AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್​​ಗೆ ವಿನಯ್-ರಜತ್ ಖಡಕ್ ವಾರ್ನಿಂಗ್

Dog Satish: ಡಾಗ್ ಸತೀಶ್ ಅವರ ಸುಳ್ಳುಗಳು, ಅವರ ಒಣಪ್ರತಿಷ್ಟೆ, ತೋರಿಕೆಯ ಸಿರಿವಂತಿಕೆ, ಸ್ವಹೊಗಳಿಕೆ ಎಲ್ಲವೂ ಟ್ರೋಲರ್​​ಗಳಿಗೆ ವಸ್ತುವಾಗಿದೆ. ಆದರೆ ಸತೀಶ್ ಮಾತ್ರ, ತಮ್ಮ ಶ್ರೇಷ್ಠತೆಯ ವ್ಯಸನವನ್ನು ಮುಂದುವರೆಸಿರುವುದು ಮಾತ್ರವೇ ಅಲ್ಲದೆ, ಇತರರನ್ನು ಕ್ಷುಲ್ಲಕವಾಗಿ ಕಂಡು ಹೇಳಿಕೆಗಳನ್ನು ನೀಡುವುದು ಮುಂದುವರೆಸಿದ್ದಾರೆ. ಇದೀಗ ಡಾಗ್ ಸತೀಶ್ ಅವರು ಸುದೀಪ್ ಅವರನ್ನು ಕಿಚಾಯಿಸುವ ಪ್ರಯತ್ನ ಮಾಡಿದ್ದು, ಸುದೀಪ್ ಆಪ್ತರುಗಳಾದ ವಿನಯ್ ಗೌಡ ಮತ್ತು ಬುಜ್ಜಿ ರಜತ್, ಡಾಗ್ ಸತೀಶ್​​ಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.

ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್​​ಗೆ ವಿನಯ್-ರಜತ್ ಖಡಕ್ ವಾರ್ನಿಂಗ್
Dog Satish
ಮಂಜುನಾಥ ಸಿ.
|

Updated on: Feb 28, 2026 | 7:53 PM

Share

ಡಾಗ್ ಸತೀಶ್, ಬಿಗ್​​ಬಾಸ್ (Bigg Boss) ಬಂದ ಮೇಲೆ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಗ್​​ಬಾಸ್ ಇಂದ ಹೊರಬಂದ ಬಳಿಕ ಡಾಗ್ ಸತೀಶ್ ಒಳ್ಳೆಯ ಟ್ರೋಲ್ ಸರಕಾಗಿದ್ದಾರೆ. ಅವರ ಸುಳ್ಳುಗಳು, ಅವರ ಒಣಪ್ರತಿಷ್ಟೆ, ತೋರಿಕೆಯ ಸಿರಿವಂತಿಕೆ, ಸ್ವಹೊಗಳಿಕೆ ಎಲ್ಲವೂ ಟ್ರೋಲರ್​​ಗಳಿಗೆ ವಸ್ತುವಾಗಿದೆ. ಆದರೆ ಸತೀಶ್ ಮಾತ್ರ, ತಮ್ಮ ಶ್ರೇಷ್ಠತೆಯ ವ್ಯಸನವನ್ನು ಮುಂದುವರೆಸಿರುವುದು ಮಾತ್ರವೇ ಅಲ್ಲದೆ, ಇತರರನ್ನು ಕ್ಷುಲ್ಲಕವಾಗಿ ಕಂಡು ಹೇಳಿಕೆಗಳನ್ನು ನೀಡುವುದು ಮುಂದುವರೆಸಿದ್ದಾರೆ. ಇದೀಗ ಡಾಗ್ ಸತೀಶ್ ಅವರು ಸುದೀಪ್ ಅವರನ್ನು ಕಿಚಾಯಿಸುವ ಪ್ರಯತ್ನ ಮಾಡಿದ್ದು, ಸುದೀಪ್ ಆಪ್ತರುಗಳಾದ ವಿನಯ್ ಗೌಡ ಮತ್ತು ಬುಜ್ಜಿ ರಜತ್, ಡಾಗ್ ಸತೀಶ್​​ಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.

