AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 1ರ ದಿನಭವಿಷ್ಯ

Daily Numerology March 01: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 1ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 1ರ ದಿನಭವಿಷ್ಯ
ದಿನ ಭವಿಷ್ಯImage Credit source: Pinterest
ಸ್ವಾತಿ ಎನ್​ಕೆ
| Edited By: |

Updated on:Mar 01, 2026 | 12:20 AM

Share

ಅಶಕ್ತರಿಗೆ ಅನ್ನದಾನ ಮಾಡುವುದರಿಂದ, ಅದರಲ್ಲೂ ಕನಿಷ್ಠ ಒಬ್ಬರಿಗೆ ಊಟ ಹಾಕುವುದರಿಂದ ಬಾಕಿ ಇರುವಂಥ ಹಣವನ್ನು ವಸೂಲಿ ಮಾಡುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಲಾರಿ ಅಥವಾ ಭಾರೀ ವಾಹನಗಳ ಚಾಲನೆ ಮಾಡುವಂಥವರಿಗೆ ಒಂದಲ್ಲ ಒಂದು ರೀತಿ ಒತ್ತಡ ಅನುಭವಕ್ಕೆ ಬರಲಿದೆ. ನೀವು ತೋರಿದ ನಿರ್ಲಕ್ಷ್ಯದಿಂದ ನಷ್ಟ ಕಾಣುವಂತಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಂಥ ಮಾತುಗಳಿಂದ ನೀವು ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು ಮುಖ್ಯ ಆಗುತ್ತದೆ. ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ನಿರೀಕ್ಷೆ ಕೂಡ ಮಾಡಿರದಂಥ ಹಣ ಕೈ ಸೇರಲಿದೆ. ಪ್ರತಿ ತಿಂಗಳು ಇಂತಿಷ್ಟು ಆದಾಯ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರು ಅದಕ್ಕೆ ಬೇಕಾದ ಪ್ರಯತ್ನ ಆರಂಭ ಮಾಡುತ್ತೀರಿ. ಸಂಗಾತಿ ಜೊತೆಗೆ ಸಂಬಂಧಿಕರ ಕಾರಣದಿಂದ ಸಣ್ಣ ಪುಟ್ಟ ಮನಸ್ತಾಪ ಆಗಬಹುದು. ಆದರೆ ಇದನ್ನು ಕೂತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮಷ್ಟಕ್ಕೆ ನೀವು ಅಂತ ಇದ್ದರೂ ಕೆಲವು ವಾದ- ವಿವಾದಗಳಿಗೆ ಕೆಲವರು ಎಳೆಯುತ್ತಾರೆ. ದೊಡ್ಡ ಗುಂಪಿನಲ್ಲಿ ಜನರು ಇರುವ ಕಡೆಗೆ ನೀವು ಹೋಗದಿರುವುದು ಉತ್ತಮ. ಇದನ್ನು ಮೀರಿಯೂ ಅಂಥ ಸ್ಥಳದಲ್ಲಿ ನೀವು ಇದ್ದೀರಿ ಅಂತಾದಲ್ಲಿ ಮೌನವಾಗಿ ಇರುವುದು ಕ್ಷೇಮ. ಸಹನೆ ಇಟ್ಟುಕೊಂಡು ಬಹಳ ಸಮಯದಿಂದ ಕಾಯುತ್ತಾ ಬಂದಿದ್ದಕ್ಕೂ ಸಾರ್ಥಕ ಎಂಬಂತೆ ಕೆಲವು ಕಾರ್ಯಗಳು ನಿಮ್ಮಂತೆಯೇ- ನಿಮಗೆ ಬೇಕಾದಂತೆಯೇ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Published On - 12:20 am, Sun, 1 March 26

Follow Us
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