AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!

ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!

Sahadev Mane
| Edited By: |

Updated on: Jul 04, 2026 | 8:00 PM

Share

ಮುಖ್ಯಾಂಶಗಳು

  • ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಹಲವೆಡೆ ಅವಾಂತರ
  • ಮಳೆಗೆ ಕುಸಿದುಬಿದ್ದ ಮನೆ ಗೋಡೆ
  • ಮನೆಯಲ್ಲಿದ್ದ 7 ಜನರು ಪ್ರಾಣಾಪಾಯದಿಂದ ಪಾರು

ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಗೆ ಮನೆಯೊಂದರ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ 7 ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ. ಇನ್ನು ವಾಣಿಜ್ಯ ನಗರಿ ಮುಂಬೈ ಜಲಾವೃತವಾಗಿದ್ದು, ಗುಜರಾತ್, ರಾಜಸ್ಥಾನ, ಜಮ್ಮು ಕಾಶ್ಮೀರ ಮತ್ತು ಉತ್ತರಾಖಂಡದಲ್ಲೂ ವರುಣಾರ್ಭಟ ಜೋರಾಗಿದೆ.

ಬೆಳಗಾವಿ, ಜುಲೈ 04: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆರಾಯ ಅಕ್ಷರಶಃ ರೌದ್ರಾವತಾರ ತಾಳಿದೆ. ಒಂದು ಕಡೆ ವರುಣಾರ್ಭಟಕ್ಕೆ ಮನೆ ಒಳಗೆ ನೀರು ನುಗ್ಗಿದ್ದರೆ, ಮತ್ತೊಂದು ಕಡೆ ಮನೆ ಗೋಡೆ ಕುಸಿದು ಬಿದ್ದಿದೆ. ಚಿಕ್ಕೋಡಿ ತಾಲೂಕಿನ ಜೋಡರಕುರುಳಿ ಗ್ರಾಮದಲ್ಲಿ ಗಂಗವ್ವ ವರಾಳೆ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿಯುವ ಭೀಕರ ಶಬ್ದ ಕೇಳಿ ಮನೆಯಲ್ಲಿದ್ದ 7 ಜನರು ತಕ್ಷಣ ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಸದ್ಯ ಮನೆ ಕಳೆದುಕೊಂಡು ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. ಬೆಳಗಾವಿ ನಗರದ ವೀರಭದ್ರ ನಗರದಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು, ಮೊಹಮ್ಮದ್ ಅಲಿ ಎಂಬುವವರ ಮನೆ ಸೇರಿದಂತೆ ಮೂರ್ನಾಲ್ಕು ಮನೆಗಳಿಗೆ ಮಳೆನೀರು ನುಗ್ಗಿದೆ. ಇದರಿಂದ ದವಸ ಧಾನ್ಯ, ಗೃಹೋಪಯೋಗಿ ಸಾಮಗ್ರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿರುವ ಜನ, ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us