ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಯತ್ನಕ್ಕೆ ಊಹಿಸದ ಅನ್ಯರ ಬೆಂಬಲವೂ ಸಿಗುವುದು ವಿಶೇಷ..
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಸೋಮವಾರದಂದು ಆಕರ್ಷಣೆಯಿಂದ ಸೋಲು, ಉದಾಸೀನತೆ, ಸಂಪಾದನೆ ಸುಗಮ, ದ್ವಂದ್ವ ನೀತಿ, ಅಪರಿಚಿತ ಜೊತೆ ಪ್ರಯಾಣ, ಸಾಹಿತ್ಯದಲ್ಲಿ ಆಸಕ್ತಿ, ಸಕಾಲಕ್ಕೆ ಸೌಲಭ್ಯ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ :
ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನೂತನ ವಸ್ತ್ರಾದಿಗಳು ಬಂಧುಗಳಿಂದ ನಿಮಗೆ ಸಿಗಲಿದೆ. ಕೆಲಸದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ದಾರಿ ಅಗಲವಿದೆ ಎಂದು ಹೇಗಾದರೂ ಹೋದರೆ ಬೀಳುವುದು ನೀವೇ. ಹಣಕಾಸಿನ ಹರಿವಿನಿಂದ ಸಂತೋಷವಾಗಲಿದೆ. ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದ ಒತ್ತಡವು ಅಧಿಕವಾಗಿ ಇರಲಿದೆ.
ವೃಷಭ ರಾಶಿ:
ಅಪರೂಪದ ದ್ರವ್ಯಗಳು ಸಿಗಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆದುದಕ್ಕೆ ಮನಸ್ಸು ನೆಮ್ಮದಿಯಿಂದ ಇರಲಿದೆ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು. ಆಗಿರುವ ನಕಾರಾತ್ಮಕತೆಯನ್ನು ಮರೆತು ಮುನ್ನಡೆಯುವಿರಿ. ನಿಮ್ಮ ಸಿದ್ಧಾಂತದ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು.
ಮಿಥುನ ರಾಶಿ:
ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಕುಟುಂಬದ ತೊಡಕನ್ನು ಸರಿಮಾಡಿ ಒಂದುಮಾಡುವ ಕಾರ್ಯವು ಸಫಲವಾಗುವುದು. ಅನಾರೋಗ್ಯ ಖರ್ಚಿಗೆ ಸೂಕ್ತ ಪರಿಹಾರ ಮಾಡಿಕೊಳ್ಳಬೇಕು. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ನೀವು ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ.
ಕರ್ಕಾಟಕ ರಾಶಿ:
ಒಂದು ಕಡೆ ಹಣದ ವ್ಯವಹಾರವನ್ನು ಮುಕ್ತಾಯ ಮಾಡಿದರೆ ಮತ್ತೊಂದು ಕಡೆಗೆ ತೆರೆದುಕೊಳ್ಳುವುದು. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುವಿರಿ. ಘಾಸಿಯಾದ ಅಂಗದ ರಕ್ಷಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ಸುಲಭವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಮನಸ್ಸನ್ನು ಹಂಚಿಕೊಳ್ಳಿ. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ.
ಸಿಂಹ ರಾಶಿ:
ಪರರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಸಾಮಾಜಿಕ ಗೌರವವು ನಿಮಗೆ ಸಿಗಲಿದ್ದು ಇದರಿಂದ ಅಹಂಕಾರವೂ ಬರಬಹುದು. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವುದು ಸರಿಯಾಗದು. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರಲಿದೆ. ಸಂಪತ್ತಿನ ಕಡೆ ಅಧಿಕವಾದ ಗಮನ ಇರಲಿದ್ದು ಸಂಬಂಧಗಳು ಸಡಿಲಾಗುವುದು. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿ. ನಿಮ್ಮವರಿಗಾಗಿ ಕೆಲವನ್ನು ಕಳೆದುಕೊಳ್ಳುವಿರಿ.
ಕನ್ಯಾ ರಾಶಿ:
ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆರ್ಥಿಕ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಒತ್ತಡಗಳನ್ನು ಮರೆತು ಒಂದೆಡೆ ಇರುವುದು ಸುಖವೆನಿಸುವುದು. ಹೆಚ್ಚಿನ ಒತ್ತಡವನ್ನು ಮಾಡಿಕೊಳ್ಳದೇ ಕೆಲಸವನ್ನು ಮುಗಿಸುವಿರಿ. ವಿದೇಶಪ್ರಯಾಣವನ್ನು ಹೆಚ್ಚು ಅನಂದದಿಂದ ಮಾಡುವಿರಿ. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಬಯಸುವುದಿಲ್ಲ. ವಾತಸಂಬಂಧಿ ಖಾಯಿಲೆಯು ಹೆಚ್ಚಾಗಬಹುದು.
ತುಲಾ ರಾಶಿ:
ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಸಹಾಯವು ಸಿಗಲಿದೆ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ದಾಂಪತ್ಯದಲ್ಲಿ ಕಲಹವಿರಲಿದ್ದು ಮುಂದುವರಿಸುವುದು ಬೇಡ. ಹಗುರವಾದುದನ್ನು ಎತ್ತುವುದು ಸುಲಭ. ಭಾರವಾದುದನ್ನು ಇಟ್ಟುಕೊಳ್ಳುವುದು ಸುಲಭ. ಸುಳ್ಳನ್ನು ಹೇಳುವುದು ಗೊತ್ತಾದೀತು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ.
