AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ’: ಗುಡುಗಿದ ಪ್ರತಾಪ್ ಸಿಂಹ

‘ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ’: ಗುಡುಗಿದ ಪ್ರತಾಪ್ ಸಿಂಹ

ಮಂಜುನಾಥ ಎಚ್​. ವಿ.
| Edited By: |

Updated on: Sep 27, 2026 | 10:09 PM

Share

ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಗಣೇಶೋತ್ಸವ ಆಚರಣೆಗೆ ವಿಧಿಸಲಾಗುವ ನಿರ್ಬಂಧಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಂತಹ ಸ್ಥಳಗಳಲ್ಲಿ ಅದ್ದೂರಿಯಾಗಿ, ಶಾಂತಿಯುತವಾಗಿ ನಡೆಯುವ ವಿಸರ್ಜನೆಗೆ ಹೋಲಿಸಿದರೆ, ಕರ್ನಾಟಕದಲ್ಲಿ ಅನುಮತಿ ಪಡೆಯಲು ಜನ ಎದುರಿಸುವ ಸಮಸ್ಯೆಗಳನ್ನು ಟೀಕಿಸಿದ್ದಾರೆ. ಗಣೇಶೋತ್ಸವದ ಐತಿಹಾಸಿಕ ಮಹತ್ವವನ್ನು ಸ್ಮರಿಸಿದ್ದಾರೆ.

ನೆಲಮಂಗಲ, ಸೆಪ್ಟೆಂಬರ್​​ 27: ‘ನಾವು ಹಿಂದೂಗಳು ಎಂದಿಗೂ ಯಾರ ಮೇಲೂ ನಾವಾಗಿಯೇ ಮುಗಿಬೀಳುವುದಿಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನೆಲಮಂಗಲದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕಲ್ಲು ಹೊಡೆಯುವ ಸಂಸ್ಕೃತಿ ನಮ್ಮದಲ್ಲ, ಕಲ್ಲನ್ನೇ ವಿಗ್ರಹವನ್ನಾಗಿಸಿ ಪ್ರಾಣಪ್ರತಿಷ್ಠೆ ಮಾಡಿ ಪೂಜಿಸುವ ಪರಂಪರೆ ನಮ್ಮದು’ ಎಂದರು. ಇನ್ನು ‘ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವಕ್ಕೆ ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು, ಧ್ವನಿವರ್ಧಕ ಹಾಗೂ ಪಟಾಕಿಗೆ ನಿರ್ಬಂಧ ವಿಧಿಸುವುದು ಮತ್ತು ಬಾಂಡ್ ಬರೆಸಿಕೊಳ್ಳುವುದರ ಮೂಲಕ ಅನಗತ್ಯ ಕಿರಿಕಿರಿ ಉಂಟುಮಾಡಲಾಗುತ್ತಿದೆ. ಆಚರಣೆಯ ಹಿಂದಿನ ಉದ್ದೇಶವನ್ನು ಗೌರವಿಸಬೇಕು ಮತ್ತು ಅನಗತ್ಯ ನಿರ್ಬಂಧಗಳಿಂದ ಮುಕ್ತಗೊಳಿಸಬೇಕು’ ಎಂದು ಸರ್ಕಾರ ಎಚ್ಚರಿಕೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಂಜುನಾಥ ಎಚ್​. ವಿ.
ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More