ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್
ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಂದಿನ ಮೂರು ವರ್ಷಗಳ ಕಾಲ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 'ಕೂಲಿ' ಚಿತ್ರದ ಬಳಿಕ 'ಜೈಲರ್ 2' ಸೇರಿದಂತೆ ನಿಥಿಲಾನ್ ಸ್ವಾಮಿನಾಥನ್, ವಿವೇಕ್ ಅತ್ರೇಯ, ಮತ್ತು ಎಚ್. ವಿನೋದ್ ಅವರೊಂದಿಗೆ ಹೊಸ ಚಿತ್ರಗಳಲ್ಲಿ ನಟಿಸುವುದಾಗಿ ತಿಳಿದುಬಂದಿದೆ. 2028ರ ವರೆಗೆ ಅವರ ಕಾಲ್ ಶೀಟ್ ಫುಲ್ ಆಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಇದಾದ ಬಳಿಕ ನೆಲ್ಸನ್ ದಿಲೀಪ್ ಕುಮಾರ್ ಅವರು ‘ಜೈಲರ್ 2’ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಇದಲ್ಲದೆ ಇನ್ನೂ ಹಲವು ಸಿನಿಮಾಗಳು ಅವರ ಬಳಿ ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಮುಂದಿನ ಮೂರು ವರ್ಷ ಅವರು ಸಖತ್ ಬ್ಯುಸಿ.
ರಜನಿಕಾಂತ್ ಅವರಿಗೆ ಈಗ 74 ವರ್ಷ ವಯಸ್ಸು. ಆದಾಗ್ಯೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಇದಾದ ಬಳಿಕ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಬೇಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಮೂರು ನಿರ್ದೇಶಕರು ರಜನಿಕಾಂತ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯ್ ಸೇತುಪತಿ ಅವರು ‘ಮಹರಾಜ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾನ ನಿಥಿಲಾನ್ ಸ್ವಾಮಿನಾಥನ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಕಥೆ ಹಾಗೂ ನಿರೂಪಣೆ ಭರ್ಜರಿಯಾಗಿ ಮೆಚ್ಚುಗೆ ಪಡೆಯಿತು. ಈ ನಿರ್ದೇಶಕರ ಜೊತೆ ರಜನಿಕಾಂತ್ ಅವರು ಸಿನಿಮಾ ಮಾಡಬೇಕಿದೆ. ರೆಡ್ ಜಿಯಂಟ್ ಮೂವೀಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.
ವಿವೇಕ್ ಅತ್ರೇಯಾ ಅವರು ನಾನಿ ಜೊತೆ ಹಲವು ಸಿನಿಮಾ ಮಾಡಿದ್ದಾರೆ. ಅವರು ಈ ರಜನಿಕಾಂತ್ ಜೊತೆ ಸಿನಿಮಾ ಮಾಡಬೇಕಿದೆ. ರಜನಿಕಾಂತ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದೆ. ಮತ್ತೊಂದು ಚಿತ್ರವನ್ನು ಎಚ್. ವಿನೋದ್ ಜೊತೆ ರಜನಿ ಮಾಡಬೇಕಿದೆ ಎಂದು ವರದಿ ಆಗಿದೆ. ಅವರು ಅಜಿತ್ ಜೊತೆ ಹಲವು ಸಿನಿಮಾ ಮಾಡಿದ್ದಾರೆ. ಈಗ ದಳಪತಿ ವಿಜಯ್ ಅವರ ಜೊತೆ ‘ಜನ ನಾಯಗನ್’ ಸಿನಿಮಾ ಮಾಡುತ್ತಿದ್ದಾರೆ. ಆ ಬಳಿಕ ಈ ರಜನಿಕಾಂತ್ ಜೊತೆ ಅವರು ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ರಜನಿಕಾಂತ್ ಭೇಟಿ ಮಾಡಿದ ನಟಿ ಧನ್ಯಾ ರಾಮ್ಕುಮಾರ್; ಖುಷಿಯ ಫೋಟೋಗಳು ಇಲ್ಲಿವೆ..
ಈ ಮೂರು ಸಿನಿಮಾಗಳನ್ನು ಮಾಡಲು ರಜನಿಕಾಂತ್ಗೆ ಇನ್ನೂ 2-3 ವರ್ಷ ಬೇಕಾಗಲಿದೆ. ಹೀಗಾಗಿ, 2028ರವರೆಗೆ ರಜನಿಕಾಂತ್ ಅವರ ಕಾಲ್ಶೀಟ್ ಈಗಾಗಲೇ ಫುಲ್ ಆಗಿದೆ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