ಸತೀಶ್ ಅವರ ಹೆಸರಿನ ಇನ್​​ಸ್ಟಾಗ್ರಾಂ ಪೇಜಿನಲ್ಲಿ ಅವರ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದೀಗ ಈ ವಿಡಿಯೋ ಸುದೀಪ್ ಅಭಿಮಾನಿಗಳ ಸಿಟ್ಟು ನೆತ್ತಿಗೆ ಏರಿಸಿದೆ. ವಿಡಿಯೋನಲ್ಲಿ ಸತೀಶ್ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಿನ್ನೆಲೆಯಲ್ಲಿ ಸುದೀಪ್ ಅವರ ‘ದಾದ ಯಾರ್ ಗೊತ್ತಾ?’ ಹಾಡು ಹಾಕಲಾಗಿದೆ. ವಿಡಿಯೋ ಮೇಲೆ, ‘ಅಣ್ಣ ಸೂಸು ಮಾಡಿದರೂ ನ್ಯೂಸ್ ಆಗುತ್ತೆ’ ಎಂದಿದೆ. ಸತೀಶ್ ಕಾಲಿನ ಬಳಿ, ‘ಅಣ್ಣ ಯಾರ್ ಗೊತ್ತ?’ ಎಂಬ ಸಾಲು ಬರೆದಿದೆ.

ಸತೀಶ್ ಅವರ ಅಧಿಕೃತ ಖಾತೆಗೂ ಈ ವಿಡಿಯೋ ಟ್ಯಾಗ್ ಆಗಿದ್ದು, ಸುದೀಪ್ ಅವರನ್ನು ಅವಮಾನಿಸಲೆಂದೇ ಹೀಗೆ ಮಾಡಿರುವುದು ವಿಡಿಯೋ ನೋಡಿದರೆ ತಿಳಿಯುತ್ತಿದೆ. ಅಲ್ಲದೆ, ಪರೋಕ್ಷವಾಗಿ ತಾನು ಸುದೀಪ್​ ಗಿಂತಲೂ ದೊಡ್ಡ ಸೆಲೆಬ್ರಿಟಿ ಎಂದು ಬಿಂಬಿಸಿಕೊಳ್ಳುವ ಸತೀಶ್ ಅವರ ಪ್ರಯತ್ನವೂ ಕಾಣುತ್ತಿದೆ. ಇದೀಗ ಈ ವಿಡಿಯೋ ಸುದೀಪ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?

ವಿಡಿಯೋಕ್ಕೆ ಕಮೆಂಟ್ ಮಾಡಿರುವ ವಿನಯ್ ಗೌಡ, ‘ಮೊದಲು ಹಾಡು ಡಿಲೀಟ್ ಮಾಡು, ಇಲ್ಲ ಅಂದ್ರೆ ಸ್ವಲ್ಪ ತಾಳು ನಿನ್ನ ಜನ್ನರು ನಾಯಿ ತರ ಹೊಡಿತಾರೆ ಆ ವಿಡಿಯೋ ನಾನ್ ಹಾಕ್ತಿನಿ’ ಎಂದಿದ್ದಾರೆ. ಕಮೆಂಟ್​​ನಲ್ಲಿಯೇ ಸತೀಶ್ ಅನ್ನು ಸಿಟ್ಟಿನಿಂದ ನಿಂದಿಸಿದ್ದಾರೆ ಸಹ. ಇನ್ನು ಅದೇ ವಿಡಿಯೋಕ್ಕೆ ರಜತ್ ಸಹ ಕಮೆಂಟ್ ಮಾಡಿದ್ದು, ‘ವಿಡಿಯೋ ತೆಗೆಯೋ ಕಿತ್ತೋದವನೆ, ಸುದೀಪ್ ಸರ್ ಸಾಂಗ್ ಹೆಂಗೋ ಹಾಕಿದೆ. ಸಾಂಗ್ ಡಿಲೀಟ್ ಆಗ್ಲಿಲ್ಲ ಅಂದ್ರೆ ಇದೆ ನಿಂಗೆ, ಆಟ ಆಡ್ತೀಯ ಕಿತ್ತೋದವನೆ, ಕಾಲ್ ಮಾಡ್ತಿದ್ದೀನಿ ಫೋನ್ ಪಿಕ್ ಮಾಡು’ ಎಂದು ಖಡಕ್ ಆಗಿಯೇ ವಾರ್ನಿಂಗ್ ಮಾಡಿದ್ದಾರೆ.

ವಿನಯ್ ಮತ್ತು ರಜತ್ ಮಾತ್ರವೇ ಅಲ್ಲದೆ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಧನರಾಜ್ ಇನ್ನೂ ಕೆಲವರು ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ಸತೀಶ್​​ಗೆ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಆದರೆ ಡಾಗ್ ಸತೀಶ್ ಆ ವಿಡಿಯೋವನ್ನು ಡಿಲೀಟ್ ಮಾಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; ಮಕರ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; ಮಕರ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?