ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ
ಜೀ ಕನ್ನಡದ ಹೊಸ ರಿಯಾಲಿಟಿ ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಶೋ ಕುಟುಂಬದ ಬಂಧಗಳನ್ನು ಹೇಳುತ್ತದೆ. ‘ಪ್ಯಾಟೆ ಹುಡಗೀರ್ ಹಳ್ಳಿ ಲೈಫು’ ಶೋ ಬರಲಿದೆ. ಅದರ ಜೊತೆ ಈ ಶೋ ಕೂಡ ಇರುತ್ತೆ ಎನ್ನಲಾಗಿದೆ. ಹೊಸ ರಿಯಾಲಿಟಿ ಶೋನ ಟೈಟಲ್ ಭಿನ್ನವಾಗಿದ್ದು, ಇನ್ನೂ ಯಾರೊಬ್ಬರೂ ಕೇಳಿಲ್ಲ ಅನ್ನೋದು ವಿಶೇಷ.

ಜೀ ಕನ್ನಡ ಇತ್ತೀಚೆಗಷ್ಟೇ ‘ಪ್ಯಾಟೆ ಹುಡಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ತರೋದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಆಡಿಷನ್ ಕೂಡ ಕರೆದಿದೆ. ಹೀಗಿರುವಾಗಲೇ ಜೀ ಮತ್ತೊಂದು ರಿಯಾಲಿಟಿ ಶೋನ ಘೋಷಣೆ ಮಾಡಿದೆ. ಇದರ ಪ್ರೋಮೋ ಸಾಕಷ್ಟು ಗಮನ ಸೆಳೆದಿದೆ. ಅಷ್ಟಕ್ಕೂ ಯಾವುದು ಆ ಶೋ? ‘ನಾವು ನಮ್ಮವರು’. ಈ ರಿಯಾಲಿಟಿ ಶೋನ (Reality Show) ಟೈಟಲ್ ಭಿನ್ನವಾಗಿದ್ದು, ಇನ್ನೂ ಯಾರೊಬ್ಬರೂ ಕೇಳಿಲ್ಲ ಅನ್ನೋದು ವಿಶೇಷ.
ಶೀಘ್ರದಲ್ಲೇ ಜೀ ಕನ್ನಡದಲ್ಲಿ ‘ನಾವು ನಮ್ಮವರು’ ರಿಯಾಲಿಟಿ ಶೋ ಪ್ರಸಾರ ಕಾಣಲಿದ್ದು, ಪ್ರೋಮೋ ರಿಲೀಸ್ ಆಗಲಿದೆ. ಆತ ಬೆಂಗಳೂರಲ್ಲೇ ಕೆಲಸ ಮಾಡಿಕೊಂಡಿದ್ದವನು. ಅವನು ಊರಿಗೆ ಹಬ್ಬಕ್ಕೆ ತೆರಳಿ ಅದೆಷ್ಟೋ ಸಮಯ ಕಳೆದಿದೆ. ಹೀಗಾಗಿ ಅಮ್ಮ ಕರೆ ಮಾಡಿ ಬರುವಂತೆ ಕೋರಿಕೊಳ್ಳುತ್ತಾಳೆ. ಇದಕ್ಕೆ ಒಪ್ಪೋ ಆತ ಪತ್ನಿ, ಮಗಳ ಜೊತೆ ಊರಿಗೆ ಹೋಗುತ್ತಾನೆ.
ಜೀ ಕನ್ನಡ ಮಾಡಿರೋ ಪೋಸ್ಟ್
View this post on Instagram
ಮಗ, ಸೋಸೆ ಬಂದರು ಎಂದು ಮನೆಯಲ್ಲಿ ಎಲ್ಲರೂ ಸಂಭ್ರಮಿಸುತ್ತಾರೆ. ಮನೆ ಊಟ ಮಾಡಿ ಆತನಿಗೆ ಖುಷಿ ಆಗುತ್ತದೆ. ಹಳ್ಳಿಯವರ ಪ್ರೀತಿ ನೋಡಿ ಆತನಿಗೆ ಹಿಗ್ಗೋ ಹಿಗ್ಗು. ಊರ ಪೂಜೆಯಲ್ಲಿ ಭಾಗಿಯಾಗುತ್ತಾನೆ. ‘ಸಂಬಂಧಗಳ ಬೇರನ್ನು ಗಟ್ಟಿ ಮಾಡಲು ಬರ್ತಿದೆ ನಾವು ನಮ್ಮವರು’ ಎಂದು ಜೀ ಕನ್ನಡ ಹೇಳಿದೆ.
ಈ ಮೊದಲು ಭರ್ಜರಿ ಬ್ಯಾಚುಲರ್ಸ್, ಕಾಮಿಡಿ ಕಿಲಾಡಿಗಳು, ಸರೆಗಮಪ ರೀತಿಯ ರಿಯಾಲಿಟಿ ಶೋಗಳು ಜೀ ಕನ್ನಡದಲ್ಲಿ ಪ್ರಸಾರ ಕಂಡಿವೆ. ಆದರೆ, ಇದೇ ಮೊದಲ ಬಾರಿಗೆ ಹೊಸ ರೀತಿಯ ರಿಯಾಲಿಟಿ ಶೋ ಜೊತೆ ಜೀ ಬರುತ್ತಿದೆ. ಇದರ ರೂಪು ರೇಷೆಗಳ ಬಗ್ಗೆ ಇನ್ನಷ್ಟೇ ಮಾಹಿತಿ ರಿವೀಲ್ ಆಗಬೇಕಿದೆ.
ಇದನ್ನೂ ಓದಿ: ಬರಲಿದೆ ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’; ನೀವು ಭಾಗವಹಿಸಬಹುದು, ಇಲ್ಲಿದೆ ಆಡಿಷನ್ ವಿವರ
ಈಗಾಗಲೇ ‘ಸರಿಗಮಪ’ ರಿಯಾಲಿಟಿ ಶೋ ಪೂರ್ಣಗೊಂಡಿದೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಕೂಡ ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಹೀಗಿರುವಾಗ ‘ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು’ ಹಾಗೂ ‘ನಾವು ನಮ್ಮವರು’ ಶೋ ಜೊತೆ ಜೀ ಕನ್ನಡ ವಾಹಿನಿ ಪ್ರೇಕ್ಷಕರ ಎದುರು ಬರುತ್ತಿದೆ ಎನ್ನಲಾಗುತ್ತಿದೆ. ವೀಕ್ಷಕರಿಗೆ ವೀಕೆಂಡ್ನಲ್ಲಿ ಡಬಲ್ ಮನರಂಜನೆ ಫಿಕ್ಸ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Thu, 17 July 25








