿದೆ. 2026ರ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ.
ಇದನ್ನೂ ಓದಿ: ಮತ್ತೆ ದಕ್ಷಿಣಕ್ಕೆ ಬಂದ ‘ಕೆಜಿಎಫ್’ ಚೆಲುವೆ, ಚಿರಂಜೀವಿ ಸಿನಿಮಾನಲ್ಲಿ ಅವಕಾಶ
ಚಿರಂಜೀವಿ ಅವರು ‘ವಿಶ್ವಂಭರ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಹೆಚ್ಚಿದೆ. ಇನ್ನು, ನಯನತಾರಾ ಅವರು ಕನ್ನಡದ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.