AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ತಡಿಯ ಮರಳಿನ ಮೇಲೆ ಅಭ್ಯಾಸ ಮಾಡಿ ಬೆಳ್ಳಿ ಗೆದ್ದ ಆನ್ಸಿ ಸೋಜನ್..!

ಆನ್ಸಿ ಸೋಜನ್ ಏಷ್ಯನ್ ಗೇಮ್ಸ್ 2026 ಮಹಿಳಾ ಲಾಂಗ್ ಜಂಪ್‌ನಲ್ಲಿ 6.53 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು. ಕೇವಲ 2 ಸೆಂಟಿಮೀಟರ್ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡ ಆನ್ಸಿ, ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಇದು ಸತತ ಎರಡನೇ ಬೆಳ್ಳಿ ಪದಕವಾಗಿದ್ದು, ಕೇರಳದ ಬಡ ಕುಟುಂಬದಿಂದ ಬಂದ ಆನ್ಸಿ, ಕಠಿಣ ಪರಿಶ್ರಮದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅವರ ಸಾಧನೆ ಹಲವರಿಗೆ ಸ್ಫೂರ್ತಿ.

ಪೃಥ್ವಿಶಂಕರ
|

Updated on: Sep 27, 2026 | 7:15 PM

Share
 ಏಷ್ಯನ್ ಗೇಮ್ಸ್ 2026 ರ ಮಹಿಳೆಯರ ಲಾಂಗ್ ಜಂಪ್‌ನ ಫೈನಲ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಆನ್ಸಿ ಸೋಜನ್ 6.53 ಮೀಟರ್ ಉದ್ದ ಜಿಗಿದು ಬೆಳ್ಳಿ ಪದಕ ಗೆದ್ದರು. ಆದಾಗ್ಯೂ 0.02 ಮೀಟರ್ ಅಂದರೆ ಕೇವಲ 2 ಸೆಂಟಿಮೀಟರ್‌ಗಳ ಅಂತರದಿಂದ ಆನ್ಸಿ ಸೋಜನ್ ಚಿನ್ನದ ಪದಕದಿಂದ ವಂಚಿತರಾದರು(PC-PTI).

1 / 5
ಆನ್ಸಿ ಸೋಜನ್ ಮೊದಲ ಸುತ್ತಿನಿಂದಲೇ ಮುನ್ನಡೆಯಲ್ಲಿದ್ದರು, ಆದರೆ ಚೀನಾದ ಯಿಂಗ್ಯಿಂಗ್ ಹುವಾಂಗ್ ತನ್ನ ಕೊನೆಯ ಪ್ರಯತ್ನದಲ್ಲಿ 6.55 ಮೀಟರ್ ಜಿಗಿದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇನ್ನು ಚೀನಾದವರೇ ಆದ ಮೆಂಗಿ ಟಾನ್ 6.46 ಮೀಟರ್ ಜಿಗಿದು ಕಂಚಿನ ಪದಕ ಗೆದ್ದರು(PC-PTI).

2 / 5
ಇದು ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಸತತ ಎರಡನೇ ಬೆಳ್ಳಿ ಪದಕವಾಗಿದೆ. ಕಳೆದ ಬಾರಿಯೂ ಅವರು ಬೆಳ್ಳಿ ಪದಕ ಗೆದ್ದಿದ್ದರು. ಈಗ, ನಗೋಯಾದಲ್ಲಿ 6.53 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕ ಗೆಲ್ಲುವ ಮೂಲಕ, ಆನ್ಸಿ ಮತ್ತೊಮ್ಮೆ ಏಷ್ಯನ್ ಮಟ್ಟದಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಸಮರ್ಥ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಸಾಬೀತುಪಡಿಸಿದ್ದಾರೆ(PC-PTI).

3 / 5
ಮಾರ್ಚ್ 1, 2001 ರಂದು ಕೇರಳದ ತ್ರಿಶೂರ್ ಜಿಲ್ಲೆಯ ನಾಟಿಕಾ ಗ್ರಾಮದಲ್ಲಿ ಜನಿಸಿದ 25 ವರ್ಷದ ಆನ್ಸಿ ಸೋಜನ್ ಬಡ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ಕುಟುಂಬದ ನಿರ್ವಹಣೆಗಾಗಿ ಆಟೋರಿಕ್ಷಾ ಓಡಿಸುತ್ತಿದ್ದರು. ಬಡತನದಿಂದಾಗಿ ಆನ್ಸಿ ಸೋಜನ್​ಗೆ ಬಾಲ್ಯದಲ್ಲಿ ಸರಿಯಾದ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ(PC-PTI).

4 / 5
ಆದಾಗ್ಯೂ ಛಲ ಬಿಡದ ಆನ್ಸಿ ಸೋಜನ್, ತಮ್ಮ ಹಳ್ಳಿಯ ಸಮೀಪದಲ್ಲೇ ಇದ್ದ ಬೀಚ್‌ನ ಮರಳಿನ ಮೇಲೆ ಅಭ್ಯಾಸ ಮಾಡುವ ತನ್ನ ಆರಂಭಿಕ ಲಾಂಗ್ ಜಂಪ್ ತರಬೇತಿಯನ್ನು ಪೂರ್ಣಗೊಳಿಸಿದರು. ತನ್ನ ಅಥ್ಲೆಟಿಕ್ ಪ್ರತಿಭೆಯನ್ನು ಬಳಸಿಕೊಂಡು, ಅವರು 2014 ರಲ್ಲಿ ಕ್ರೀಡಾ ಕೋಟಾದ ಮೂಲಕ ಭಾರತೀಯ ನೌಕಾಪಡೆಗೆ ಸೇರಿದರು(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us