AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ಸುಷ್ಮಾ ಚಕ್ರೆ
|

Updated on: Jul 04, 2026 | 9:31 PM

Share

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಪಕ್ಷದೊಂದಿಗೆ ಉಳಿದಿರುವ ಕಾರ್ಯಕರ್ತರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಟಿಎಂಸಿಯ ಬಂಡಾಯ ಬಣವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, "ಟಿಎಂಸಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಿದ ನಾಯಕರೇ ಈಗ ಪಕ್ಷವು ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿರುವುದು ವಿರೋಧಾಭಾಸವಾಗಿದೆ. ಒಂದು ವೇಳೆ ಅದೇ ನಿಜವಾಗಿದ್ದರೆ, ಅವರು 2026ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಲ್ಲಿ ಹೇಗೆ ಸ್ಪರ್ಧಿಸಿದರು? " ಎಂದು ಅವರು ಆಕ್ರೋಶ ಹೊರಹಾಕಿದರು.

ಕೊಲ್ಕತ್ತಾ, ಜುಲೈ 4: ಪಶ್ಚಿಮ ಬಂಗಾಳದ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರೆದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷೆ ಮಮತಾ ಬ್ಯಾನರ್ಜಿ ಇಂದು ತಮ್ಮ ಪಕ್ಷದ ಬಂಡಾಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರನ್ನು “ದ್ರೋಹಿಗಳು” ಎಂದು ಕರೆದಿರುವ ಮಮತಾ ಬ್ಯಾನರ್ಜಿ (Mamata Banerjee), ಈ ನಾಯಕರು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಪಕ್ಷದೊಂದಿಗೆ ಉಳಿದಿರುವ ಕಾರ್ಯಕರ್ತರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಟಿಎಂಸಿಯ ಬಂಡಾಯ ಬಣವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, “ಟಿಎಂಸಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಿದ ನಾಯಕರೇ ಈಗ ಪಕ್ಷವು ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿರುವುದು ವಿರೋಧಾಭಾಸವಾಗಿದೆ. ಒಂದು ವೇಳೆ ಅದೇ ನಿಜವಾಗಿದ್ದರೆ, ಅವರು 2026ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಲ್ಲಿ ಹೇಗೆ ಸ್ಪರ್ಧಿಸಿದರು? ಅವರಿಗೆ ಪಕ್ಷದ ಚಿಹ್ನೆಯನ್ನು ನೀಡಿದ್ದು ನಾನು. 2026ರ ಚುನಾವಣೆಗೆ ಅವರ ನಾಮಪತ್ರಗಳಿಗೆ ನಾನೇ ಸಹಿ ಹಾಕಿದ್ದೆ. ಚುನಾವಣೆ ಮುಗಿದ ಕೇವಲ ಎರಡು ತಿಂಗಳಲ್ಲೇ ನೀವು ಹೇಗೆ ದ್ರೋಹಿಗಳಾದಿರಿ? ಎಲ್ಲದಕ್ಕೂ ಒಂದು ಮಿತಿ ಇರಬೇಕು. ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ. ನೀವು ಬೇಕಿದ್ದರೆ ನೇರವಾಗಿ ಬಿಜೆಪಿಗೆ ಸೇರಿ. ಆದರೆ, ನಾನು ಬಿಜೆಪಿ ಎದುರು ತಲೆ ಬಾಗಿಸುವ ಮಾತೇ ಇಲ್ಲ” ಎಂದು ಅವರು ಆಕ್ರೋಶ ಹೊರಹಾಕಿದರು.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us