ವೃಶ್ಚಿಕ ರಾಶಿ:
ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ದಾಂಪತ್ಯದಲ್ಲಿ ಪ್ರೀತಿಯು ಅಧಿಕವಾಗಿದ್ದು ಬಹಳ ಸಂತೋಷವನ್ನು ಅನುಭವಿಸುವಿರಿ. ಅಪರಿಚಿತರು ನಿಮ್ಮ ಮನೆಗೆ ಭೇಟಿಯಾಗಲಿದ್ದೀರಿ. ವೃತ್ತಿಯಲ್ಲಿ ನಿಮ್ಮ ಸಹಕಾರವು ಅಧಿಕವಾಗಿದ್ದು ಪ್ರಶಂಸೆಯು ಸಿಗಲಿದೆ. ಯಾರದೋ ಮಾತು ನಿಮಗೆ ಹಿಂಸೆಯನ್ನು ತರಬಹುದು. ಕಳೆದುಹೋದ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲಿದ್ದೀರಿ. ಆಪ್ತರ ಮೇಲೆ ಅಪನಂಬಿಕೆ ಇಟ್ಟು ಎಲ್ಲವೂ ಹಾಳಾಗುವುದು.
ಧನು ರಾಶಿ:
ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಾಡೆಯುವುದು. ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ. ನಿರಂತರ ಕೆಲಸವನ್ನು ಮಾಡದೇ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಎಲ್ಲ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮೇಲೆ ಸಿಟ್ಟುಗೊಳ್ಳಲಿದ್ದೀರಿ. ಸಂಗಾತಿಯು ನಿಮ್ಮನ್ನು ಬೆರಗುಗೊಳಿಸಬಹುದು. ದೂರದ ಬಂಧುಗಳ ಸಮಾಗಮವಾಗಬಹುದು.
ಮಕರ ರಾಶಿ:
ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ಕೋಪ ಅಲ್ಪಾವಧಿಯಾದರು ಅದು ಹೆಚ್ಚು ಸಮಯವನ್ನು ಹಾಳುಮಾಡುವುದು. ಪ್ರೇಮ ಸಂಬಂಧವು ಆಕರ್ಷಕವಾಗಿದ್ದರೂ ಬಹು ಕಾಲ ಉಳಿಯದು. ಇಂದು ನೀವು ಎದುರಾಳಿಯನ್ನು ಎದುರಿಸುವುದು ಕಷ್ಟವಾದೀತು. ಮಾತಗಳನ್ನು ಇಂದು ಕಡಿಮೆ ಆಡಲಿದ್ದೀರಿ. ಅನಧಿಕೃತ ಮಾಹಿತಿಯನ್ನು ಹಂಚಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ನಿಮ್ಮ ಮೇಲೆ ದೋಷಪೂರಿತ ಕಣ್ಣು ಬೀಳಬಹುದು.
ಕುಂಭ ರಾಶಿ:
ನಿಮ್ಮ ಇಂದಿನ ಸಮಯ ಹಾಗೂ ಶಕ್ತಿಯು ಇತರರಿಗೆ ಮೀಸಲಾದೀತು. ನಿಮಗೆ ಸಂಬಂಧಪಡದ ವಿಚಾರದಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಜೊತೆ ಇಂದು ಏನನ್ನೂ ಹಂಚಿಕೊಳ್ಳದೇ, ಅವರು ಇಂದು ನಿಮ್ಮ ಜೊತೆ ಜಗಳವಾಡಬಹುದು. ಆಯ್ಕೆಗಳೇ ಇಂದು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಹೊಸ ಯೋಜನೆಯನ್ನು ನೀವು ಇಂದು ಆರಂಭಿಸುವಿರಿ. ಬೆಂಬಲವು ಚೆನ್ನಾಗಿರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವಿರಿ. ಹಲವು ತೊಡಕುಗಳಿಂದ ನೀವು ಮುಕ್ತರಾಗಲು ಬಯಸುವಿರಿ.
ಮೀನ ರಾಶಿ:
ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ತಪ್ಪು ಕೆಲಸದಿಂದ ಅಧಿಕಾರಿಗಳು ಗದರಿಸುವರು. ಸೋತರೂ ಗೆದ್ದರೂ ಯಾರ ಜೊತೆಗೂ ಚರ್ಚೆಯನ್ನು ಮುಂದುವರಿಸುವುದು ಬೇಡ. ನಿಮ್ಮಿಂದ ಸ್ವಲ್ಪ ಉದಾಸೀನತೆಯೂ ಸಮಸ್ಯೆಯನ್ನು ಹೆಚ್ಚಾಗುವಂತೆ ಮಾಡುವುದು. ಆಗಬೇಕಾದ ಕೆಲಸಕ್ಕೆ ಇಂದಿನ ಸುತ್ತಾಟವು ವ್ಯರ್ಥವಾಗಲಿದೆ. ಮನೆಯ ನಿರ್ಮಾಣದ ಕಾರ್ಯವನ್ನು ಮಾಡುವುದು ಕಷ್ಟವಾಗಲಿದೆ. ಏಕಾಂತದಲ್ಲಿ ಇರಲು ಇಷ್ಟವಾಗುವುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಧ್ರುವ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 10 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:10, ಯಮಗಂಡ ಕಾಲ 10:40 – 12:10, ಗುಳಿಕ ಕಾಲ 13:40 – 15:10
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 am, Mon, 28 September 26




