AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಬೌಲರ್​ಗಳ ಬೆಂಡೆತ್ತಿದ ಬೆಥೆಲ್: ಇಂಗ್ಲೆಂಡ್​ಗೆ ಭರ್ಜರಿ ಜಯ

India vs England 2nd T20I: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಮಳೆಯ ಕಾರಣ ರದ್ದಾಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯ ಜುಲೈ 7 ರಂದು ನಡೆಯಲಿದೆ.

ಭಾರತೀಯ ಬೌಲರ್​ಗಳ ಬೆಂಡೆತ್ತಿದ ಬೆಥೆಲ್: ಇಂಗ್ಲೆಂಡ್​ಗೆ ಭರ್ಜರಿ ಜಯ
Jacob BethellImage Credit source: GettyImages
ಝಾಹಿರ್ ಯೂಸುಫ್
|

Updated on: Jul 04, 2026 | 10:42 PM

Share

ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 50 ರನ್​ ಪೇರಿಸಿದ ಬಳಿಕ ವೈಭವ್ ಸೂರ್ಯವಂಶಿ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಜೊತೆಗೂಡಿ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇನಲ್ಲೇ 65 ರನ್ ಕಲೆಹಾಕಿತು.

ಪವರ್​ಪ್ಲೇ ಮುಕ್ತಾಯವಾಗುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಅಭಿಷೇಕ್ ಶರ್ಮಾ (43 ರನ್, 24 ಎಸೆತಗಳು) ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ನಾಯಕ ಶ್ರೇಯಸ್ ಅಯ್ಯರ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು.

ಮತ್ತೊಂದಡೆ ರನ್​ಗಳಿಸಲು ಪರದಾಡಿದ  ಇಶಾನ್ ಕಿಶನ್ 49 ರನ್​ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು. ಈ ನಿಧಾನಗತಿಯ ಬ್ಯಾಟಿಂಗ್​ನಿಂದ ಭಾರತದ ಸ್ಕೋರ್ ವೇಗವು ಕುಂಠಿತವಾಯಿತು.  ಆ ಬಳಿಕ ಬಂದ ಶಿವಂ ದುಬೆ 5 ರನ್​ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಮೊದಲ ಮೂರು ಎಸೆತಗಳಲ್ಲಿ 6,6,4 ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​ ಕಲೆಹಾಕಿತು.

191 ರನ್​ಗಳ ಗುರಿ:

191 ರನ್​ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಫಿಲ್ ಸಾಲ್ಟ್ (0) ಹಾಗೂ ಜೋಸ್ ಬಟ್ಲರ್ (0) ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ಔಟಾದರು.

ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹ್ಯಾರಿ ಬ್ರೂಕ್ ಕೇವಲ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 39 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಹ್ಯಾರಿ ಬ್ರೂಕ್ (39) ಔಟಾದ ಬಳಿಕ ಜೊತೆಗೂಡಿದ ಜೇಕಬ್ ಬೆಥೆಲ್ ಹಾಗೂ ಟಾಮ್ ಬ್ಯಾಂಟನ್ ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ 3 ವಿಕೆಟ್ ನಷ್ಟದೊಂದಿಗೆ ಇಂಗ್ಲೆಂಡ್ ತಂಡದ ಸ್ಕೋರ್ 100ರ ಗಡಿದಾಟಿತು.

ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಟಾಮ್ ಬ್ಯಾಂಟನ್ (39) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ವಿಲ್ ಜ್ಯಾಕ್ಸ್ (9) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಜೇಕಬ್ ಬೆಥೆಲ್ ತಂಡವನ್ನು ಗುರಿ ಮುಟ್ಟಿಸುವ ಪ್ರಯತ್ನ ಮುಂದುವರೆಸಿದರು. ಈ ಪ್ರಯತ್ನದೊಂದಿಗೆ ಬೆಥೆಲ್ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಇದಾಗ್ಯೂ ಕೊನೆಯ 5 ಓವರ್​ಗಳಲ್ಲಿ ಇಂಗ್ಲೆಂಡ್ ತಂಡಕ್ಕೆ 59 ರನ್​​ಗಳ ಅವಶ್ಯಕೆಯಿತ್ತು. ಈ ಹಂತದಲ್ಲಿ 17ನೇ ಓವರ್​ ಎಸೆದ ರವಿ ಬಿಷ್ಣೋಯ್ ನೀಡಿದ್ದು ಬರೋಬ್ಬರಿ 29 ರನ್​ಗಳು. ಪರಿಣಾಮ ಕೊನೆಯ 18 ಎಸೆತಗಳಲ್ಲಿ ಇಂಗ್ಲೆಂಡ್ ಗುರಿ 20 ಕ್ಕೆ ಬಂದು ನಿಂತಿತು.

ಇತ್ತ 46 ಎಸೆತಗಳನ್ನು ಎದುರಿಸಿದ ಜೇಕಬ್ ಬೆಥೆಲ್ 5 ಭರ್ಜರಿ ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 76 ರನ್ ಬಾರಿಸಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ 19 ಓವರ್​​ಗಖಕ್ಕು 191 ರನ್​ಗಳಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಇತಿಹಾಸ ಬರೆದರೂ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಇಂಗ್ಲೆಂಡ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.

Follow Us
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