ಒಂದು ಲಕ್ಷ ರೂಪಾಯಿ ಸಹಾಯ ನಿರೀಕ್ಷೆಯಲ್ಲಿದ್ದವನಿಗೆ 1 ಕೋಟಿ ಕೊಟ್ಟ ಚಿರಂಜೀವಿ
ಚಿರಂಜೀವಿ ಅವರ ವಿಶಾಲ ಮನಸ್ಸಿನ ಬಗ್ಗೆ ತಮಿಳು ಸ್ಟಂಟ್ ಮಾಸ್ಟರ್ ಪೂನ್ನಂಬಲಂ ಅವರು ಮಾತನಾಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಚಿರಂಜೀವಿ 1 ಕೋಟಿ ರೂಪಾಯಿಗಳ ಸಹಾಯ ಮಾಡಿದ್ದಾರೆ. ಇದು ಪೂನ್ನಂಬಲಂ ಅವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ತಂದಿದೆ. ಚಿರಂಜೀವಿ ಅವರು ಚಲನಚಿತ್ರೋದ್ಯಮದವರಿಗೆ ಮತ್ತು ಸಾಮಾನ್ಯ ಜನರಿಗೆ ಸಹಾಯ ಮಾಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾರೆ.

ಚಿರಂಜೀವಿ ಅವರು ಯಾವಾಗಲೂ ಸಾಮಾಜಿಕ ಕೆಲಸಗಳ ಮೂಲಕ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಈ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ ಎನ್ನಬಹುದು. ಅವರು ಮಾಡುವ ಅನೇಕ ಒಳ್ಳೆಯ ಕೆಲಸಗಳು ಹೊರಗೆ ಬರೋದೆ ಇಲ್ಲ. ಈಗ ತಮಿಳಿನ ಸ್ಟಂಟ್ ಮಾಸ್ಟರ್ ಹಾಗೂ ಕ್ಯಾರೆಕ್ಟರ್ ಆರ್ಟಿಸ್ಟ್ ಪೂನ್ನಂಬಲಂ ಈ ಬಗ್ಗೆ ಹೇಳಿದ್ದಾರೆ. ತಾವು ಕಷ್ಟದಲ್ಲಿ ಇದ್ದಾಗ ಚಿರಂಜೀವಿಯಿಂದ (Chiranjeevi) ಬಂದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.
ಪೊನ್ನಂಬಲಂ ಅವರು ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದಾರೆ. ಅವರು ಆರ್ಥಿಕವಾಗಿ ಅಷ್ಟು ಸಬಲರಾಗಿಲ್ಲ. ಅವರ ದಿನ ನಿತ್ಯದ ಕೂಳಿಗೆ ಅವರ ಈ ಕೆಲಸದ ಹಣ ಸಾಕಾಗುತ್ತದೆ. ಆದರೆ, ಅವರಿಗೆ ಕಿಡ್ನಿ ಸಂಬಂಧಿತ ಸಮಸ್ಯೆ ಬಂದಿತು. ಇದರಿಂದ ಅವರಿಗೆ ಸಾಕಷ್ಟು ಸಮಸ್ಯೆ ಕೂಡ ಉಂಟಾಯಿತು. ಆಗ, ಚಿರಂಜೀವಿ ಅವರು ಸಹಾಯ ಮಾಡಿದ್ದರು. ಅದೂ ಅಂತಿಂಥ ಸಹಾಯವಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಸಮಸ್ಯೆ ಉಂಟಾದಾಗ ಪೊನ್ನಂಬಲಂ ಅವರು ಹೋಗಿ ಚಿರಂಜೀವಿ ಮನೆಯ ಬಾಗಿಲು ತಟ್ಟಿದರು. ಅವರು ಚಿರಂಜೀವಿ ಅವರಿಂದ 1 ಲಕ್ಷ ರೂಪಾಯಿ ಸಹಾಯ ನಿರೀಕ್ಷೆ ಮಾಡಿದ್ದರು. ಆದರೆ, ಅವರಿಗೆ ಸಿಕ್ಕಿದ್ದು 1 ಲಕ್ಷವಲ್ಲ ಬದಲಿಗೆ ಒಂದು ಕೋಟಿ ರೂಪಾಯಿ. ಈಗ ಅವರು ಸಂಪೂರ್ಣವಾಗಿ ರಿಕವರಿ ಆಗಿದ್ದಾರೆ. ಇದಕ್ಕೆ ಕಾರಣ ಚಿರಂಜೀವಿ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಸಂದರ್ಶನ ಒಂದರಲ್ಲಿ ಚಿರಂಜೀವಿಗೆ ಅವರು ಧನ್ಯವಾದ ಹೇಳಿದ್ದಾರೆ. ತಾವು ಇಷ್ಟು ಆರೋಗ್ಯವಾಗಿ ಇರಲು ಕಾರಣ ಚಿರಂಜೀವಿ ಎಂದು ಮೆಚ್ಚುಗೆ ಮಾತನಾಡಿದ್ದಾರೆ. ‘ನನಗೆ ಅನಾರೋಗ್ಯ ಆದಾಗ ಚಿರಂಜೀವಿಗೆ ಕರೆ ಮಾಡಿ ಸಹಾಯ ಕೇಳಿದೆ. 1 ಲಕ್ಷ ಸಿಕ್ಕರೆ ದೊಡ್ಡದು ಎಂದುಕೊಂಡಿದ್ದೆ. ಆದರೆ, 1 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಕೊಟ್ಟರು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಿರಂಜೀವಿ ಸಿನಿಮಾ ಕಂಟೆಂಟ್ ಲೀಕ್: ಖಡಕ್ ಎಚ್ಚರಿಕೆ ಕೊಟ್ಟ ನಿರ್ಮಾಣ ಸಂಸ್ಥೆ
ಚಿರಂಜೀವಿ ಅವರು ಬೇರೆಯವರ ಸಹಾಯಕ್ಕೆ ಸದಾ ಸಿದ್ಧ. ಅದರಲ್ಲೂ ಇಂಡಸ್ಟ್ರಿಯವರು ಸಹಾಯ ಕೇಳಿದರೆ ಅವರು ಮಾಡಿಯೇ ಮಾಡುತ್ತಾರೆ. ಕೊವಿಡ್ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು. ಅವರು ಬ್ಲಡ್ ಬ್ಯಾಂಕ್ ಕೂಡ ಹೊಂದಿದ್ದಾರೆ. ಚಿರಂಜೀವಿ ಅವರು ‘ವಿಶ್ವಂಭರ’ ಹಾಗೂ ಅನಿಲ್ ರವಿಪುಡಿ ಜೊತೆಗೆ ಒಂದು ಸಿನಿಮಾ ಮಾಡುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







