AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ; ಪ್ರಿಯಾಂಕ್ ಖರ್ಗೆ

ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ; ಪ್ರಿಯಾಂಕ್ ಖರ್ಗೆ

ರಾಮು, ಆನೇಕಲ್​
| Edited By: |

Updated on:Jul 04, 2026 | 10:01 PM

Share

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರ ಜೈಲಿಗೆ ಪ್ರಿಯಾಂಕ್​ ಖರ್ಗೆ ಭೇಟಿ
  • ಇಂದು ಸನ್ನಡತೆ ಆಧಾರದಲ್ಲಿ 24 ಕೈದಿಗಳು ಬಿಡುಗಡೆ
  • ಜೈಲಿನ ಆಡಳಿತ ವೈಖರಿ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ವ್ಯವಸ್ಥೆಗಳ ಪರಿಶೀಲನೆ ಮಾಡಿದರು. ಈ ವೇಳೆ 24 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಡಗಿದೆ. ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ, ಗೃಹ ಇಲಾಖೆಯ ಉಸ್ತುವಾರಿ ಎಂದು ಹೇಳಿದ್ದಾರೆ.

ಬೆಂಗಳೂರು, ಜುಲೈ 04: ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ. ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ, ಜೈಲು ಆಡಳಿತ ಮತ್ತು ಕೈದಿಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸನ್ನಡತೆ ಆಧಾರದಲ್ಲಿ 24 ಕೈದಿಗಳು ಬಿಡುಗಡೆ ಮಾಡಲಾಗಿದೆ ಎಂದರು. ಇನ್ನು ಜೈಲಿನ ಆಡಳಿತ ವೈಖರಿ ಬಗ್ಗೆ ಮಾಹಿತಿಯನ್ನ ಪಡೆದಿದ್ದೇನೆ. ಸಾಕಷ್ಟು ವಿಚಾರಣಾಧೀನ ಕೈದಿಗಳನ್ನ ಭೇಟಿ ಮಾಡಿ ಮಾತನಾಡಿದೆ. ಸಣ್ಣಪುಟ್ಟ ಕ್ರೈಂ ಮಾಡಿ ಆರ್ಥಿಕ ನೆರವಿಲ್ಲದೆ ಜೈಲಲ್ಲಿದ್ದಾರೆ. ಅಂತಹವರಿಗೆ ಕಾನೂನು, ಆರ್ಥಿಕ ನೆರವು ಬಗ್ಗೆ ಚಿಂತನೆ ಮಾಡಲಾಗುವುದು. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೊಲೆ ಆರೋಪಿ ಪವಿತ್ರಾ ಗೌಡಗೆ ರಾಜಾತಿಥ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು, ಜೈಲಿನಲ್ಲಿ ಯಾರಿಗೂ ಕೂಡ ವಿಶೇಷ ಆತಿಥ್ಯ ನೀಡುತ್ತಿಲ್ಲ. ಆ ರೀತಿ ಕಂಡು ಬಂದರೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 04, 2026 09:58 PM

Follow Us