AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್: ಗುಳ್ಳೆನರಿಗೆ ಸಿಂಹದ ಕಿರೀಟ, ನಡೆಯಲಿಲ್ಲ ಕಾಗೆಯ ಆಟ

ಯಶಸ್ ಗುಳ್ಳೆ ನರಿಯಾಗಿ, ಪ್ರಶಾಂತ್ ಹೆಸರಿನ ಮುಂದೆ ಹಂಟರ್ ಎಂದು ಬರೆದು ಅವರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಟ್ಟರು. ಪ್ರಶಾಂತ್ ಹೆಸರನ್ನು ಬರೆದ ಗುಳ್ಳೆ ನರಿ ಯಾರೆಂದು ಇಡೀ ಮನೆಯವರೇ ಪ್ರಯತ್ನಿಸಿದರೂ ಹುಡುಕಲಾಗಲಿಲ್ಲ. ಯಶಸ್, ಅವರ ಜೊತೆಗೇ ಇದ್ದುಕೊಂಡು ಎಲ್ಲರ ದಿಕ್ಕು ತಪ್ಪಿಸಿ, ಪ್ರತಿಯೊಬ್ಬರಿಗೂ ಬೇರೊಬ್ಬರ ಮೇಲೆ ಅನುಮಾನ ಬರುವಂತೆ ಮಾಡಿದರು.

ಬಿಗ್​​ಬಾಸ್: ಗುಳ್ಳೆನರಿಗೆ ಸಿಂಹದ ಕಿರೀಟ, ನಡೆಯಲಿಲ್ಲ ಕಾಗೆಯ ಆಟ
Bigg Boss Kannada 13
ಮಂಜುನಾಥ ಸಿ.
|

Updated on: Nov 26, 2026 | 11:03 PM

Share

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಬುದ್ಧಿ ಉಪಯೋಗಿಸಿ ಆಡುವ ಟಾಸ್ಕ್​​ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಅದರಲ್ಲೂ ಗುಳ್ಳೆ ನರಿ, ಕಾಗೆಯ ಟಾಸ್ಕ್ ಅಂತೂ ಬಿಗ್​​ಬಾಸ್ ಸ್ಪರ್ಧಿಗಳ ಜೊತೆಗೆ ನೋಡುವ ಪ್ರೇಕ್ಷಕರಿಗೂ ಕಿಕ್ ಕೊಟ್ಟಿತು. ಮನೆಯ ಸ್ಪರ್ಧಿಗಳಲ್ಲಿ ಇರುವ ಗುಳ್ಳೆ ನರಿ ಮತ್ತು ಕಾಗೆಯನ್ನು ಕಂಡು ಹಿಡಿಯಬೇಕಿತ್ತು. ಜೊತೆಗೆ ಸಿಂಹದ ಪಾತ್ರವನ್ನು ಸಹ ಬಿಗ್​​ಬಾಸ್ ಮನೆಗೆ ತರಲಾಗಿ, ಕಾಗೆ ಮತ್ತು ನರಿಯನ್ನು ಹುಡುಕುವುದೇ ಸಿಂಹದ ಕೆಲಸ ಆಗಿತ್ತು. ಈ ಟಾಸ್ಕ್​​ನಲ್ಲಿ ಎರೆಡು ಬಾರಿ ಇಡೀ ಮನೆಯವರ ದಿಕ್ಕು ತಪ್ಪಿಸಿದ ಯಶಸ್ ಅದ್ಭುತವಾಗಿ ಆಡಿದರು.

ಯಶಸ್ ಗುಳ್ಳೆ ನರಿಯಾಗಿ, ಪ್ರಶಾಂತ್ ಹೆಸರಿನ ಮುಂದೆ ಹಂಟರ್ ಎಂದು ಬರೆದು ಅವರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಟ್ಟರು. ಪ್ರಶಾಂತ್ ಹೆಸರನ್ನು ಬರೆದ ಗುಳ್ಳೆ ನರಿ ಯಾರೆಂದು ಇಡೀ ಮನೆಯವರೇ ಪ್ರಯತ್ನಿಸಿದರೂ ಹುಡುಕಲಾಗಲಿಲ್ಲ. ಯಶಸ್, ಅವರ ಜೊತೆಗೇ ಇದ್ದುಕೊಂಡು ಎಲ್ಲರ ದಿಕ್ಕು ತಪ್ಪಿಸಿ, ಪ್ರತಿಯೊಬ್ಬರಿಗೂ ಬೇರೊಬ್ಬರ ಮೇಲೆ ಅನುಮಾನ ಬರುವಂತೆ ಮಾಡಿದರು.

