AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು

ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು

ಸುಷ್ಮಾ ಚಕ್ರೆ
|

Updated on: Aug 13, 2026 | 10:59 PM

Share

ಝೋಜಿಲಾ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಂಗಾ ಮೋಡ್ ಬಳಿ ಭಾರಿ ಪ್ರಮಾಣದ ಕೆಸರು ಮತ್ತು ಮಣ್ಣು ಸಂಗ್ರಹಗೊಂಡಿದ್ದು, ಲಡಾಖ್ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಈ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿತಗೊಂಡಿದೆ. ರಸ್ತೆಯನ್ನು ತೆರವುಗೊಳಿಸಿ ಆದಷ್ಟು ಬೇಗ ಸಂಚಾರವನ್ನು ಯಥಾಸ್ಥಿತಿಗೆ ತರಲು ಗಡಿ ರಸ್ತೆಗಳ ಸಂಸ್ಥೆಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಗಿದೆ.

ಶ್ರೀನಗರ, ಆಗಸ್ಟ್ 13: ಜಮ್ಮು ಕಾಶ್ಮೀರದ ಸೋನಮಾರ್ಗ ಸಮೀಪದ ಝೋಜಿಲಾ ಪಾಸ್ ಬಳಿಯ ರಂಗಾ ಮೋಡ್ ಪ್ರದೇಶದಲ್ಲಿ ಇಂದು ಭಾರಿ ಮೇಘಸ್ಫೋಟ (Cloudburst) ಸಂಭವಿಸಿದ್ದು, ತಕ್ಷಣವೇ ಭೂಕುಸಿತ, ಪ್ರವಾಹ ಉಂಟಾಗಿ ಸ್ಥಳೀಯ ನದಿಗಳಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತಟಗಳು ಹಾಗೂ ನೀರಿನ ಕಾಲುವೆಗಳ ಬಳಿ ತೆರಳದಂತೆ ಸ್ಥಳೀಯರಿಗೆ ಆಡಳಿತ ಸೂಚಿಸಿದೆ. ಈ ಮೇಘಸ್ಫೋಟದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಝೋಜಿಲಾ ಪಾಸ್‌ನ ರಂಗಾ ಮೋರ್ ವಿಭಾಗದ ಬಳಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಎರಡೂ ಪ್ರದೇಶಗಳ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ಝೋಜಿಲಾ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಂಗಾ ಮೋಡ್ ಬಳಿ ಭಾರಿ ಪ್ರಮಾಣದ ಕೆಸರು ಮತ್ತು ಮಣ್ಣು ಸಂಗ್ರಹಗೊಂಡಿದ್ದು, ಲಡಾಖ್ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಈ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿತಗೊಂಡಿದೆ. ರಸ್ತೆಯನ್ನು ತೆರವುಗೊಳಿಸಿ ಆದಷ್ಟು ಬೇಗ ಸಂಚಾರವನ್ನು ಯಥಾಸ್ಥಿತಿಗೆ ತರಲು ಗಡಿ ರಸ್ತೆಗಳ ಸಂಸ್ಥೆಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us