ಬಳಿಕ ಗುಳ್ಳೆ ನರಿ ಆಗಿದ್ದುಕೊಂಡು ಸಹ ಸಿಂಹದ ಕಿರೀಟ ತಮಗೇ ಬರುವಂತೆ ಮಾಡಿಕೊಂಡರು. ಕಿರೀಟ ಬರುವುದರಲ್ಲಿ ಯಶಸ್​​ ಹೆಚ್ಚು ತಲೆ ಉಪಯೋಗಿಸಲಿಲ್ಲವಾದರೂ ಎದುರಾಳಿಗಳು ಮಾಡಿದ ಮೂರ್ಖ ನಿರ್ಣಯದಿಂದ ಸಿಂಹದ ಕಿರೀಟ ಯಶಸ್​​​ ಅವರಿಗೆ ಹೋಯ್ತು. ಸಿಂಹಕ್ಕೆ ನರಿ ಮತ್ತು ಕಾಗೆಯನ್ನು ಹುಡುಕುವ ಟಾಸ್ಕ್ ಅನ್ನು ಬಿಗ್​​ಬಾಸ್ ನೀಡಿದರು.

ಇದನ್ನೂ ಓದಿ:ಅತಿಥಿಯಾಗಿ ಬಿಗ್​​ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ

ತಾಂಡವ್ ಅವರು ಕಾಗೆ ಆಗಿದ್ದು, ಅವರು ಸೌಂದರ್ಯಾ ಗುಳ್ಳೆ ನರಿ ಆಗಿರಬಹುದು ಎಂಬ ಊಹೆಯಿಂದ ಅವರ ಕಾಫಿ ಕಪ್​​ ಮೇಲೆ ಸ್ಟಿಕ್ಕರ್ ಅಂಟಿಸಿದರು. ಆದರೆ ಆ ಸ್ಟಿಕ್ಕರ್ ಅಂಟಿಸಿದ ಕಾಗೆಯನ್ನು ಸಿಂಹ ಯಶಸ್ ಹುಡುಕಬೇಕಿತ್ತು. ತಾಂಡವ್ ಅನ್ನು ಕಪ್ಪುಗಳ ಬಳಿ ನೋಡಿದ್ದ ಗಾನವಿ, ಯಶಸ್​ಗೆ ತಾಂಡವ್ ಅವರೇ ಕಾಗೆ ಎಂಬ ದೊಡ್ಡ ಸುಳಿವು ನೀಡಿದರು. ಬಳಿಕ ಗಗನ್, ತಾಂಡವ್ ಅವರನ್ನು ಉಳಿಸಲು ಪ್ರಯತ್ನ ಮಾಡಿದರಾದರೂ ಯಶಸ್​​, ಗಗನ್ ಅವರ ನಾಟಕವನ್ನು ಸುಲಭವಾಗಿ ಗುರುತಿಸಿದರು ಕೊನೆಗೆ ತಾಂಡವ್ ಅವರೇ ಕಾಗೆ ಎಂಬುದನ್ನು ಎಲ್ಲರ ಮುಂದೆ ಹೇಳಿದರು. ಆದರೆ ಬಿಗ್​​ಬಾಸ್ ಸೂಚಿಸಿದಂತೆ, ನರಿ ತಾವೇ ಎಂಬುದನ್ನು ಯಶಸ್​​ ಹೇಳಿಲ್ಲ, ಬದಲಿಗೆ ಶಾಸ್ತ್ರಿಯ ಹೆಸರು ಹೇಳಿದ್ದಾರೆ. ವೀಕೆಂಡ್​​ನಲ್ಲಿ ಯಶಸ್​​ ಅವರೇ ನರಿ ಎಂಬುದು ಮನೆ ಮಂದಿಗೆ ತಿಳಿಯಲಿದೆ. ಒಟ್ಟಾರೆ ಟಾಸ್ಕ್​ ಅನ್ನು ಮನೆ ಮಂದಿಯ ಜೊತೆಗೆ ಪ್ರೇಕ್ಷಕರೂ ಎಂಜಾಯ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​